puneeth Rajkumar
‘ನಮ್ಮ ದೃಷ್ಟಿ ನಮ್ಮ ಕರ್ನಾಟಕ’ ಅರಿವು ಅಭಿಯಾನಕ್ಕೆ ಅಪ್ಪು ರಾಯಭಾರಿ..!!
ನೇತ್ರದಾನ ಅಂಗಾಗ ದಾನ ಮಾಡುವ ಮೂಲಕ ಅನೇಕರನ್ನ ಅವರದ್ದೇ ಹಾದಿಯಲ್ಲಿ ನಡೆಯುವಂತೆ ಪ್ರೇರೇಪಿಸಿ ಮಾದರಿಯಾಗಿದ್ದ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನ ಈಗ ‘ನಮ್ಮ ದೃಷ್ಟಿ ನಮ್ಮ ಕರ್ನಾಟಕ’ ಅರಿವು ಅಭಿಯಾನಕ್ಕೆ ರಾಯಭಾರಿಯನ್ನಾಗಿ ಮಾಡಲಾಗಿದೆ..
ಮಂಗಳವಾರ ಈ ವಿಷಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದಾರೆ. ಆರೋಗ್ಯ ಇಲಾಖೆ, ಡಾ.ರಾಜ್ ಕುಮಾರ್ ಟ್ರಸ್ಟ್ ಮತ್ತು ಎಸ್ಸಿರ್ಲಾ ವಿಷನ್ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿಎಂ ಬಸವರಾಜ್ ಬೊಮ್ಮಾಯಿ, ‘ನಮ್ಮ ದೃಷ್ಟಿ ನಮ್ಮ ಕರ್ನಾಟಕ’ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಭಾಗಿಯಾಗಿದ್ದರು. ಈ ಅಭಿಯಾನದ ಕುರಿತು ಸುದೀರ್ಘ ಟ್ವಿಟ್ ಮಾಡಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ‘ಇದು ಡಾ|| ಪುನೀತ್ ಅವರ ಸಾಮಾಜಿಕ ಕಳಕಳಿ, ಅವಕಾಶ ವಂಚಿತರಿಗೆ ದೃಷ್ಟಿಯನ್ನು ಕಲ್ಪಿಸುವ ಸಲುವಾಗಿ ಇದ್ದ ಬದ್ಧತೆ, ದೂರದೃಷ್ಠಿ ಹಾಗೂ ನಿಷ್ಠೆಗೆ ನಾವು ಸಲ್ಲಿಸುವ ಭಾವಪೂರ್ಣ ಗೌರವ. ಡಾ|| ರಾಜ್ಕುಮಾರ್ ಟ್ರಸ್ಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಎಸ್ಸಿಲಾರ್ ವಿಷನ್ ಪ್ರತಿಷ್ಠಾನ ಇವರ ಸಹಭಾಗಿತ್ವದಲ್ಲಿ ‘ನಮ್ಮ ದೃಷ್ಟಿ – ನಮ್ಮ ಕರ್ನಾಟಕ’ ಅರಿವು ಅಭಿಯಾನವನ್ನು ನಿನ್ನೆ ಕಾರ್ಯಾರಂಭ ಮಾಡಲಾಯಿತು’ ಎಂದು ಬರೆದುಕೊಂಡಿದ್ದಾರೆ.
puneeth Rajkumar