KGF 2 ಕ್ರೇಜ್ : “ಕಂಪ್ಲೇಂಟ್… ಕಂಪ್ಲೇಂಟ್.. ಕಂಪ್ಲೇಂಟ್.. ವಿ ಡೋಂಟ್ ಅವಾಯ್ಡ್… ವೀ ಟೇಕ್ ಆಕ್ಷನ್”..!!!
12 ನೇ ದಿನವೂ ಬಾಕ್ಸ್ ಆಫೀಸ್ ನಲ್ಲಿ KGF 2 ತೂಫಾನ್ ಮುಂದುವರೆದಿದೆ.. ಸಿನಿಮಾ ಕ್ರೇಜ್ ಇದೆ.. ಎಲ್ಲಿ ನೋಡಿದರಲ್ಲೇ ರಾಕಿ ಭಾಯ್ ದೇ ಹವಾ ಪಶುರುವಾಗಿಬಿಟ್ಟಿದೆ.. ಸಿನಿಮಾದ ಡೈಲಾಗ್ ಗಳಿಗೆ ಜನ ಫಿದಾ ಆಗಿದ್ಧಾರೆ.. ಸ್ಟಾರ್ ಗಳ ಬಾಯಲ್ಲೂ ರಾಕಿ ಡೈಲಾಗ್ಸ್ ಬರುತ್ತಿವೆ..
ಅದ್ರಲ್ಲೂ ವೈಲೆನ್ಸ್ ಡೈಲಾಗ್ ಎಷ್ಟರ ಮಟ್ಟಿಗೆ ಕ್ರೇಜ್ ಸೃಷ್ಟಿಸಿದೆ ಅಂದ್ರೆ ,,, ಇತ್ತೀಚೆಗೆ ಶಿಲ್ಪಾ ಶೆಟ್ಟಿ ವೈಲೆನ್ಸ್ ಡೈಲಾಗ್ ಹೊಡೆದು ಗಮನ ಸೆಲೆದಿದ್ರು.. ಈಗ ಉದಯ್ ಪುರ ರೇಂಜ್ ಪೊಲೀಸರು ವೈಲೆನ್ಸ್ ಬದಲಾಗಿ ತಮ್ಮದೇ ಶೈಲಿಯಲ್ಲೇ ಕೊಟ್ಟಿರುವ ವಾರ್ನಿಂಗ್ ಗೆ ಕೆಜಿಎಫ್ ಟಚ್ ನೀಡಿದ್ಧಾರೆ..
ಹೌದು.. ರಾಜಸ್ಥಾನದ ಉದಯ್ಪುರ ರೇಂಜ್ ಪೊಲೀಸರು ಟ್ವಿಟರ್ನಲ್ಲಿ ರಾಕಿ, ಗರುಡ ಮತ್ತು ಅಧೀರ ಯಾರೇ ಅಪರಾಧಿ ಆಗಿರಲಿ. ಕಾನೂನನ್ನ ಯಾರು ಉಲ್ಲಂಘಿಸಿದರು ಖಾಕಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. 100 ಅಥವಾ 112 ನಂಬರ್ಗೆ ಡಯಲ್ ಮಾಡಿ, ಮಾಹಿತಿ ನೀಡಿ ಅಫರಾಧಿಗಳನ್ನು ಹಿಡಿಯಿರಿ ಎಂದು ಟ್ವಿಟ್ ಮಾಡಿದ್ದಾರೆ.. ಆದ್ರೆ ಗಮನ ಸೆಲೆಯುತ್ತಿರುವುದು ಅವರ ನಾಮಫಲಕ.. ಸ್ಟಾಪ್ ಕ್ರೈಂ : ಕಂಪ್ಲೇಂಟ್, ಕಂಪ್ಲೇಂಟ್, ಕಂಪ್ಲೇಂಟ್ ವಿ ಡೋಂಟ್ ಅವಾಯ್ಡ್ ವಿ ಟೇಕ್ ಆಕ್ಷನ್ ಎಂದು ಪೋಸ್ಟ್ ಹಾಕಿದ್ಧಾರೆ. ಕೆಜಿಎಫ್ 2 ಸ್ಟೈಲ್ನಲ್ಲಿ ಜಾಗೃತಿಯನ್ನೂ ಮೂಡಿಸಿದ್ದಾರೆ , ವಾರ್ನಿಂಗನ್ನೂ ಕೊಟ್ಟಿದ್ದಾರೆ.. ಸದ್ಯ ಈ ಪೋಸ್ಟ್ ಟ್ವಿಟರ್ನಲ್ಲಿ ವೈರಲ್ ಆಗುತ್ತಿದೆ.