RGV ಲೆಸ್ಬಿಯನ್ ಸಿನಿಮಾ ರಿಲೀಸ್ ಪೋಸ್ಟ್ ಪೋನ್
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಯಾರು ಏನು ಅಂದ್ರೂ ತಲೆ ಕಡೆಸಿಕೊಳ್ಳದ ರಾಮ್ ಗೋಪಾಲ್ ವರ್ಮಾ ಒಂದು ರೀತಿಯಾಗಿ ಸೋಲೋ ಮ್ಯಾನ್ ಇದ್ದಂತೆ.
ತಮಗೆ ಇಷ್ಟವಾಗಿದ್ದನ್ನೇ ಮಾಡುತ್ತಾ ಸುದ್ದಿಯಾಗುತ್ತಲೇ ಇರುತ್ತಾರೆ. ಆತ ಮಾಡುವ ಟ್ವೀಟ್ ಎಷ್ಟೋ ಜನರ ನಿದ್ರೆ ಕದಿಯುತ್ತೆ… ಮಾಡೆಲ್ಗಳ ಜತೆ ಬಾರ್ ನಲ್ಲಿ ಪಾರ್ಟಿ ಮಾಡುವುದು ಮತ್ತು ತಮ್ಮದೇ ಸಿನಿಮಾಗಳಲ್ಲಿ ನಟಿಸಿರುವ ನಟಿಯರ ಜತೆ ಪಬ್ ಗಳಲ್ಲಿ ತಮ್ಮಿಷ್ಟ ಬಂದಂತೆ ಇರೋದು.. ಟ್ರೋಲ್ ಆಗೋದು ಇದೆಲ್ಲಾ ಅವರಿಗೆ ಅಭ್ಯಾಸ ಹಾಗೂ ಹವ್ಯಾಸವೂ ಆಗಿಬಿಟ್ಟಿದೆ..
ಪ್ರತಿ ವಿಚಾರದಲ್ಲೂ ಕಾಂಟ್ರವರ್ಸಿ ಮಾಡಿಕೊಳ್ತಾ , ಪ್ರತಿ ವಿಚಾರದಲ್ಲೂ ನೆಗೆಟಿವ್ ಆಗಿಯೇ ಮಾತನಾಡ್ತಾ ,,, ವಿವಾದಗಳನ್ನೇ ಪ್ರೀತಿಸುವ , ಕಾಂಟ್ರವರ್ಸಿ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಅವರು ಇದೀಗ PVRcinemas ಮತ್ತು @INOXCINEMAS ವಿರುದ್ಧ ಆಕ್ರೋಶ ಹೊರಹಾಕಿದ್ದು , ಮಾನವ ಹಕ್ಕುಗಳ ಉಲ್ಲಂಘಿಸಿರುವ ಆರೋಪ ಮಾಡಿದ್ದರು..
ರಾಮ್ ಗೋಪಾಲ್ ವರ್ಮಾ ಪ್ರಸ್ತುತ ಖತ್ರಾ (ಡೇಂಜರಸ್) ಚಿತ್ರ ಬಿಡುಗಡೆಗೆ ಸಜ್ಜಾಗಿತ್ತು.. ಸಿನಿಮಾ ಇಂದು ( ಏಪ್ರಿಲ್ 8 ) ಥಿಯೇಟರಿಕಲ್ ರಿಲೀಸ್ ಆಗಬೇಕಿತ್ತು.. ಆದ್ರೆ ಅನಿರ್ಧಿಷ್ಟಾವಧಿಗೆ ರಿಲೀಸ್ ದಿನಾಂಕವನ್ನ ರಾಮ್ ಗೋಪಾಲ್ ವರ್ಮಾ ಅವರು ಮುಂದೂಡಿದ್ದಾರೆ..
ಅಂದ್ಹಾಗೆ ಇದು ಭಾರತದ ಮೊದಲ ಲೆಸ್ಬಿಯನ್ ಸಿನಿಮಾವಾಗಿದೆ..
‘ಡೇಂಜರಸ್’ ಸಿನಿಮಾವನ್ನು ಪ್ರದರ್ಶನ ಮಾಡುವುದಿಲ್ಲ ಎಂದು ಹಲವು ಚಿತ್ರಮಂದಿರ ಮಾಲೀಕರು ಪ್ರತಿರೋಧ ವ್ಯಕ್ತಿಪಡಿಸಿದ್ದು, ಈ ಕಾರಣಕ್ಕಾಗಿ ರಾಮ್ ಗೋಪಾಲ್ ವರ್ಮಾ, ತಮ್ಮ ಸಿನಿಮಾ ಬಿಡುಗಡೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ.
