Bhool Bhulaiyya 2 Trailer review : ಹಾರರ್ ಗಿಂತ ಹೆಚ್ಚು ಕಾಮಿಡಿ ಸೆನ್ಸ್…!!!
ಭೂಲ್ ಭುಲಯ್ಯಾ 2 ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ… ಸಿನಿಮಾ ಅದೇ ಹಳೇ ಟೆರಿಫೈಯಿಂಗ್ ಹಾರರ್ ಸ್ಟೋರಿ ಜೊತೆಗೆ ಕಾಮಿಡಿ ಮೂಲಕ ಭಯದ ಜೊತೆಗೆ ನಗಿಸಲಿದೆ ಎಂಬುದನ್ನ ಟ್ರೇಲರ್ ನೋಡಿದ್ರೆ ಹೇಳಬಹುದು..
ಟಬು ಸೀರಿಯಸ್ ಕ್ಯಾರೆಕ್ಟರ್ , ಕಿಯಾರಾ , ಕಾರ್ತಿಕ್ ಆರ್ಯನ್ ಫನ್ನಿ ಆಕ್ಟಿಂಗ್ ಜೊತೆಗೆ ,, ಕೆಲ ರೋಮಾಂಟಿಕ್ ಸೀನ್ ಕೂಡ ಟ್ರೇಲರ್ ನಲ್ಲಿ ತೋರಿಸಲಾಗಿದೆ.. ಭೂಲ್ ಭುಲೈಯಾ 2 ಟ್ರೇಲರ್ ನಲ್ಲಿ ಕಾರ್ತಿಕ್ ಆರ್ಯನ್ ರೂಹ್ ಬಾಬಾ ಆಗಿ ಜನರನ್ನ ನಗಿಸಿದ್ದಾರೆ.. ಪ್ರೇತಾತ್ಮಗಳ ಜೊತೆಯಲ್ಲಿ ಮಾತನಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ಧಾರೆ..
ಭೂಲ್ ಭುಲಯ್ಯಾ ಅಕ್ಷಯ್ ಕುಮಾರ್ ವಿದ್ಯಾಬಬಾಲನ್ ರಂತಹ ನಟರನ್ನ ಹೊಂದಿತ್ತು.. ಕಾಮಿಡಿ ಜೆನರ್ ಇತ್ತು ಹಾರರ್ ಆಗಿತ್ತು.. ಮಾಂಜುಲಿಕ ಎಲ್ಲರಲ್ಲೂ ಭಯ ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ರೂ ಸಹ ಕನ್ನಡ , ತಮಿಳಿನಲ್ಲಿ ಇದ್ದ ಕ್ರೇಜ್ ಇರಲಿಲ್ಲ..
ಇದೀಗ ಭೂಲ್ ಭುಲಯ್ಯಾ 2 ಬರುತ್ತಿದೆ.. ಸಂಪೂರ್ಣ ವಿಭಿನ್ನ , ಹೊಸ ಕಥೆ ಹೊಸಬರ ಟೀಮ್ ಹೊಸ ಪಾತ್ರಗಳ ಜೊತೆಗೆ ಸಿನಿಮಾ ಬರುತ್ತಿದೆ.. ಸಿನಿಮಾದ ಟ್ರೇಲರ್ ಅದ್ಭುತವಾಗಿ ಮೂಡಿಬಂದಿದ್ದು , ರಿಲೀಸ್ ಗಾಗಿ ಕಾಯುತ್ತಿರುವ ಅಭಿಮಾನಿಗಳ ಕಾತರತೆ ಹೆಚ್ಚಿಸಿದೆ.. ಭೂಲ್ ಭುಲಯ್ಯಾ ಗೂ ಈ ಸಿನಿಮಾಗೂ ಸಂಬಂಧವೇ ಇಲ್ಲ.. ಇದು ಸೀಈಕ್ವೆಲ್ ಅಲ್ಲ ಹೊಸ ಕಥೆ ಅನ್ನೋದು ಟ್ರೇಲರ್ ನಿಂದ ಸ್ಪಷ್ಟವಾಗಿದೆ..
