ಸ್ಯಾಂಡಲ್ ವುಡ್ ನಲ್ಲಿ ದರ್ಶನ್ ಅವರ ಶಾಸ್ತ್ರಿ ಸಿನಿಮಾ ಮೂಲಕ ಮಿಂಚಿದ್ದ ಮಾನ್ಯ , ತೆಲುಗು , ಕನ್ನಡ , ಮಲಯಾಳಂ ಸಿನಿಮಾಗಳಲ್ಲೂ ಮಿಂಚಿ ಸಿನಿಮಾರಂಗದಿಂದ ಮರೆಯಾಗಿದ್ದಾರೆ..
ಸದ್ಯ ಮಾನ್ಯ ಈಗ ಎಲ್ಲಿದ್ಧಾರೆ , ಹೇಗಿದ್ದಾರೆ ಎಂಬ ಪ್ರಶ್ನೆ , ಕುತೂಹಲ ಅನೇಕರಿಗಿದೆ.. ಅಂದ್ಹಾಗೆ ಮಾನ್ಯ ಅವರು ವಿವಾಹದ ನಂತರ ವಿದೇಶದಲ್ಲಿಯೇ ಸೆಟಲ್ ಆಗಿದ್ದಾರೆ..
ಆದ್ರೆ ಮಾನ್ಯ ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ.. ಮುದ್ದು ಮಗಳು ಒಮಿಷ್ಕಾ ಜೊತೆಗೆ ಆಗಾಗ ಫೋಟೋ ವಿಡಿಯೋಗಳನ್ನ ಹಂಚಿಕೊಳ್ಳುತ್ತಾ ಅಭಿಮಾನಿಗಳ ಜೊತೆಗೆ ಕನೆಕ್ಟ್ ಆಗಿದ್ದಾರೆ..
ಇತ್ತೀಚೆಗೆ ತಮ್ಮ ಇನ್ಸ್ಟಾದಲ್ಲಿ ವಿಡಿಯೋ ಶೇರ್ ಮಾಡಿಕೊಂಡಿರುವ ಮಾನ್ಯ ಅವರು ಮುದ್ದು ಮಗಳ ಜೊತೆಗೆ ಟ್ರೆಡಿಷನಲ್ ಆಗಿ ಕಾಣಿಸಿಕೊಂಡಿದ್ದು , ದರ್ಶನ್ ಅವರು ಕೊಟ್ಟಿದ್ದ ಗಿಫ್ಟ್ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರ ತಿಳಿಸಿದ್ಧಾರೆ.
ಹೌದು.. ಓಶ್ಮಿಕಾ ಹುಟ್ಟಿದಾಗ ಬೆಂಗಳೂರಿಗೆ ಹೋಗಿದ್ದ ಸಂದರ್ಭದಲ್ಲಿ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು ನೀಡಿದ್ದ ಪಾತ್ರೆಯನ್ನ ಕ್ಯಾಮೆರಾಗೆ ತೋರಿಸಿ ಈ ಗಿಫ್ಟ್ ಗೆ ತುಂಬಾ ಥ್ಯಾಂಕ್ಸ್ ಎಂದಿದ್ಧಾರೆ.. ಅವರ ಪುತ್ರಿ ಸಹ ಥ್ಯಾಂಕ್ಸ್ ಹೇಳಿ ಮುದ್ದು ಮುದ್ದಾಗಿ ವೀ ಲವ್ ಯು ಎಂದಿರುವುದು ದಾಸನ ಅಭಿಮಾನಿಗಳನ್ನ ಖುಷಿಪಡಿಸಿದೆ..
ಅಂದ್ಹಾಗೆ ಕನ್ನಡದಲ್ಲಿ ವರ್ಷ , ಶಾಸ್ತ್ರಿ , ಶಂಬು , ಬೆಳ್ಳಿ ಬೆಟ್ಟ , ಅಂಬಿ , ಸುಂಟರಗಾಳಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಮಾನ್ಯ 40 ಕ್ಕೂ ಹೆಚ್ಚು ಸೌತ್ ಸಿನಿಮಾಗಳಲ್ಲಿ ನಟಿಸಿದ್ದಾರೆ.