ಕಾಂಟ್ರವರ್ಸಿ ಕ್ವೀನ್ ಕಂಗನಾ ರಣಾವತ್ ನಡೆಸಿಕೊಡ್ತಿರುವ ಒಟಿಟಿಯ ಡೇರಿಂಗ್ , ವಿವಾದಾತತ್ಮಕ ರಿಯಾಲಿಟಿ ಶೋನ ಲಾಕ್ ಅಪ್ ನಲ್ಲಿ ಇರೋರೆಲ್ಲಾ ವಿವಾದ ಪ್ರಿಯರೇ ಎಂದ್ರೆ ತಪ್ಪಾಗೋದಿಲ್ಲ..
ಇರೋರೆಲ್ಲಾ ಕಾಂಟ್ರವರ್ಸಿ ಮಾಡಿಕೊಂಡವರೇ.. ಅದ್ರಲ್ಲೂ ಪೂನಂ ಪಾಂಡೆ ಬಗ್ಗೆ ಹೇಳೋದೇ ಬೇಡ.. ಬೋಲ್ಡ್ ಆಗಿ ಕಾಣಿಸಿಕೊಳ್ತಾ , ಬೋಲ್ಡ್ ಹೇಳಿಕೆಗಳನ್ನ ನೀಡುತ್ತಾ ಸುದ್ದಿಯಲ್ಲಿದ್ದೋರೇ..
ಇದೀಗ ಈ ವಾರದ ಸಂಚಿಕೆಯಲ್ಲಿ ನಟ ಆಲಿ ಮರ್ಚೆಂಟ್ಗೆ ಪೂನಂ ಮಿಡಲ್ ಫಿಂಗರ್ ತೋರಿಸಿದ್ದಾರೆ. ಇಂದ್ರಿಂದ ಕೋಪಗೊಂಡ ಆಲಿ ಏಕೆ ನಿಮಗೆ ತುಂಬಾ ಹಸಿವಾಗಿದೆಯಾ ಎಂದು ಖಡಕ್ ಆಗಿ ಉತ್ತರ ಕೊಟ್ಟಿದ್ದಾನೆ.. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು , ಇಬ್ಬರನ್ನೂ ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗ್ತಿದೆ..
ಲಾಕ್ ಅಪ್ ಇತ್ತೀಚಿನ ಸಂಚಿಕೆಯಲ್ಲಿ ಪೂನಂ ಪಾಂಡೆ, ಅಂಜಲಿ ಅರೋರಾ ಮತ್ತು ಆಲಿ ನಡುವೆ ಗಲಾಟೆಯಾಗಿದೆ.. ಈ ವೇಳೆ ಪೂನಂ ಮತ್ತು ಅಂಜಲಿ ಯಾರೋ ನಮ್ಮ ಹೇರ್ ಡ್ರೈಯರ್ ಅನ್ನು ಕದ್ದಿದ್ದಾರೆ ಎಂದು ಸಿಟ್ಟಿಗೆದ್ದಿದ್ದರು. ಅದಕ್ಕೆ ಅವರು ಇಡೀ ಮನೆಯನ್ನು ಹುಡುಕುತ್ತ ಎಲ್ಲರನ್ನು ನಿಂದಿಸಲು ಪ್ರಾರಂಭಿಸಿದರು. ಈ ವೇಳೆ ಆಲಿ ಇವರ ಮಾತುಗಳನ್ನು ಕೇಳಿಸಿಕೊಂಡು ಮೊದಲು ಯಾವುದೇ ಪ್ರತಿಕ್ರಿಯಿ ಕೊಟ್ಟಿಲ್ಲ. ಅದಕ್ಕೆ ಇವರಿಬ್ಬರು ಆಲಿಯೇ ನಮ್ಮ ಹೇರ್ ಡ್ರೈಯರ್ ಬಚ್ಚಿಟ್ಟಿದ್ದಾನೆ ಎಂದು ಆರೋಪಿಸಿದರು..
ಪೂನಂ ಪಾಂಡೆ ಕೂಡ ಎಲ್ಲರನ್ನೂ ಅಶ್ಲೀಲ ಪದಗಳನ್ನು ಬಳಸಿ ನಿಂದಿಸುತ್ತಾರೆ. ಆಗ ಆಲಿಯನ್ನು ಕೇಳಿದಾಗ ನನಗೆ ಗೊತ್ತಿಲ್ಲ ಎಂದು ಸಮಾಧಾನವಾಗಿಯೇ ಉತ್ತರಿಸುತ್ತಾರೆ. ಇದರಿಂದ ಕೋಪಕೊಂಡ ಪೂನಂ ಮನೆಯಲ್ಲಿ ಇರುವವರೆಲ್ಲ ಕಳ್ಳರು ಎಂದು ಕೂಗುತ್ತಾ ನಂತರ ತನ್ನ ಮಧ್ಯದ ಬೆರಳನ್ನ ತೋರಿಸಿದ್ದಾರೆ.
Mande Becchha : ಮಂಡೆ ಬೆಚ್ಚ ತುಳು ಸಿನಿಮಾ ಮುಹೂರ್ತ..!!
ಇದರಿಂದ ಸಿಟ್ಟಿಗೆದ್ದ ಆಲಿ, ನನಗೆ ಮಿಡಲ್ ಫಿಂಗರ್ ತೋರಿಸಬೇಡ. ನಿನಗೆ ತುಂಬಾ ಹಸಿವಾಗಿರಬೇಕು. ಅದಕ್ಕಾಗಿಯೇ ಮಿಡಲ್ ಫಿಂಗರ್ ತೋರಿಸುತ್ತಿರುವೆ. ನೀನು ನನ್ನನ್ನು ನಿಂದಿಸುವ ಧೈರ್ಯ ಮಾಡಬೇಡ. ಯಾರು ತೆಗೆದುಕೊಂಡಿದ್ದಾರೆ ಅವರಿಗೆ ಹೇಳಿ ನನಗಲ್ಲ. ಎಲ್ಲರೂ ಕಳ್ಳರು ಎಂದು ಕಿರುಚಬೇಡ ಎಂದಿದ್ದಾರೆ.
ಆದರೂ ಸಹ ಪೂನಂ ಮತ್ತು ಅಂಜಲಿ ಪದೇ ಪದೇ ಆಲಿ ಬಗ್ಗೆ ಮಾತನಾಡುತ್ತಿದ್ದರು. ಮತ್ತೆ ಆಲಿ, ನನಗೆ ಮಿಡಲ್ ಫಿಂಗರ್ ತೋರಿಸಿದರೆ ನಿನ್ನ ತುಂಡು ತುಂಡಾಗಿ ಕತ್ತರಿಸುತ್ತೀನಿ ಎಂದು ಬೈದಿದ್ದಾನೆ.