KGF 2 : ಬಾಕ್ಸ್ ಆಫೀಸ್ ನಲ್ಲಿ 16 ನೇ ದಿನವೂ KGF 2 ಅಬ್ಬರ ತಗ್ಗಿಲ್ಲ. ಮೂರನೇ ವಾರವೂ ತೂಫಾನಿ ಓಟ ಮುಂದುವರೆದಿದೆ… ಆಗಲೇ ಸಿನಿಮಾ 1000 ಕೋಟಿ ಬಾಕ್ಸ್ ಆಫಪೀಸ್ ಕೆಲೆಕ್ಷನ್ ಮೀರಾಗಿದೆ ಎಂಬ ಲೆಕ್ಕಾಚಾರವೂ ಹೊರಬಿದ್ದಾಗಿದೆ.. ಆದ್ರೆ ಟ್ರೇಡ್ ವಿಶ್ಲೇಷಕರು ಮಾತ್ರ ಜನರಲ್ಲಿ ಗೊಂದಲ ಸೃಷ್ಟಿಸುತ್ತಿರುವುದು ಸುಳ್ಳಲ್ಲ.. ಒಬ್ಬೊಬ್ಬ ವಿಶ್ಲೇಷಕರು ಒಂದೊಂದು ರೀತಿ ಅಪ್ ಡೇಟ್ ಗಳನ್ನ ನೀಡುತ್ತಾ ಜನರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ಧಾರೆ..
ಮೂಲಗಳ ಪ್ರಕಾರ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ 1000 ಕೋಟಿ ಗಡಿ ದಾಟಾಗಿದೆ.. ಅಂದ್ಹಾಗೆ ರಾಕಿ ಭಾಯ್ ಒನ್ ಮ್ಯಾನ್ ಆರ್ಮಿಯಂತೆ , ತಮಿಳಿನಲ್ಲಿ ಕಾತುವಾಕಲ ರೆಂಡು , ಟಾಲಿವುಡ್ ನ ಆಚಾರ್ಯ , ಬಾಲಿವುಡ್ ನಲ್ಲಿ ಹೀರೋಪಂತಿ 2 , ರನ್ ವೇ 34 ಗೆ ಭಾರೀ ಟಕ್ಕರ್ ನೀಡ್ತಿದ್ಆಧರೆ.. ಇವೆಲ್ಲಾ ಸಿನಿಮಾಗಳ ಮುಂದೆಯೇ ರಾಕಿ ಅಬ್ಬರಕ್ಕೆ ಏನ್ ತೊಂದ್ರೆಯಾಗಿಲ್ಲ.. ಇನ್ನೂ ರನ್ ವೇ 34 , ಹೀರೋಪಂತಿ ಡೋಲಾಯಮಾನ ಸ್ಥಿತಿಯಲ್ಲಿವೆ..
ಈ ನಡುವೆಯೇ ಸಿನಿಮಾ 1000 ಕೋಟಿ ರೂ ಗಡಿ ದಾಟಿದೆಯಾದ್ರೂ ಟ್ರೇಡ್ ವಿಶ್ಲೇಷಕರು ಗೊಂದಲ ಸೃಷ್ಟಿಸುತ್ತಿರುವುದು ಮಾತ್ರ ಯಾಕಂತ ತಿಳಿಯುತ್ತಿಲ್ಲ.. ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಈ ಬಗ್ಗೆ ಗಂಭೀರವಾಗಿದ್ದು ,,, ಆಕ್ರೋಶ ಹೊರಹಾಕುತ್ತಾ , ಷಡ್ಯಂತ್ರ ರೂಪಿಸಲಾಗ್ತಿದೆ ಎಂದು ಕಿಡಿಕಾರುತ್ತಿದ್ದಾರೆ..
ಟ್ರೇಡ್ ವಿಶ್ಲೇಷಕರಾಗಿರೋ ರಮೇಶ್ ಬಾಲ ಅವರ ಪ್ರಕಾರ ಕೆಜಿಎಫ್ 2 ಬಾಕ್ಸಾಫೀಸ್ನಲ್ಲಿ 1000 ಕೋಟಿ ದಾಟಿದೆ.. ಅವರೇ ಟ್ವೀಟ್ ಮಾಡಿ ಅಧಿಕೃತವಾಗಿ ಮಾಹಿತಿಯೂ ನೀಡಿದ್ಧಾರೆ..
ಆದ್ರೆ ಅದೇ ಮನೋಬಾಲ ಅವರು ನೀಡಿರುವ ರಿಪೋರ್ಟ್ ಗೊಂದಲ ಸೃಷ್ಟಿಸಿದೆ.. ವಿಶ್ವಾದ್ಯಂತ ಸಿನಿಮಾ 959.10 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹೇಳಿದ್ಧಾರೆ… ಹೀಗಾಗಿ ನೆಟ್ಟಿಗರು ಗೊಂದಲಕ್ಕೀಡಾಗಿ ಆಕ್ರೋಶ ಹೊರಹಾಕ್ತಿದ್ದಾರೆ.. ಆದ್ರೆ ಲೆಕ್ಕಾಚಾರ ಸರಿಯಾಗಿ ನೋಡಿವುದಾದ್ರೆ ಸಿನಿಮಾ ವಿಶ್ವಾದ್ಯಂತ ಈಗಾಗಲೇ 1000 ಕೋಟಿ ಗಡಿ ದಾಟಿರೋದ್ರಲ್ಲಿ ಡೌಟೇ ಇಲ್ಲ..
#KGFChapter2 has crossed ₹ 1,000 Crs Gross Mark at the WW Box Office..
Only the 4th Indian Movie to do so after #Dangal , #Baahubali2 and #RRRMovie
— Ramesh Bala (@rameshlaus) April 30, 2022
#KGFChapter2 WW Box Office
CROSSES ₹950 cr milestone mark.
Week 1 – ₹ 720.31 cr
Week 2 – ₹ 223.51 cr
Week 3
Day 1 – ₹ 15.28 cr
Total – ₹ 959.10 crTOUGH COMPETITOR
— Manobala Vijayabalan (@ManobalaV) April 29, 2022
ಹಿಂದಿ ರಾಷ್ಟ್ರ ಭಾಷೆ ಹೇಳಿಕೆ ತಪ್ಪಲ್ಲ, ಆದ್ರೆ ಸಂಸ್ಕೃತ ರಾಷ್ಟ್ರ ಭಾಷೆಯಾಗಲಿ : ಕಂಗನಾ
ಹಿಂದಿ ಬರಲ್ಲ ಅಂದ್ರೆ ದೇಶ ಬಿಟ್ಟು ತೊಲಗಿ : ಯುಪಿ ಸಚಿವನ ಅತಿರೇಕದ ಹೇಳಿಕೆ