Drushya 2 : ಟಿವಿಗೆ ಬರುತ್ತಿದೆ ಯಾವಾಗ ಗೊತ್ತಾ..??
ಈ ವಾರ ಕಿರುತತೆರೆ ಪ್ರಿಯರಿಗೆ ಮಸ್ತ್ ಎಂಟರ್ ಟೈನ್ ಮೆಂಟ್ ಇರಲಿದೆ.. ದೈನಂದಿನ ಧಾರಾವಾಹಿಗಳು ರಿಯಾಲಿಟಿ ಶೋಗಳ ಜೊತೆಗೆ ಈಗ ಜನರನ್ನ ಮನರಂಜಿಸಲು ಟಿವಿಯಲ್ಲಿ ರವಿಚಂದ್ರನ್ ಅಭಿನಯದ ದೃಶ್ಯ 2 ಸಿನಿಮಾ ಬರುತ್ತಿದೆ..
ಕ್ರೇಜಿಸ್ಟಾರ್ ರವಿಚಂದ್ರನ್ ‘ರಾಜೇಂದ್ರ ಪೊನ್ನಪ್ಪ’ನಾಗಿ ಕಮಾಲ್ ಮಾಡಿದ್ದ ದೃಶ್ಯ-2 ಥಿಯೇಟರ್ ನಲ್ಲಿ ಸಖತ್ ಸೌಂಡ್ ಮಾಡಿತ್ತು. ಕಳೆದ ವರ್ಷ ಡಿಸೆಂಬರ್ 10ರಂದು ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಟ್ಟಿದ್ದ ದೃಶ್ಯ-2 ಸಿನಿಮಾ ಚಿತ್ರರಸಿಕರ ಮನಸು ಗೆದ್ದಿತ್ತು.
ಒಂದು ಮರ್ಡರ್ ಮಿಸ್ಟರಿ ಕಥೆಯನ್ನು ಬಹಳ ಅಚ್ಚುಕಟ್ಟಾಗಿ ತೆರೆಗೆ ತಂದಿದ್ದರು ನಿರ್ದೇಶಕ ಪಿ. ವಾಸು. ರವಿಚಂದ್ರನ್, ನವ್ಯಾ ನಾಯರ್, ಆರೋಹಿ ನಾರಾಯಣ್ ಮುಂತಾದವರು ನಟಿಸಿದ್ದ ದೃಶ್ಯ 2’ ಸಿನಿಮಾದ ಕ್ಲೈಮ್ಯಾಕ್ಸ್ ಸಖತ್ ಥ್ರಿಲ್ ನೀಡಿತ್ತು.
ಇದೀಗ ಮೇ 1 ರಂದು ಸಿನಿಮಾ ಕನ್ನಡದ ಪ್ರಮುಖ ಖಾಸಗಿ ವಾಹಿನಿಯಲ್ಲಿ ಟಿವಿಯಲ್ಲಿ ಪ್ರಸಾರವಾಗಲಿದೆ..
ಖ್ಯಾತ ನಟ ವಿ ರವಿಚಂದ್ರನ್ ಅಭಿನಯದ ದೃಶ್ಯ 2 ತನ್ನ ವಿಶ್ವ ದೂರದರ್ಶನ ಪ್ರೀಮಿಯರ್ಗೆ ಸಿದ್ಧವಾಗಿದೆ.
ಈ ಚಿತ್ರವು ಭಾನುವಾರ (ಮೇ 1 ರಂದು) ಪ್ರಸಾರವಾಗಲಿದೆ.. ದೃಶ್ಯ 1 ರ ಸೀಕ್ವೆಲ್ ಆಗಿರುವ ೀ ಸಿನಿಮಾ ಮಲಯಾಳಂನ ಸಿನಿಮಾ ದೃಶ್ಯಂ 2 ನ ರೀಮೇಕ್ ಆಗಿದೆ.. ರವಿಚಂದ್ರನ್, ನವ್ಯಾ ನಾಯರ್, ಉನ್ನತಿ, ಆರೋಹಿ ನಾರಾಯಣ್, ಅನಂತ್ ನಾಗ್, ಪ್ರಭು, ಆಶಾ ಶರತ್, ಲಾಸ್ಯ ನಾಗರಾಜ್, ಪ್ರಮೋದ್ ಶೆಟ್ಟಿ, ಸೋನು ಗೌಡ, ಮತ್ತು ಅನೇಕ ಪ್ರಮುಖ ನಟರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ..
ಮಲಯಾಳಂ ದೃಶ್ಯಂ ಸಿನಿಮಾವನ್ನು ಕನ್ನಡದ ಸೊಗಡಿಗೆ ತಕ್ಕಂತೆ ಹೊಂದಾಣಿಕೆ ಮಾಡಲಾಗಿತ್ತು.
ಥಿಯೇಟರ್ ಅಂಗಳದಲ್ಲಿ ಮ್ಯಾಜಿಕ್ ಮಾಡಿದ್ದ ದೃಶ್ಯ ಸಿನಿಮಾ ಜೀ5 ಒಟಿಟಿಯಲ್ಲಿ ಈಗಾಗಲೇ ಸ್ಟ್ರೀಮ್ ಆಗ್ತಿದೆ..
ಪ್ರಮೋದ್ ಶೆಟ್ಟಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಗಮನ ಸೆಳೆದಿದ್ದಾರೆ. ನಂತ್ ನಾಗ್ ಎಂದಿನಂತೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಉಳಿದಂತೆ ಸುರೇಶ್ ಅರಸ್ ಸಂಕಲನ, ಜಿಎಸ್ವಿ ಸೀತಾರಾಮ್ ಛಾಯಾಗ್ರಹಣ, ಅಜನೀಶ್ ಬಿ. ಲೋಕನಾಥ್ ಹಿನ್ನೆಲೆ ಸಂಗೀತ ‘ದೃಶ್ಯ 2’ ಸಿನಿಮಾಕ್ಕಿದೆ.
ಜೀ 5 ಒಟಿಟಿಯಲ್ಲೀಗ ಕನ್ನಡಿಗ, ಭಜರಂಗಿ-2 ಹಾಗೂ ಗರುಡ ಗಮನ ವೃಷಭ ವಾಹನ ಸಿನಿಮಾಗಳು ಧೂಳ್ ಎಬ್ಬಿಸ್ತಿವೆ. ಈ ಎಲ್ಲಾ ಸಿನಿಮಾಗಳನ್ನು ಪ್ರೇಕ್ಷಕ ಮೆಚ್ಚಿಕೊಂಡಿದ್ದಾನೆ.