The kashmir files : ‘Dehli Files’ ಯಾವ ಸತ್ಯ ಘಟನೆಯಾಧಾರಿತ : ವಿವೇಕ್ ಅಗ್ನಿಹೋತ್ರಿ ಬಿಚ್ಚಿಟ್ಟ ಕಥೆಯೇನು..??
The Kashmir Files ಸಿನಿಮಾ ಇತ್ತೀಚೆಗೆ ದೇಶಾದ್ಯಂತ ಸಂಚಲನವನ್ನೇ ಸೃಷ್ಟಿಸಿದ ಸಿನಿಮಾ ಅಂದ್ರೂ ತಪ್ಪಾಗೋದಿಲ್ಲ.. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ.. ದಿ ಕಾಶ್ಮೀರ್ ಫೈಲ್ಸ್ 300 ಕೋಟಿ ರೂ ಗಡಿ ದಾಟಿದೆ..
ಈ ಸಿನಿಮಾಗೆ ಹಾಗೂ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ.. ಸಿನಿಮಾಗೆ ಪರ ಅಷ್ಟೇ ಅಲ್ದೇ ವಿರೋಧಿ ಅಲೆಯೂ ಎದ್ದಿದ್ದು , ರಾಜಕೀಯವಾಗಿ ಚರ್ಚಾ ವಿಚಾರವೂ ಆಗಿತ್ತು..
ಮಾರ್ಚ್ 11 ರಂದು ಬಿಡುಗಡೆಯಾದ ಈ ಸಿನಿಮಾಗೆ ದೇಶಾದ್ಯಂತ ಥಿಯೇಟರ್ ಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.
ವಿವೇಕ್ ಅಗ್ನಿಹೋತ್ರಿ ಅವರು ಮತ್ತೊಂದು ಇಂತಹದ್ದೇ ಸಿನಿಮಾ ಮಾಡಲು ಹೊರಟಿದ್ದಾರೆ. ‘ಡೆಲ್ಲಿ ಫೈಲ್ಸ್’ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ.. ಈ ಮೊದಲು ನಿರ್ದೇಶಿಸಿದ್ದ ತಾಷ್ಕೆಂಟ್ ಫೈಲ್ಸ್’ ಮೂಲಕ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಸಾವಿನ ರಹಸ್ಯವನ್ನು ಬೇಧಿಸಿದ್ದ ವಿವೇಕ್ ಅಗ್ನಿಹೋತ್ರಿ ‘ದಿ ಕಾಶ್ಮೀರ್ ಫೈಲ್ಸ್’ ನಲ್ಲಿ ಕಾಶ್ಮೀರ ಪಂಡಿತರ ನರಮೇಧದ ಹಿಂದಿನ ಸತ್ಯವನ್ನು ಬಯಲಿಗೆಳೆದಿದ್ದರು.
ಇದೇ ರೀತಿಯಾಗಿ ‘ಡೆಲ್ಲಿ ಫೈಲ್ಸ್’ ಮೂಲಕ ಬದುಕುವ ಹಕ್ಕಿನ ಕುರಿತಾಗಿ ಸಿನಿಮಾ ಮಾಡುತ್ತಿದ್ದಾರೆ. ಆದರೆ, ಇದು ಯಾವ ಘಟನೆಯನ್ನು ಆಧರಿಸಿದ ಸಿನಿಮಾ ಎಂದು ಈವರೆಗೂ ಅವರು ಹೇಳಿಕೊಂಡಿರಲಿಲ್ಲ… ಆದ್ರೀಗ ಕಥೆಯ ಬಗ್ಗೆ ಒಂದಷ್ಟಯ ಮಾಹಿತಿ ಬಿಟ್ಟುಕೊಟ್ಟಿದ್ದಾರೆ..
