‘ಗೋಲ್ಡ್’ ಸಂಪೂರ್ಣ ಆಲ್ಫೋನ್ಸ್ ಪುತ್ರನ್ ಚಿತ್ರ – ಪೃಥ್ವಿರಾಜ್
ಸೇಫ್ ಝೋನ್ ನಲ್ಲಿ ಕೆರಿಯರ್ ಬಿಲ್ಡ್ ಮಾಡಲು ಇಷ್ಟಪಡದ ಯುವ ಮತ್ತು ಪ್ರತಿಭಾವಂತ ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್ ಅವರು ಮುಂಬರುವ ಚಿತ್ರ ‘ಗೋಲ್ಡ್’ ನಲ್ಲಿ ಬ್ಯುಸಿಯಿದ್ದು , ಈ ಸಿನಿಮಾಗೆ ನಿರ್ದೇಶಕ ಅಲ್ಫೋನ್ಸ್ ಪುತ್ರೆನ್ ಆಕ್ಷಷನ್ ಕಟ್ ಹೇಳ್ತಿದ್ಧಾರೆ..
ಇತ್ತೀಚೆಗೆ ಸಂದರ್ಶನವೊಂದ್ರಲ್ಲಿ ಸಿನಿಮಾ ಬಗ್ಗೆ ಮಾತನಾಡಿರುವ ಪೃಥ್ವಿರಾಜಜ್ ಸುಕುಮಾರ್ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಗೋಲ್ಡ್’ ಕುರಿತು ಕೆಲ ವಿಚಾರಗಳನ್ನ ಹಂಚಿಕೊಂಡಿದ್ದಾರೆ.. ಈ ಚಿತ್ರದಲ್ಲಿ ಆಲ್ಫೋನ್ಸ್ ಪುತ್ರನ್ ಚಿತ್ರದಿಂದ ನಿರೀಕ್ಷಿಸಬಹುದಾದ ಎಲ್ಲಾ ಅಂಶಗಳನ್ನು ಹೊಂದಿದೆ ಎಂದು ಹೇಳಿದರು.
ಸಂದರ್ಶನದ ವೇಳೆ, ಪೃಥ್ವಿರಾಜ್ ಸುಕುಮಾರನ್ ಅವರು ತಮ್ಮ ನೆಚ್ಚಿನ ನಿರ್ದೇಶಕ ಅಲ್ಫೋನ್ಸ್ ಪುತ್ರನ್ ‘ಗೋಲ್ಡ್’ ಚಿತ್ರದ ಮೂಲಕ ಸುದೀರ್ಘ ಗ್ಯಾಪ್ ನಂತರ ಕಮ್ ಬ್ಯಾಕ್ ಮಾಡುಉತ್ತಿರೋದನ್ನ ನೋಡಲು ಬಹಳ ಸಂತೋಷವಾಗಿದೆ ಎಂದು ಹೇಳಿದ್ಧಾರೆ. ಅಲ್ಲದೇ ‘ಗೋಲ್ಡ್’ಸಂಪೂರ್ಣ ಆಲ್ಫೋನ್ಸ್ ಪುತ್ರನ್ ಚಿತ್ರ ಎಂದು ನಾನು ಹೇಳಬಲ್ಲೆ. ‘ಗೋಲ್ಡ್’ ಚಿತ್ರಕ್ಕೆ ನನ್ನನ್ನು ಆಕರ್ಷಿಸಲು ಆಲ್ಫೋನ್ಸ್ ಪುತ್ರೇನ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಎಂಬ ಅಂಶವೂ ಕಾರಣ ಎಂದಿದ್ಧಾರೆ..
‘ಗೋಲ್ಡ್’ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರು ಜೋಶಿ ಎಸ್ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ.
ಶಮ್ಮಿ ತಿಲಕನ್, ಮಲ್ಲಿಕಾ ಸುಕುಮಾರನ್, ಶಾಂತಿ ಕೃಷ್ಣ, ವಿನಯ್ ಫೋರ್ಟ್, ಅಲ್ತಾಫ್ ಸಲೀಂ, ಸಾಬುಮೋನ್, ಚೆಂಬನ್ ವಿನೋದ್ ಜೋಸ್, ಬಾಬುರಾಜ್ ಬಣ್ಣ ಹಚ್ಚಿದ್ದಾರೆ..