ದುನಿಯಾ ವಿಜಯ್ ನಿರ್ದೇಶನದ ಎರಡನೇ ಸಿನಿಮಾ ‘ಭೀಮ’ ಮುಹೂರ್ತಕ್ಕೆ ದಿನಾಂಕ ಫಿಕ್ಸ್
ಸಲಗ ಸಿನಿಮಾದ ಮೂಲಕ ಮೊದಲ ಬಾರಿಗೆ ನಿರ್ದೇಶಕನಾಗಿ ಸಕ್ಸಸ್ ಕಂಡ ದುನಿಯಾ ವಿಜಯ್ ಸದ್ಯ ಟಾಲಿವುಡ್ ನಲ್ಲಿ ನಂದ ಮುರಿ ಬಾಲಕೃಷ್ಣ ಅವರ ಸಿನಿಮಾದಲ್ಲಿ ವಿಲ್ಲನ್ ಆಗಿ ಬಣ್ಣ ಹಚ್ಚುತ್ತಿದ್ದು ಇದು ಸಹ ಅವರ ಹೊಸ ಪ್ರಯತ್ನವಾಗಿದೆ.. ಇದು ಟಾಲಿವುಡ್ ನಲ್ಲಿ ಅವರಿಗೆ ಚೊಚ್ಚಲ ಸಿನಿಮಾವಾಗಿದೆ…
ಅಂದ್ಹಾಗೆ ಇದೀಗ ದುನಿಯಾ ವಿಜಯ್ ಅವರ ನಿರ್ದೇಶನದ ಎರಡನೇ ಸಿನಿಮಾ ಶೀಘ್ರವೇ ಸೆಟ್ಟೇರಲಿದೆ..
ದುನಿಯಾ ವಿಜಯ್ ನಿರ್ದೇಶನದ ‘ಭೀಮ’ ಸಿನಿಮಾದ ಮುಹೂರ್ಯ ಏಪ್ರಿಲ್ 18ಕ್ಕೆ ನೆರವೇರಲಿದೆ..
ಚಿತ್ರದ ಪೋಸ್ಟರ್ ಮತ್ತು ಟೈಟಲ್ ಲಾಂಚ್ ಅನ್ನು ವಿಭಿನ್ನವಾಗಿ ಮಾಡಲಾಗಿದೆ.. ಬೆಂಗಳೂರಿನ ಬಂಡೆ ಮಾಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆಯಲಿದೆ. ಅಂದ್ಹಾಗೆ ಅವರ ಮೊದಲ ನಿರ್ದೇಶನದ ಸಲಗ ಸಿನಿಮಾಗೂ ಇಲ್ಲಿಯೇ ಮುಹೂರ್ತ ನಡೆದಿತ್ತು.