ಈ ಬಾರಿ ಆಯ್ಕೆ ಮಾಡಿಕೊಂಡ ವಿಷಯವು 1984ರಲ್ಲಿ ನಡೆದ ನೈಜ ಘಟನೆಯನ್ನೇ ಆಧರಿಸಿದೆಯಂತೆ. ಆ ಸಮಯದ ಸತ್ಯವೇ ಬೇರೆಯಿದೆ. ಅದನ್ನು ಈ ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದಾರಂತೆ. ದೆಹಲಿಯಷ್ಟೇ ಅಲ್ಲ, ತಮಿಳು ನಾಡಿಗೆ ಸಂಬಂಧಿಸಿದ ಒಂದಷ್ಟು ಸತ್ಯಗಳನ್ನೂ ಈ ಸಿನಿಮಾದಲ್ಲಿ ತೋರಿಸಲಿದ್ದಾರಂತೆ.
ನಾವು ಸತ್ಯವನ್ನು ಮಾತನಾಡಿದಾಗ ಎಲ್ಲರೂ ಅದನ್ನು ಒಪ್ಪಿಕೊಳ್ಳುತ್ತಾರೆ. ಸರಕಾರಗಳು ಕೂಡ ತಲೆಬಾಗುತ್ತವೆ. ಈಗ ಮತ್ತೊಂದು ಸತ್ಯ ದರ್ಶನಕ್ಕಾಗಿ ಸಿನಿಮಾ ಮಾಡುತ್ತಿರುವೆ. ಇಷ್ಟು ವರ್ಷಗಳಿಂದ ದೆಹಲಿ ಭಾರತವನ್ನು ಹೇಗೆ ನಾಶ ಮಾಡುತ್ತಿದೆ ಎನ್ನುವ ಕುತೂಹಲದ ಅಂಶಗಳು ಕೂಡ ಇವೆ ಎಂದು ಮಾಧ್ಯಮಗಳ ಜತೆ ಮಾತನಾಡಿದ್ದಾರೆ.
ದೆಹಲಿಯನ್ನು ಯಾರೆಲ್ಲ ಆಳಿದರು, ಏನೆಲ್ಲ ಮಾಡಿದರು. ದೆಹಲಿ ಚರಿತ್ರೆಯಲ್ಲಿ ಉಳಿದುಕೊಂಡಿರುವ ಕಪ್ಪು ಚುಕ್ಕೆಯನ್ನೇ ಈ ಬಾರಿ ಬೆಳ್ಳಿ ಪರದೆಯ ಮೇಲೆ ತೋರಿಸುವ ಪ್ರಯತ್ನ ನಡೆಯಲಿದೆಯಂತೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಮುಗಿದಿದ್ದು ಅತೀ ಶೀಘ್ರದಲ್ಲೇ ತಾರಾಗಣವನ್ನೂ ಆಯ್ಕೆ ಮಾಡಿಕೊಳ್ಳಲಿದ್ದಾರಂತೆ
ಸಾಧಾರಣ ಬಜೆಟ್‌ನಲ್ಲಿ ತಯಾರಿಸಲಾದ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಪ್ಯಾಂಡೆಮಿಕ್ ನಂತರ ದೊಡ್ಡ ಮಟ್ಟದಲ್ಲಿ ಅಬ್ಬರಿಸಿದೆ.. ಈ ವರ್ಷದ ಅತಿ ಹೆಚ್ಚು ಗಳಿಕೆಯ ಸಿನಿಮಾಗಳಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಹ ಒಂದು…
ಅಂದ್ಹಾಗೆ ಹಿಂದಿಯಲ್ಲಿ ಮಾತ್ರ ರಿಲೀಸ್ ಆಗಿದ್ದ ಈ ಸಿನಿಮಾ ಈಗ ಪ್ರಾದೇಶಿಕ ಭಾಷೆಗಳಲ್ಲಿ ಬರಲು ಸಸಜ್ಜಾಗಿದೆ… ಇದೀಗ ಇತರ ಭಾಷೆಗಳಿಗೂ ಡಬ್ ಆಗಿದೆ. ಕನ್ನಡಕ್ಕೂ ಡಬ್ ಆಗ್ತಿದೆ..
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬರುತ್ತಿದೆ. ಜೀ 5 ಓಟಿಟಿ ವೇದಿಕೆಯಲ್ಲಿ ಈ ಡಬ್ ಆದ ದಿ ಕಾಶ್ಮೀಪ್ ಫೈಲ್ ಸಿನಿಮಾವನ್ನು ನೋಡಬಹುದಾಗಿದೆ.