The Kashmir Files ನಿರ್ದೇಶಕರು ಈಗ “ದೆಹಲಿ ಫೈಲ್ಸ್” ನಲ್ಲಿ ಬ್ಯುಸಿ..!!!
The Kashmir Files ಸಿನಿಮಾ ಇತ್ತೀಚೆಗೆ ದೇಶಾದ್ಯಂತ ಸಂಚಲನವನ್ನೇ ಸೃಷ್ಟಿಸಿದ ಸಿನಿಮಾ ಅಂದ್ರೂ ತಪ್ಪಾಗೋದಿಲ್ಲ.. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ.. ದಿ ಕಾಶ್ಮೀರ್ ಫೈಲ್ಸ್ 300 ಕೋಟಿ ರೂ ಗಡಿ ದಾಟಿದೆ..
ಈ ಸಿನಿಮಾಗೆ ಹಾಗೂ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ.. ಸಿನಿಮಾಗೆ ಪರ ಅಷ್ಟೇ ಅಲ್ದೇ ವಿರೋಧಿ ಅಲೆಯೂ ಎದ್ದಿದ್ದು , ರಾಜಕೀಯವಾಗಿ ಚರ್ಚಾ ವಿಚಾರವೂ ಆಗಿತ್ತು..
ಮಾರ್ಚ್ 11 ರಂದು ಬಿಡುಗಡೆಯಾದ ಈ ಸಿನಿಮಾಗೆ ದೇಶಾದ್ಯಂತ ಥಿಯೇಟರ್ ಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.
ಸಾಧಾರಣ ಬಜೆಟ್‌ನಲ್ಲಿ ತಯಾರಿಸಲಾದ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಪ್ಯಾಂಡೆಮಿಕ್ ನಂತರ ದೊಡ್ಡ ಮಟ್ಟದಲ್ಲಿ ಅಬ್ಬರಿಸಿದೆ.. ಈ ವರ್ಷದ ಅತಿ ಹೆಚ್ಚು ಗಳಿಕೆಯ ಸಿನಿಮಾಗಳಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಹ ಒಂದು…
ಇದೀಗ ವಿವೇಕ್ ಅಗ್ನಿಹೋತ್ರಿ ಅವರು ಮತ್ತೊಂದು ಇಂತಹದ್ದೇ ಸಿನಿಮಾ ಮಾಡಲು ಹೊರಟಿದ್ದಾರೆ. ‘ಡೆಲ್ಲಿ ಫೈಲ್ಸ್’ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ.. ಈ ಮೊದಲು ನಿರ್ದೇಶಿಸಿದ್ದ ತಾಷ್ಕೆಂಟ್ ಫೈಲ್ಸ್’ ಮೂಲಕ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಸಾವಿನ ರಹಸ್ಯವನ್ನು ಬೇಧಿಸಿದ್ದ ವಿವೇಕ್ ಅಗ್ನಿಹೋತ್ರಿ ‘ದಿ ಕಾಶ್ಮೀರ್ ಫೈಲ್ಸ್’ ನಲ್ಲಿ ಕಾಶ್ಮೀರ ಪಂಡಿತರ ನರಮೇಧದ ಹಿಂದಿನ ಸತ್ಯವನ್ನು ಬಯಲಿಗೆಳೆದಿದ್ದರು.
ಇದೇ ರೀತಿಯಾಗಿ ‘ಡೆಲ್ಲಿ ಫೈಲ್ಸ್’ ಮೂಲಕ ಬದುಕುವ ಹಕ್ಕಿನ ಕುರಿತಾಗಿ ಸಿನಿಮಾ ಮಾಡುತ್ತಿದ್ದಾರೆ. ಆದರೆ, ಇದು ಯಾವ ಘಟನೆಯನ್ನು ಆಧರಿಸಿದ ಸಿನಿಮಾ ಎಂದು ಈವರೆಗೂ ಅವರು ಹೇಳಿಕೊಂಡಿಲ್ಲ.
ತಮ್ಮ ಡೆಲ್ಲಿ ಫೈಲ್ಸ್ ಸಿನಿಮಾಗೆ ‘ರೈಟ್ ಟು ಲೈಫ್’ ಎಂದು ಟ್ಯಾಗ್ ಲೈನ್ ನೀಡಿದ್ದು, ಜೀವಿಸುವ ಹಕ್ಕಿನ ಕಥೆಯನ್ನು ಇದು ಹೇಳಲಿದೆ ಎಂದು ಊಹಿಸಿಕೊಳ್ಳಬಹುದು. ಈಗಾಗಲೇ ಸ್ಕ್ರಿಪ್ಟ್ ಕೆಲಸ ಮುಗಿದಿದ್ದು, ಅತೀ ಶೀಘ್ರದಲ್ಲೇ ಸಿನಿಮಾದ ಶೂಟಿಂಗ್ ಕೂಡ ಶುರು ಮಾಡಲಿದ್ದಾರೆ. ಇದು ಹಿಂದಿ ಮತ್ತು ಪಂಜಾಬಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಲಿದೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಗೆಲ್ಲಿಸಿದ ಜನತೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.