ಚಂದನವನದಲ್ಲಿಂದು ಸಿನಿಮಾಗಳ ಹಬ್ಬ.. 3 ಚಿತ್ರಗಳು ಇಂದೇ ರಿಲೀಸ್ … ಯಾವ್ಯಾವು ಗೊತ್ತಾ..??
ಕೋವಿಡ್ ನಂತರದಲ್ಲಿ ಸಾಕಷ್ಟು ದೊಡ್ಡ ಬಜೆಟ್ ಹಾಗೂ ಹೊಸ ಸಿನಿಮಾಗಳು ಥಿಯೇಟರ್ ಹಾಗೂ ಒಟಿಟಿಯಲ್ಲಿ ರಿಲೀಸ್ ಆಗ್ತಿವೆ.. ಅಂದ್ಹಾಗೆ ಇಂದು ಒಂದೇ ದಿನ ಕನ್ನಡದ 3 ಸಿನಿಮಾಗಳು ರಿಲೀಸ್ ಆಗಿವೆ..
ಶೋಕಿವಾಲ : ಅಜಯ್ ರಾವ್ ನಾಯಕನಾಗಿರುವ ಈ ಚಿತ್ರವನ್ನು ಜಾಕಿ ನಿರ್ದೇಶನ ಮಾಡಿದ್ದಾರೆ. ಸಂಜನಾ ಆನಂದ್ ಚಿತ್ರದ ನಾಯಕಿ. ಮನರಂಜನೆಯ ಪ್ರಧಾನ ಸಿನಿಮಾ ಇದಾಗಿದೆ. ಚಿತ್ರದ ನಾಯಕಿಯಾಗಿ ಸಂಜನಾ ಆನಂದ್ ನಟಿಸಿದ್ದಾರೆ.
ರಾಜಿ : ರಾಘವೇಂದ್ರ ರಾಜ್ಕುಮಾರ್ ನಟನೆಯ ಚಿತ್ರ ಇಂದು ಬಿಡುಗಡೆಯಾಗಿದೆ. ಪೋಷಕ ನಟಿ ಪ್ರೀತಿ ಎಸ್ ಬಾಬು ನಿರ್ದೇಶನದ ಸಿನಿಮಾ ಇದು. ಕೌಟುಂಬಿಕ ಕತೆಯನ್ನು ಒಳಗೊಂಡಿರುವ ಸಿನಿಮಾ ಇದಾಗಿದೆ.
ಮೇಲೊಬ್ಬ ಮಾಯಾವಿ : ಸಂಚಾರಿ ವಿಜಯ್ ನಟನೆಯ ಕೊನೆಯ ಚಿತ್ರವಿದು. ಪತ್ರಕರ್ತ ನವೀನ್ ಕೃಷ್ಣ ಮೊದಲ ಬಾರಿಗೆ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿರುವ ಹರಳು ಮಾಫಿಯಾ ಸುತ್ತ ಕತೆ ನಡೆಯುತ್ತೆ..