ಅಜಯ್ ದೇವಗನ್ VS ಕಿಚ್ಚ ಸುದೀಪ್ ಟ್ವೀಟ್ ವಾರ್ : ಸೋನು ಸೂದ್ ರಿಯಾಕ್ಷನ್
ಕಿಚ್ಚ ಸುದೀಪ್ ಅವರು ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂಬ ಹೇಳಿಕೆಗೆ ಬಾಲಿವುಡ್ ನ ಸ್ಟಾರ್ ಅಜಯ್ ದೇವಗನ್ , ಟ್ವೀಟ್ ಮಾಡಿ ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದೇ ಪ್ರತಿಕ್ರಿಯೆ ನೀಡಿದ ನಂತರ ಸಿಕ್ಕಾಪಟ್ಟೆ ಟ್ರೋಲ್ ಗೆ ಗುರಾಯಿಗಿದ್ರು.. ಇಡೀ ಸ್ಯಾಂಡಲ್ ವುಡ್ ಅಷ್ಟೇ ಅಲ್ದೇ ಪರಭಾಷಾ ತಾರೆಯರು ಕಿಚ್ಚನ ಬೆಂಬಲಕ್ಕೆ ನಿಂತಿದ್ದರು.. ಸೌತ್ ನೆಟ್ಟಿಗರಷ್ಟೇ ಅಲ್ದೇ ನಾರ್ತ್ ನವರೂ ಅಜಯ್ ದೇವಗನ್ ರನ್ನ ಟೀಕಿಸಿ ಹಿಂದಿ ರಾಷ್ಟ್ರೀಯ ಭಾಷೆಯಲ್ಲ ಎಂದು ಆಕ್ರೋಶ ಹೊರಹಾಕಿದ್ದರು..

ಇದೀಗ ಬಾಲಿವುಡ್ ನಟ ಸೋನು ಸೂದ್ ಅವರೂ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಒಂದ್ ರೀತಿ ಅವರ ನಿಲುವು ಕಿಚ್ಚ ಸುದೀಪ್ ಅವರ ಪರವಿದ್ದಂತೆ ತೋರುತ್ತಿದೆ..
ಸಂವಾದ ಒಂದರಲ್ಲಿ ಸೋನು ಸೂದ್, “ಹಿಂದಿಯನ್ನು ಕೇವಲ ರಾಷ್ಟ್ರೀಯ ಭಾಷೆ ಎಂದು ಕರೆಯಬಹುದು ಎಂದು ನಾನು ಭಾವಿಸುವುದಿಲ್ಲ. ಭಾರತಕ್ಕೆ ಒಂದು ಭಾಷೆ ಇದೆ, ಅದು ಮನರಂಜನೆ. ನೀವು ಯಾವ ಉದ್ಯಮಕ್ಕೆ ಸೇರಿದ್ದೀರಿ ಎಂಬುದು ಮುಖ್ಯ ವಿಷಯವಲ್ಲ. ನೀವು ಜನರನ್ನು ರಂಜಿಸಿದರೆ, ಅವರು ನಿಮ್ಮನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ ಮತ್ತು ನಿಮ್ಮನ್ನು ಸ್ವೀಕರಿಸುತ್ತಾರೆ. ಒಳ್ಳೆಯ ಸಿನಿಮಾ ಮಾತ್ರ ಒಪ್ಪಿಕೊಳ್ಳುತ್ತಾರೆ” ಎಂದಿದ್ದಾರೆ..
ಅಲ್ಲದೇ RRR ಮತ್ತು KGF 2 ನಂತಹ ಸಿನಿಮಾಗಳು ಮತ್ತು ದಕ್ಷಿಣ ಭಾರತದ ಚಲನಚಿತ್ರಗಳ ಯಶಸ್ಸಿನ ಬಗ್ಗೆ ಮಾತನಾಡಿದ ಸೋನು ಸೂದ್ , ದಕ್ಷಿಣದ ಚಲನಚಿತ್ರಗಳು “ಹಿಂದಿ ಚಲನಚಿತ್ರಗಳನ್ನು ನಿರ್ಮಿಸುವ ವಿಧಾನವನ್ನು ಬದಲಾಯಿಸುತ್ತವೆ” ಎಂದು ಅಭಿಪ್ರಾಯಪಟ್ಟರು.
ಅಂದ್ಹಾಗೆ ಸೋನು ಸೂದ್ ಬಾಲಿವುಡ್ , ಟಾಲಿವುಡ್ , ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿದ್ದಾರೆ.. ಅರುಂಧತೆ , ವಿಷ್ಣುವರ್ಧನ ಸಿನಿಮಾದಂತಹ ಹಿಟ್ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ..