ಕಿಚ್ಚ – ಅಜಯ್ ಟ್ವೀಟ್ ವಾರ್ : ನಾನು ಹಿಂದಿ , ಕನ್ನಡ ಪಂಡಿತ ಎಂದ ಯೋಗರಾಜ್ ಭಟ್
ಕಿಚ್ಚ ಸುದೀಪ್ ಅವರು ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂಬ ಹೇಳಿಕೆಗೆ ಬಾಲಿವುಡ್ ನ ಸ್ಟಾರ್ ಅಜಯ್ ದೇವಗನ್ , ಟ್ವೀಟ್ ಮಾಡಿ ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದೇ ಪ್ರತಿಕ್ರಿಯೆ ನೀಡಿದ ನಂತರ ಸಿಕ್ಕಾಪಟ್ಟೆ ಟ್ರೋಲ್ ಗೆ ಗುರಾಯಿಗಿದ್ರು.. ಇಡೀ ಸ್ಯಾಂಡಲ್ ವುಡ್ ಅಷ್ಟೇ ಅಲ್ದೇ ಪರಭಾಷಾ ತಾರೆಯರು ಕಿಚ್ಚನ ಬೆಂಬಲಕ್ಕೆ ನಿಂತಿದ್ದರು.. ಸೌತ್ ನೆಟ್ಟಿಗರಷ್ಟೇ ಅಲ್ದೇ ನಾರ್ತ್ ನವರೂ ಅಜಯ್ ದೇವಗನ್ ರನ್ನ ಟೀಕಿಸಿ ಹಿಂದಿ ರಾಷ್ಟ್ರೀಯ ಭಾಷೆಯಲ್ಲ ಎಂದು ಆಕ್ರೋಶ ಹೊರಹಾಕಿದ್ದರು..
ಕೇವಲ ನಟ ನಟಿಯರಷ್ಟೇ ಅಲ್ಲ ರಾಜಕಾರಣಿಗಳು ಕಿಚ್ಚ ಸುದೀಪ್ ಅವರಿಗೆ ಬೆಂಬಲಿಸಿ ಅವರ ಹೇಳಿಕೆ ಸರಿ ಎಂದು ಸಮರ್ಥಿಸಿಕೊಂಡಿದ್ದಾರೆ.. ಸಿದದ್ದರಾಮಯ್ಯ , ಕುಮಾರಸ್ವಾಮಿ ಅಜಯ್ ದೇವಗನ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ..
ಇದೀಗ ಯೋಗರಾಜ್ ಭಟ್ ಅವರು ಈ ಕುರಿತಾಗಿ ನೀಡಿರುವ ಪ್ರತಿಕ್ರಿಯೆ ಅಚ್ಚರಿಗೆ ಕಾರಣವಾಗಿದೆ..
ಹೌದು ಯೋಗರಾಜ್ ಭಟ್ ಅವರು , ‘ನನ್ನ ಬಗ್ಗೆ ನನ್ನ ಕೇಳಿದರೇನೇ ನೆಟ್ಟಗೆ ನನಗೆ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ರಾಷ್ಟ್ರದ ಸಮಸ್ಯೆ ಬಗ್ಗೆ ಕೇಳಿದರೆ ಏನು ಹೇಳಲಿ ಎಂದಿದ್ದಾರೆ. ಮುಂದುವರೆದು ಮಾತನಾಡುತ್ತಾ ನಾನು ಕನ್ನಡದ ಪಂಡಿತನೂ ಹೌದು, ಹಿಂದಿ ಪಂಡಿತನೂ ಹೌದು ಎಂದಿದ್ದು ಅವರ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ತಮಿಳು , ತೆಲುಗು ಫ್ಯಾನ್ಸ್ ಕಿಚ್ಚನಿಗೆ ಜೈಕಾರ ಹಾಕುತ್ತಿದ್ದಾರೆ.. ಕಿಚ್ಚ ಸುದೀಪ್ ಅವರಿಗೆ ಸಾಥ್ ಕೊಟ್ಟು ಅಜಯ್ ದೇವಗನ್ ಗೆ ಟಾಂಟ್ ಕೊಡುತ್ತಿದ್ಧಾರೆ ಸೌತ್ ಸ್ಟಾರ್ ಮತ್ತೆ ಅಭಿಮಾನಿಗಳು..
ತೆಲುಗು ನಟರಾದ ಮಹೇಶ್ ಬಾಬು , ಜ್ಯೂನಿಯರ್ NTR , ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಅಭಿಮಾನಿಗಳು ಕಿಚ್ಚನಿಗೆ ಬೆಂಬಲ ನೀಡಿದ್ದಾರೆ.. ಕನ್ನಡದ ಬಹುತೇಕ ಸ್ಟಾರ್‌ಗಳು ಕಿಚ್ಚನ ಪರವಾಗಿ ನಿಂತಿದ್ದಾರೆ. ನಟಿ ರಮ್ಯಾ , ನಟ ನೀನಾಸಂ ಸತೀಶ್ , ಸಿಂಪಲ್ ಸುನಿ ಆಶಿಕಾ ರಂಗನಾಥ್, ಮಂಸೋರೆ, ಶ್ರೀನಗರ ಕಿಟ್ಟಿ ಸಾಥ್ ಕೊಟ್ಟು ಅಜಯ್ ದೇವಗನ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಂದ್ಹಾಗೆ ಖ್ಯಾತ ಆದ್ರೆ ವಿವಾದಿತ ನಿರ್ದೇಶಕ ರಾಮ್ ಗೋಪಲ್ ವರ್ಮಾ ಸೇರಿದಂತೆ ಪರ ಭಾಷಿಕರೂ ಕಿಚ್ಚನ ಬೆಂಬಲಕ್ಕೆ ನಿಂತಿದ್ಧಾರೆ..