ಟ್ರೇಲರ್ನಲ್ಲಿ ಕಿಯಾರಾ ಅಡ್ವಾಣಿ, ಟಬು, ರಾಜ್ಪಾಲ್ ಯಾದವ್, ಸಂಜಯ್ ಮಿಶ್ರಾ ಮತ್ತು ಇತರರನ್ನ ತೋರಿಸಲಾಗಿದೆ. ಮಂಜುಲಿಕಾ ಶಕ್ತಿಶಾಲಿ ಮಾಠ ಮಂತ್ರ ಕಲಿತಿದ್ದ ಪ್ರೇತಾತ್ಮವಾಗಿದೆ ಎಂಬುದನ್ನ ಹೇಳಲಾಗಿದೆ.. ಆದ್ರೆ ಅದಾದ ನಂತರ ಮಂಜುಲಿಕಾ ಯಾವೆಲ್ಲಾ ರೀತಿ ಕಾಟ ಕೊಡುತ್ತಾಳೆ ಅನ್ನೋದನ್ನ ಸಿನಿಮಾದಲ್ಲಿ ನೋಡಬೇಕು..
ಮಂಜುಲಿಕಾ ಆತ್ಮದ ಜೊತೆಗೆ ಮಾತನಾಡಲು ರೂಹ್ ಬಾಬು ಬರುವುದು, ಬಂದ ನಂತರ ತುಂಬೆಲ್ಲಾ ಆಗುತ್ತೆಎ.. ಮಂಜುಲಿಕ ರೂಮಿನ ಬಾಗಿಲು ತೆರೆದ ಮೇಲೆ ಆಗುವ ಅನಾಹುತಗಳ ಬಗ್ಗೆ ಕ್ಯೂರಿಯಾಸಿಟಿ ಜೊತೆಗೆ ಟ್ರೇಲರ್ ಮೂಲಕವೇ ಒಂದಷ್ಟು ಟ್ವಿಸ್ಟ್ ಗಳು ಸಿನಿಮಾದಲ್ಲಿರಲಿದೆ ಎಂಬ ಸುಳಿವು ಬಿಟ್ಟುಕೊಟ್ಟಿದೆ ಚಿತ್ರತಂಡ..
ಭೂಲ್ ಭುಲೈಯಾ 2 ಅನ್ನು ಅನೀಸ್ ಬಾಜ್ಮಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಕ್ಯುಂಕಿ ಸಾಸ್ ಭಿ ಕಭಿ ಬಹು ತಿ ಖ್ಯಾತಿಯ ಅಮರ್ ಉಪಾಧ್ಯಾಯ, ಮಿಲಿಂದ್ ಗುನಾಜಿ ಮತ್ತು ರಾಜೇಶ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಟಿ-ಸೀರೀಸ್ ಮತ್ತು ಸಿನಿ 1 ಸ್ಟುಡಿಯೋಸ್ ಬ್ಯಾನರ್ನಡಿಯಲ್ಲಿ ಭೂಷಣ್ ಕುಮಾರ್, ಮುರಾದ್ ಖೇತಾನಿ, ಅಂಜುಮ್ ಖೇತಾನಿ ಮತ್ತು ಕ್ರಿಶನ್ ಕುಮಾರ್ ನಿರ್ಮಿಸಿರುವ ಈ ಚಿತ್ರವು ಮೇ 20 ರಂದು ತೆರೆಗೆ ಬರಲಿದೆ.
ಆದ್ರೆ ಟ್ರೇಲರ್ರ ನೋಡಿದ್ರೆ ಹೆಚ್ಚು ಕಾಮಿಡಿಯೇ ಈ ಸಿನಿಮಾದ ಹೈಲೇಟ್ ಎನಿಸುತ್ತೆ.. ಹಾರರ್ ಗಿಂತ ಹೆಚ್ಚು ಕಾಮಿಡಿ ರೀತಿಯಲ್ಲಿ ಸಿನಿಮಾವನ್ನ ತೆಗೆದುಕೊಂಡು ಹೋಗಿರುವಂತೆ ಕಾಣಿಸುತ್ತದೆ.. ಭಯದ ಸನ್ನಿವೇಶಗಳಲ್ಲೂ ಕಾಮಿಡಿ ತುರುಕಿದಂತೆ ಕಾಣತ್ತೆ.. ಇದರಿಂದ ಪಕ್ಕಾ ಹಾರರ್ ಪ್ರಿಯರು ಕೊಂಚ ಡಿಸಪಾಯಿಂಟ್ ಆಗಬಹುದು ಎನಿಸುತ್ತೆ..