ಅಪ್ಪು ಅಗಲಿ 6 ತಿಂಗಳು : ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಕುಟುಂಬಸ್ಥರು
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಸಸರಿಯಾಗಿ 6 ತಿಂಗಳು ಕಳೆದಿದೆ.. ಈಗಲೂ ಅವರು ನಮ್ಮೊಂದಿಗಿಲ್ಲ ಎನ್ನುವ ಕಹಿ ಸತ್ಯ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ..
ಅಭಿಮಾನಿಗಳು ಕುಟುಂಬಸ್ಥರ ನೋವು ಮಾಸಿಲ್ಲ.. ಇಂದು ಅಪ್ಪು ಆರು ತಿಂಗಳ ಪುಣ್ಯ ತಿಥಿ ಹಿನ್ನೆಲೆ ಅವರ ಕುಟುಂಬಸ್ಥರು ಅಪ್ಪು ಸ್ಮಾರಕಕ್ಕೆ ಪೂಜೆ ಸಲ್ಲಿಸಸಿದ್ದಾರೆ.. ಕುಟುಂಬಸ್ಥರು ಪೂಜಾ ಕೈಂಕರ್ಯಗಳನ್ನ ನೆರವೇರಿಸಿದ್ಧಾರೆ..
ರಾಘವೇಂದ್ರ ರಾಜ್ ಕುಮಾರ್, ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್, ಯುವರಾಜ್ ಮತ್ತು ಪುನೀತ್ ಸಹೋದರಿಯರು ಕಂಠೀರವ ಸ್ಟುಡಿಯೋದಲ್ಲಿರೋ ಪುನೀತ್ ರಾಜ್ ಕುಮಾರ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.