Tulu Film : ವಿಶ್ವಾದ್ಯಂತ ‘ಮಗನೆ ಮಹಿಷ’ ಬಿಡುಗಡೆ
ವೀರು ಟಾಕೀಸ್ ಬ್ಯಾನರ್ ಅಡಿಯಲ್ಲಿ ವೀರೇಂದ್ರ ಶೆಟ್ಟಿ ನಿರ್ದೇಶನದ ತುಳು ಚಿತ್ರ ‘ಮಗನೆ ಮಹಿಷ’ (ಏಪ್ರಿಲ್ 29) ವಿಶ್ವಾದ್ಯಂತ ಬಿಡುಗಡೆಯಾಗಿದೆ.
ಈ ಹಿಂದೆ 511 ದಿನಗಳ ಕಾಲ ಥಿಯೇಟರ್ನಲ್ಲಿ ಓಡಿದ ಬ್ಲಾಕ್ಬಸ್ಟರ್ ಸಿನಿಮಾ ‘ಚಾಲಿ ಪೊಲಿಲು’ ನಿರ್ದೇಶಿಸಿದ್ದ ವೀರೇಂದ್ರ ಶೆಟ್ಟಿ ಅವರ ನಿರ್ದೇಶನದ ಎರಡನೇ ಚಿತ್ರ ‘ಮಗನೆ ಮಹಿಷ’. ಅಂದ್ಹಾಗೆ , ಅವರು ಕನ್ನಡ ಚಲನಚಿತ್ರ ‘ಸವರ್ಣ ಧೀರ್ಗ ಸಂಧಿ’ ಮೂಲಕ ನಿರ್ದೇಶಕ ಮತ್ತು ನಟರಾಗಿ ಪಾದಾರ್ಪಣೆ ಮಾಡಿದ್ದರು..
ಮ್ಯೂಸಿಕಲ್ , ಲವ್ ಸ್ಟೋರಿ ಮೂಲಕ ಮೋಡಿ ಮಾಡಲು ಬರುತ್ತಿದೆ ‘ಮನಸ್ಮಿತ’
ದೇವದಾಸ್ ಕಾಪಿಕಾಡ್, ಅರವಿಂದ್ ಬೋಳಾರ್, ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರು ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಚಿತ್ರದ ನಿರ್ದೇಶನದ ಜೊತೆಗೆ ವೀರೇಂದ್ರ ಶೆಟ್ಟಿ ಕಥೆ, ಸಂಭಾಷಣೆ, ಚಿತ್ರಕಥೆ ಬರೆದು ವೀರು ಟಾಕೀಸ್ ಅಡಿಯಲ್ಲಿ ‘ಮಗನೇ ಮಹಿಷ’ ಚಿತ್ರವನ್ನು ನಿರ್ಮಿಸಿದ್ದಾರೆ. ಮನೋಮೂರ್ತಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಸಂದೇಶ್ ನೀರ್ಮಾರ್ಗ, ಪ್ರಶಾಂತ್ ಕಂಕನಾಡಿ ಮತ್ತು ರಕ್ಷಣ್ ಮಾಡೂರು ಹಾಡಿದ್ದಾರೆ.
ಪುತ್ತೂರು, ಕಾಸರಗೋಡು, ಮೂಡುಬಿದಿರೆ, ಬೆಳ್ತಂಗಡಿ, ಕಾರ್ಕಳ, ಸುಳ್ಯ, ಮುಳ್ಳೇರಿಯ, ಉಡುಪಿ ಮತ್ತು ಸುರತ್ಕಲ್ನಲ್ಲಿ ಚಿತ್ರ ಬಿಡುಗಡೆಯಾಗಿದೆ. ಇತ್ತೀಚೆಗೆ ವಿಶ್ವದ 11 ದೇಶಗಳಲ್ಲಿ ಸಿನಿಮಾ ಪ್ರೀ ರಿಲೀಸ್ ಆಗಿತ್ತು..