Vijay Devarakonda : ‘ಜನಗಣಮಣ’ ಸಿನಿಮಾದ ಟೈಟಲ್ ರಿವೀಲ್
ಪ್ರಸ್ತುತ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ನಲ್ಲಿ ಸೆನ್ಷೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಬ್ಯುಸಿ ಇದ್ದಾರೆ.. ಇದೇ ಸಿನಿಮಾಗೇ ಆಕ್ಷನ್ ಕಟ್ ಹೇಳಿರೋ ಪುರಿ ಜಗನ್ನಾಥ್ ಜೊತೆಗೆ ವಿಜಯ್ ದೇವರಕೊಂಡ ಮತ್ತೊಂದು ಸಿನಿಮಾ ಮಾಡ್ತಿದ್ದು , ‘ಜನಗಣಮನ’ ಸಿನಿಮಾದ ಟೈಟಲ್ ಆಗಿದೆ..
ಇದೀಗ ಈ ಸಿನಿಮಾದ ಟೈಟಲ್ ಇಂದು ರಿಲೀಸ್ ಆಗಿದ್ದು , ಫಸ್ಟ್ ಲುಕ್ ರಿಲೀಸ್ ದಿನಾಂಕವನ್ನೂ ಸಿನಿಮಾತಂಡವು ಪ್ರಕಟಿಸಿದೆ.. ಅಂದ್ಹಾಗೆ ಈ ಸಿನಿಮಾ ಆಗಸ್ಟ್ 3 2023ರಂದು ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ.. ಅಂದ್ಹಾಗೆ ಇದು ಪುರಿ ಜಗನ್ನಾಥ್ ಅವರ ಡ್ರೀಮ್ ಸಿನಿಮಾವಾಗಿದೆ..
ಮತ್ತೆ ಭಾರತದಲ್ಲಿ ಇತಿಹಾಸ ಸೃಷ್ಟಿಸಿದ ಕನ್ನಡದ KGF 2 – 24 ಗಂಟೆಯಲ್ಲಿ ಎಲ್ಲಾ ದಾಖಲೆಗಳು ಉಡೀಸ್..!!
ಜನ ಗಣ ಮನ ಚಿತ್ರವನ್ನು ಚಾರ್ಮಿ ಕೌರ್, ವಂಶಿ ಪೈಡಿಪಲ್ಲಿ ಮತ್ತು ಪುರಿ ಜಗನ್ನಾಥ್ ನಿರ್ಮಿಸಲಿದ್ದು, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನವನ್ನು ಪೂರಿ ಜಗನ್ನಾಥ್ ಅವರೇ ನಿರ್ವಹಿಸಲಿದ್ದಾರೆ.. ಇದು ಆಕ್ಷನ್ ಎಂಟರ್ಟೈನರ್ ಪ್ಯಾನ್-ಇಂಡಿಯಾ ಚಿತ್ರವಾಗಿದ್ದು, ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ನಿರ್ದೇಶಕ ಪುರಿ ಜಗನ್ನಾಥ್ ಅವರು ಸಿನಿಮಾದ ಬಗ್ಗೆ ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನ ಬಿಟ್ಟುಕೊಟ್ಟಿದ್ದಾರೆ. “ನಮ್ಮ ಮುಂದಿನ ಪ್ರಾಜೆಕ್ಟ್ ಜನಗನಮಣ ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ. ವಿಜಯ್ ಅವರೊಂದಿಗೆ ಮತ್ತೆ ಸಹಯೋಗಿಸಲು ಖುಷಿಯಾಗಿದೆ. ಇದೊಂದು ಆಕ್ಷನ್ ಎಂಟರ್ಟೈನರ್ ಸಿನಿಮಾ ಆಗಿದೆ ಎಂದಿದ್ದಾರೆ.
#JGM pic.twitter.com/YQ78NIyqcY
— Vijay Deverakonda (@TheDeverakonda) March 29, 2022