ತಂದೆಯ ಸಾರಥ್ಯದಲ್ಲಿ ಗ್ಯಾಂಗ್ ಸ್ಟರ್ ಆಗಲು ಹೊರಟಿದ್ದಾರೆ ‘ಡೆಡ್ಲಿ ಸೋಮ’
ಸ್ನೇಹಾನಾ ಪ್ರೀತೀನಾ , ಆದಿ , ಡೆಡ್ಲಿ ಸೋಮಾದಂತಹ ಸಿನಿಮಾಗಳ ಮೂಲಕವೇ ಖ್ಯಾತಿ ಗಳಿಸಿರುವ ಸ್ಯಾಂಡಲ್ ವುಡ್ ನಟ ಆದಿತ್ಯ ಹಲವು ವರ್ಷಗಳಿಂದ ಸಿನಿಮಾಗಳಲ್ಲಿ ಮಿಂಚಲು ಸಾಧ್ಯವಾಗ್ತಿಲ್ಲ…
ಇದೀಗ ಡೇರಿಂಗ್ ಆಗಿ ಸ್ಯಾಂಡಲ್ ವುಡ್ ನಲ್ಲಿ ರೋರಿಂಗ್ ಮಾಡಲು ಸಜ್ಜಾಗ್ತಿದ್ದಾರೆ ಆದಿತ್ಯ,, ಗ್ಯಾಂಗ್ ಸ್ಟರ್ ಆಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಈ ಹೊಸ ಸಿನಿಮಾಗೆ ಆದಿತ್ಯ ಅವರ ತಂದೆ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಆಕ್ಷನ್ ಕಟ್ ಹೇಳುತ್ತಿದ್ದಾರೆ..
ರಾಜೇಂದ್ರ ಸಿಂಗ್ ಬಾಬು ಮತ್ತು ಆದಿತ್ಯ ಕಾಂಬಿನೇಷನ್ನಲ್ಲಿ `ವೀರ ಕಂಬಳ’ ಚಿತ್ರ ಮೂಡಿ ಬಂದಿದೆ. ಈ ಸಿನಿಮಾ ಮೂಲಕ ಕಂಬಳದ ಕಥೆ ಹೇಳಲು ಹೊರಟಿದ್ದಾರೆ.. ಗ್ಯಾಂಗ್ಸ್ಟರ್ ಪಾತ್ರಕ್ಕೆ ನಟ ಆದಿತ್ಯ ಜೀವತುಂಬಿದ್ದಾರೆ.
ತುಳು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರೋ ಕಂಬಳ ಜನಾಂಗವನ್ನು ಬೆಂಬಲಿಸುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ `ವೀರ ಕಂಬಳ’ ಚಿತ್ರದ ಬಹುತೇಕ ಚಿತ್ರೀಕರಣ ಮಂಗಳೂರಿನಲ್ಲಿ ನಡೆದಿದೆ. ಜತೆಗೆ ನಟ ಆದಿತ್ಯ ಅವರ ಚಿತ್ರದ ಫಸ್ಟ್ ಲುಕ್ನ್ನು ಮೇ ಮೊದಲ ವಾರದಲ್ಲಿ ಬಿಡುಗಡೆ ಮಾಡಲಿದೆ ಚಿತ್ರತಂಡ.