ಮೈಸೂರಿನಲ್ಲಿ ಶೂಟಿಂಗ್ ವೇಳೆ ಗಾಯಗೊಂಡ ತೆಲುಗು ನಟ ಗೋಪಿಚಂದ್
ತೆಲುಗಿನಲ್ಲಿ ಮಾಸ್ ಹಾಗೂ ಆಕ್ಷನ್ ಹೀರೋ ಆಗಿಯೇ ಖ್ಯಾತಿ ಗಳಿಸಿರುವ ನಟ ಗೋಪಿಚಂದ್ ಅವರು ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ.. ಮೈಸೂರಿನಲ್ಲಿ ಶೂಟಿಂಗ್ ವೇಳೆ ಅವರು ಗಾಯಗೊಂಡಿದ್ಧಾರೆ..
ಮೈಸೂರಿನಲ್ಲಿ ಕೆಲ ದಿನಗಳಿಂದಲೂ ಹೊಸ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು ಏಪ್ರಿಲ್ 29 ರಂದು ಶೂಟಿಂಗ್ ವೇಳೆ ಗಾಯಗೊಂಡಿದ್ಧಾರೆ.. ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಗೋಪಿಚಂದ್ ಹೊಸ ಸಿನಿಮಾ ಚಿತ್ರೀಕರಣದ ವೇಳೆ ನಿಯಂತ್ರಣ ತಪ್ಪಿ ಕಾಲು ಜಾರಿ ಬಿದ್ದಿದ್ದಾರೆ. ಹೀಗಾಗಿ ಅವರಿಗೆ ಅಲ್ಪ ಪ್ರಮಾಣದ ಗಾಯವಾಗಿದ್ದು, ಚಿತ್ರತಂಡ ಚಿಕಿತ್ಸೆಯನ್ನು ಕೊಡಿಸುತ್ತಿದೆ.
ಈ ಬಗ್ಗೆ ಆತಂಕಗೊಂಡಿದ್ದ ಗೋಪಿಚಂದ್ ಅಭಿಮಾನಿಗಳಿಗೆ ಮಾಹಿತಿ ನೀಡಿರುವ ನಿರ್ದೇಶಕ ಶ್ರೀವಾಸ್ ಒಲೆಟ್ಟಿ ಅವರು “ ದೇವರ ದಯೆಯಿಂದ ಯಾವುದೇ ರೀತಿ ದೊಡ್ಡ ಮಟ್ಟದಲ್ಲಿ ಪೆಟ್ಟಾಗಿಲ್ಲ. ಹೀಗಾಗಿ ಅಭಿಮಾನಿಗಳು ಆತಂಕ ಪಡುವುದು ಬೇಡ. ನಟ ಗೋಪಿಚಂದ್ ಚೆನ್ನಾಗಿದ್ದಾರೆ. ಘಟನೆಯ ಬಗ್ಗೆ ಚಿಂತಿಸಬೇಡಿ” ಎಂದಿದ್ಧಾರೆ..
ಸ್ಯಾಂಡಲ್ ವುಡ್ ಗೆ ಮೋಹಕ ತಾರೆ ರಮ್ಯಾ ಕಮ್ ಬ್ಯಾಕ್ …!!!
Zee5 ಒಟಿಟಿಗೆ ಸೆನ್ಸೇಷನಲ್ ಸಿನಿಮಾ The Kashmir Files ಎಂಟ್ರಿ…ಮೇ 13ಕ್ಕೆ ಡಿಜಿಟಲ್ ವರ್ಲ್ಡ್ ಗೆ ಎಂಟ್ರಿ
KGF 2 : ಇನ್ನೂ ನಿಂತಿಲ್ಲ ರಾಕಿ ಅಬ್ಬರ : ಮೊದಲ ದಿನವೇ ಟುಸ್ ಆದ ರನ್ ವೇ 34 , ಹೀರೋಪಂತಿ 2