ಈ ಸಿನಿಮಾದಲ್ಲಿ ಇಬ್ಬರು ಯುವತಿಯರು ಪರಸ್ಪರ ಪ್ರೇಮಿಸುವ, ಅವರಿಗೆ ವಿಲನ್ಗಳಿಂದ ಸಮಸ್ಯೆ ಆಗುವ ವಿಲನ್ಗಳನ್ನು ಎದುರಿಸಿ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳುವ ಕತೆ ಇದೆ. ಇಬ್ಬರು ನಾಯಕಿಯರ ನಡುವೆ ರೋಮ್ಯಾನ್ಸ್ ದೃಶ್ಯಗಳು ಇವೆ. ಹೀಗಾಗಿ ಅನೇಕ ಸಿನಿಮಾ ಪ್ರದರ್ಶಕರು ಸಿನಿಮಾ ರಿಲೀಸ್ ಗೆ ನಿರಾಕರಿಸಿದ್ದು ಇದು ರಾಮ್ ಗೋಪಾಲ್ ವರ್ಮಾ ಅವರ ಕಣ್ಣು ಕೆಂಪಾಗಿಸಿದೆ.
ಈ ಬಗ್ಗೆ ವಿಡಿಯೋ ಪ್ರಕಟಿಸಿರುವ ವರ್ಮಾ ಅವರು “ಸುಪ್ರಿಂಕೋರ್ಟ್ ಸಲಿಂಗ ಪ್ರೇಮ ಅಪರಾಧವಲ್ಲ ಎಂದು ತೀರ್ಪು ಬಂದ ಮೇಲೆ ಲೆಸ್ಬಿಯನ್ಸ್ ಕುರಿತ ಸಿನಿಮಾ ಮಾಡುವ ಆಲೋಚನೆ ನನಗೆ ಬಂದಿತು. ನನಗಿಂತಲೂ ಮುಂಚೆ ಹಲವರು ಲೆಸ್ಬಿಯನ್ಸ್ಗಳ ಬಗ್ಗೆ ಸಿನಿಮಾ ಮಾಡಿದ್ದಾರೆ. ಆದರೆ ಅವೆಲ್ಲ ಶಕ್ತಿಹೀನರೆಂದು, ಪಾಪದವರೆಂಬಂತೆಯೂ ಚಿತ್ರಿಸಿದ್ದಾರೆ. ಆದರೆ ನಾನು ಅವರನ್ನು ಫವರ್ ಫುಲ್ ವ್ಯಕ್ತಿಗಳಾಗಿ ಚಿತ್ರಿಸಿ, ಸಮಾಜ ಲೆಸ್ಬಿಯನ್ಸ್ಗಳ ಕುರಿತು ಹೆಚ್ಚು ಸಹಿಷ್ಣುವಾಗಲಿ ಎಂದು ಮಸಾಲೆ ಸಿನಿಮಾದಲ್ಲಿ ಇರಬಹುದಾದ ಕತೆಯನ್ನೇ ಇಟ್ಟುಕೊಂಡು, ನಾಯಕ-ನಾಯಕಿ ಬದಲಿಗೆ ನಾಯಕಿ-ನಾಯಕಿ ಇಟ್ಟುಕೊಂಡಿದ್ದೇನೆ. ನಾನು ಏನೋ ತೋರಿಸಬಾರದುದ್ದನ್ನು ತೋರಿಸಲು ಹೊರಟಿದ್ದೇನೆ ಎಂಬಂತೆ ಚಿತ್ರಮಂದಿರಗಳು ನಮ್ಮ ಸಿನಿಮಾವನ್ನು ಪ್ರದರ್ಶಿಸುವುದಿಲ್ಲ ಎಂದಿದ್ದಾರೆ.
ಆದರೆ ನಾವು ಇದರ ವಿರುದ್ಧ ಹೊರಾಡಲಿದ್ದೇವೆ. ನಮ್ಮ ಸಿನಿಮಾ ಪ್ರದರ್ಶನಗೊಳ್ಳುವಂತೆ ಮಾಡಲು ಅಗತ್ಯ ಕಾನೂನು ಹೋರಾಟಕ್ಕೆ ನಾವು ಮುಂದಾಗಿದ್ದೇವೆ. ಈಗಾಗಲೇ ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ನಮ್ಮ ಸಿನಿಮಾ ಚಿತ್ರಮಂದಿರಗಳಲ್ಲಿಯೇ ಬಿಡುಗಡೆ ಆಗಲಿದೆ” ಎಂದಿದ್ದಾರೆ.