Runway 34 : ಅಜಯ್ ದೇವಗನ್ ಸಿನಿಮಾ ಹೊಗಳಿದ ಅಕ್ಷಯ್ , ಗುಟ್ಕಾ ಗ್ಯಾಂಗ್ ಎಂದ ನೆಟ್ಟಿಗರು
ಸದ್ಯಕ್ಕೆ ದೇಶಾದ್ಯಂತ ಚರ್ಚೆ ಹುಟ್ಟುಹಾಕಿದ್ದು ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿರುವುದು ಕಿಚ್ಚ ಸುದೀಪ್ ಅಜಯ್ ದೇವಗನ್ ಅವರ ನಡುವಿನ ಟ್ವೀಟ್ ವಾರ್… ಹಿಂದಿ ರಾಷ್ಟ್ರ ಭಾಷೆ ಎಂದು ನೆಟ್ಟಿಗರಿಂದ ಹಿಗ್ಗಾ ಮುಗ್ಗಾ ಟ್ರೋಲ್ ಆಗ್ತಿರುವ ಅಜಯ್ ದೇವಗನ್ ಅವರ ರನ್ ವೇ 34 ಸಿನಿಮಾ ರಿಲೀಸ್ ಆಗಿದ್ದು ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ..
ರನ್ ವೇ ರಿಲೀಸ್ ಆಗಿದ್ರೂ ರಾಕಿ ಭಾಯ್ ಹವಾ ತಗ್ಗಿಲ್ಲ.. ಈಗಲೂ ಥಿಯೇಟರ್ ಗಳಲ್ಲಿ ರಾಕಿ ಭಾಯ್ ಅಬ್ಬರ ವಿದೆ..
ಅಂದ್ಹಾಗೆ ರನ್ ವೇ 34 ಸಿನಿಮಾದ ಜೊತೆಗೆ ಮತ್ತೊಂದು ಬಾಲಿವುಡ್ ಸ್ಟಾರ್ ಸಿನಿಮಾ ರಿಲೀಸ್ ಆಗಿದೆ.. ಟೈಗರ್ ಶ್ರಾಫ್ ಅಭಿನಯದ ಹೀರೋಪಂತಿ 2 ಸಿನಿಮಾ ಸಹ ರಿಲೀಸ್ ಆಗಿದ್ದು ಈ ಸಿನಿಮಾಗೂ ಅಷ್ಟೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.. ಆದ್ರೆ ರಾಕಿ ಭಾಯ್ ಹವಾ ಇವೆರೆಡೂ ಸಿನಿಮಾಗಳ ಮುಂದೆಯೂ ತಗ್ಗಿಲ್ಲ..
ಅಂದ್ಹಾಗೆ ರನ್ ವೇ 34 ಚಿತ್ರವನ್ನು ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ವೀಕ್ಷಿಸಿ ಮೆಚ್ಚಿಕೊಂಡಿದ್ಧಾರೆ.. ಅಜಯ್ ದೇವಗನ್ ಅವರ ಅಭಿನಯವನ್ನು ಶ್ಲಾಘಿಸಿದ್ದಾರೆ.. ಆದರೆ ಸೋಷಿಯಲ್ ಮೀಡಿಯಾದಲ್ಲಿ ಗುಟ್ಕಾ ಗ್ಯಾಂಗ್ ಎಂದು ಹಿಗ್ಗಾ ಮುಗ್ಗಾ ಟ್ರೋಲ್ ಮಾಡ್ತಿದ್ದಾರೆ..
ಹಿಂದಿ ರಾಷ್ಟ್ರ ಭಾಷೆಯಾಗಿ ಉಳಿದಿಲ್ಲ ಎಂಬ ಸುದೀಪ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಅಜಯ್ ದೇವಗನ್ ಹಿಂದಿ ರಾಷ್ಟ್ರೀಯ ಭಾಷೆ ಅಂದಿದ್ದರು.. ಇದೇ ಅವರ ಸಿನಿಮಾಗೆ ಅರ್ಧ ಸೌತ್ ಇಂಡಿಯಾದಲ್ಲಿ ತೊಂದರೆಯಾಗಿದ್ದಂದ್ರೆ ತಪ್ಪಾಗಲ್ಲ..
ಅಕ್ಷಯ್ ಕುಮಾರ್ ಅವರು ಸಿನಿಮಾ ನೋಡಿ , ಶ್ಲಾಘಿಸಿದ್ದಾರೆ. ಭಾಯಿ @ajaydevagan ಮಜಾ ಆ ಗಯಾ ಕಸಮ್ ಸೆ.
ರಾಕುಲ್ ಪ್ರೀತ್ ಸಿಂಗ್ ಮತ್ತು ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ಸ್ವತಃ ಅಜಯ್ ನಿರ್ದೇಶಿಸಿದ್ದಾರೆ ಮತ್ತು ನಿರ್ಮಿಸಿದ್ದಾರೆ. ಎಂತಹ ಥ್ರಿಲ್ಲರ್, ಎಂತಹ ಅದ್ಭುತ vfx, ಅದ್ಭುತ ನಟನೆ ಮತ್ತು ನಿರ್ದೇಶನ. ಅಮಿತಾಬ್ ಬಚ್ಚನ್ ಅವರು ಲೆಜೆಂಡ್ , ಸಿನಿಮಾಗೆ ಶುಉಭಹಾರೈಸುವೆ ಎಂದಿದ್ದಾರೆ.
ಅಕ್ಷಯ್ ಗೆ ಅಜಯ್ ದೇವಗನ್ ಧನ್ಯವಾದ ಅರ್ಪಿಸಿದ್ದಾರೆ.
ಟ್ವಿಟ್ಟರ್ನಲ್ಲಿ ಅವರ ಸಂದೇಶಗಳ ವಿನಿಮಯವನ್ನು ನೋಡಿದ ನೆಟಿಜನ್ಗಳು ಅವರನ್ನು ಪಾನ್ ಮಸಾಲಾ ಬ್ರಾಂಡ್ಗೆ ಸಂಬಂಧಿಸಿ ಟ್ರೋಲ್ ಮಾಡ್ತಾ ಗುಡ್ಕಾ ಗ್ಯಾಂಗ್ ಎಂದೇ ಕರೆಯುತ್ತಿದ್ದಾರೆ..