RRR ರಾಜಮೌಳಿ ವಿರುದ್ಧ ಆಲಿಯಾಗೆ ಅಸಮಾಧಾನ – Instagram ನಲ್ಲಿ ಅನ್ ಫಾಲೋ
ನಿರ್ದೇಶಕನಾಗಿ SS ರಾಜಮೌಳಿ ಸೋಲಿಲ್ಲದ ಸರದಾರ ಅನ್ನೋದು ಈಗಾಗಲೇ ಪ್ರೂ ಆಗಿದೆ.. ಅವರು ಮಾಡಿರುವ ಅಷ್ಟೂ ಸಿನಿಮಾಗಳು ಬ್ಲಾಕ್ ಬಾಸ್ಟರ್ ,, ಸೂಪರ್ ಹಿಟ್. ಬಾಹುಬಲಿ ಸರಣಿಗಳು ಮತ್ತೆ RRR ಸಿನಿಮಾ ಬಗ್ಗೆ ಮಾತನಾಡೋದೇ ಬೇಡ..
ಈ ಸಿನಿಮಾಗಳು ನೆಕ್ಟ್ಸ್ ಲೆವೆಲ್.. RRR ಸಿನಿಮಾ ಮೂಲಕ ಆಲಿಯಾ ಸೌತ್ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ್ದಾರೆ. ಆದ್ರೆ ಇದೀಗ ತನಗೆ ಸೌತ್ ನಲ್ಲಿ ಮೊದಲ ಸಿನಿಮಾಗೆ ಚಾನ್ಸ್ ಕೊಟ್ಟ ರಾಜಮೌಳಿ ವಿರುದ್ಧ ಆಲಿಯಾ ಸಿಟ್ಟಾಗಿದ್ದಾರೆ ಎಂಬ ವದಂತಿ ಹರಿದಾಡ್ತಿದೆ..
ಮತ್ತೆ ಭಾರತದಲ್ಲಿ ಇತಿಹಾಸ ಸೃಷ್ಟಿಸಿದ ಕನ್ನಡದ KGF 2 – 24 ಗಂಟೆಯಲ್ಲಿ ಎಲ್ಲಾ ದಾಖಲೆಗಳು ಉಡೀಸ್..!!
ಹೌದು..! ದೇಶ ಹಾಗೂ ವಿದೇಶದಲ್ಲಿ ಬಾಕ್ಸ್ ಆಫೀಸ್ ಲೂಟಿ ಮಾಡುತ್ತಾ ಈಗಾಗಲೇ 500 ಕೋಟಿ ಗಲ್ಲಾ ಪೆಟ್ಟಿಗೆ ಸೇರಿರುವ RRR ಸಿನಿಮಾದಲ್ಲಿ ಆಲಿಯಾ ನಟಿಸಿದ್ದಾರೆ.. ಆದ್ರೆ ಅವರ ಸ್ಕ್ರೀನ್ ಟೈಮ್ ಅವರ ಹೆಸರಿಗಿಂತ ಚಿಕ್ಕದಾಗಿದೆ ಅಂದ್ರೂ ತಪ್ಪಾಗೋದಿಲ್ಲ.. ಅವರು ತುಂಬಾ ಕಡಿಮೆ ಸಮಯ ಸ್ಕ್ರೀನ್ ಮೇಲೆ ಕಾಣಿಸಿಕೊಳ್ತಾರೆ.. ಇದರಿಂದಲೇ ರಾಜಮೌಳಿ ವಿರುದ್ಧ ಕೋಪಗೊಂಡರಾ ಕ್ಯೂಟ್ ಬ್ಯೂಟಿ ಎಂಬ ಸುದ್ದಿ ಹರಿದಾಡ್ತಿದೆ..
ಅಲ್ಲದೇ ಆಲಿಯಾ ತಮ್ಮ ಇನ್ ಸ್ಟಾಗ್ರಾಂನಿಂದ RRR ಸಿನಿಮಾ ಕೆಲ ಪೋಸ್ಟ್ಗಳನ್ನೂ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.. ಜೊತೆಗೆ ಆಲಿಯಾ ಇನ್ ಸ್ಟಾಗ್ರಾಂನಲ್ಲಿ ರಾಜಮೌಳಿ ಅವರನ್ನೂ ಅನ್ ಫಾಲೋ ಮಾಡಿದ್ದಾರೆ ಎಂದೂ ವರದಿಯಾಗಿದೆ. ಜ್ಯೂ.ಎನ್ಟಿಆರ್ ಹಾಗೂ ರಾಮ್ ಚರಣ್ರನ್ನು ಆಲಿಯಾ ಫಾಲೋ ಮಾಡುತ್ತಿದ್ದಾರೆ. ಆದರೆ ಅವರು ಫಾಲೋ ಮಾಡ್ತಿರುವವರ ಪಟ್ಟಿಯಲ್ಲಿ ರಾಜಮೌಳಿ ಹೆಸರೇ ಇಲ್ಲದಿರುವುದು ಇಂತಹ ಅನುಮಾನಕ್ಕೆ ಕಾರಣವಾಗಿದೆ..