ಗಿಣಿರಾಮದಲ್ಲಿ ಮುಂದೆ ರೋಚಕ ಸಂಚಿಕೆಗಳು..!!
ಕನ್ನಡದ ಜನರ ಅಚ್ಚು ಮೆಚ್ಚಿನ ಧಾರವಾಹಿಗಳ ಪೈಕಿ ಒಂದಾದ ಗಿಣಿರಾಮ ಸೀರಿಯಲ್ ಕೆಲವು ರೋಚಕ ಸಂಚಿಕೆಗಳಿಗೆ ಸಜ್ಜಾಗುತ್ತಿದೆ. ಗಿಣಿರಾಮನ ಧಾರವಾಹಿಯ ಕೆಲವು ರೋಚಕ ಸಂಚಿಕೆಗಳನ್ನು ಚಿತ್ರೀಕರಿಸಲು ಟೀಮ್ ಸದಸ್ಯರು ಸೌದತ್ತಿಯವರೆಗೂ ಪ್ರಯಾಣಿಸಿದ್ದರು.
ಗಿಣಿರಾಮನ ಮುಂಬರುವ ಸಂಚಿಕೆಗಳು ವೀಕ್ಷಕರಿಗೆ ಬಹಳ ಥ್ರಿಲ್ ಗೊಳಿಸಲಿದೆ.. ಮುಂಬರುವ ಸಂಚಿಕೆಗಳಲ್ಲಿ ವೀಕ್ಷಕರನ್ನು ರಂಜಿಸಲು ಕೆಲವು ವಿಶೇಷ ಸಂಚಿಕೆಗಳಿಗೆ ತಯಾರಕರು ಸಜ್ಜಾಗುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಚಿತ್ರಗಳು ಹರಿದಾಡುತ್ತಿವೆ.
ಸಿಂಬು ಜೊತೆ ನೀರಜ್ ಮಾಧವ್ ಕಾಲಿವುಡ್ ವುಡ್ ಗೆ ಪಾದಾರ್ಪಣೆ
ನಯನಾ ಮತ್ತು ರಿಥ್ವಿಕ್ ಮಠದ್ ಅವರು ಸೌದತ್ತಿಯಲ್ಲಿ ತಮ್ಮ ಚಿತ್ರೀಕರಣದ ಚಿತ್ರಗಳನ್ನು ನಿರಂತರವಾಗಿ ಹಂಚಿಕೊಳ್ಳುತ್ತಿದ್ದಾರೆ. ಸೌದತ್ತಿಯ ಪ್ರಸಿದ್ಧ ‘ಯೆಲ್ಲಮ್ಮ’ ದೇವಸ್ಥಾನಕ್ಕೆ ಇತ್ತೀಚೆಗೆ ಭೇಟಿ ನೀಡಿದ ಚಿತ್ರಗಳನ್ನು ನಯನಾ ಹಂಚಿಕೊಂಡಿದ್ದಾರೆ.
ಗಿಣಿರಾಮನ ಕಥೆಯು ಪ್ರೇಮ-ದ್ವೇಷದ ಸಂಬಂಧದಲ್ಲಿರುವ ಶಿವರಾಮ್ ಮತ್ತು ಮಹತಿಯ ಕಥೆಯ ಸುತ್ತ ಸುತ್ತುತ್ತದೆ. ಶಿವರಾಮ್ ಮಹಾ ಕೋಪಿಷ್ಠ.. ಮಹತಿ ಸಿಹಿ ಮತ್ತು ಸರಳ ಹುಡುಗಿ. ರಿಥ್ವಿಕ್ ಮಠದ್ ಮತ್ತು ನಯನಾ ನಾಗರಾಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಈ ಧಾರವಾಹಿ ಇತ್ತೀಚೆಗೆ 400 ಸಂಚಿಕೆಗಳನ್ನು ಪೂರ್ಣಗೊಳಿಸಿದೆ. ಇದು TRP ಚಾರ್ಟ್ನಲ್ಲಿಯೂ ಉತ್ತಮ ರ್ಯಾಂಕ್ ನಲ್ಲಿದೆ.. ಸತತವಾಗಿ ಟಾಪ್ 10 ರ್ಯಾಂಕ್ ನಲ್ಲಿ ಉಳಿದಿದೆ. ಗಿಣಿರಾಮ ಮರಾಠಿಯ ಜೀವ್ ಝಲಾ ಯೆಡಾ ಪಿಸಾ ಶೋನ ರಿಮೇಕ್ ಎಂದು ಹೇಳಲಾಗುತ್ತದೆ.. ನಿರ್ಮಾಪಕರು ಅದೇ ಕಥಾಹಂದರವನ್ನು ಅಳವಡಿಸಿಕೊಂಡಿದ್ದರೂ, ಕನ್ನಡ ವೀಕ್ಷಕರ ನೇಟಿವಿಟಿಯನ್ನು ಪರಿಗಣಿಸಿ ಚಿತ್ರಕಥೆಯಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲಾಗಿದೆ.