ಹೀರೋಪಂತಿ 2 ಬಾಕ್ಸ್ ಆಫೀಸ್ ವಿಮರ್ಶೆ
ಬಾಕ್ಸ್ ಆಫೀಸ್ ನಲ್ಲಿ 16 ನೇ ದಿನವೂ KGF 2 ಅಬ್ಬರ ತಗ್ಗಿಲ್ಲ. ಮೂರನೇ ವಾರವೂ ತೂಫಾನಿ ಓಟ ಮುಂದುವರೆದಿದೆ… ಆದ್ರೆ ರಾಕಿ ಭಾಯ್ ಗೆ ಟಕ್ಕರ್ ಕೊಡಲು ಬಾಲಿವುಡ್ ಸ್ಟಾರ್ ಗಳಿಬ್ಬರ ಸಿನಿಮಾಗಳು ಒಂದೇ ದಿನ ( ಏಪ್ರಿಲ್ 29 ) ರಿಲೀಸ್ ಆಗಿದ್ದರೂ ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿಲ್ಲ.. ಗಲ್ಲಾ ಪಟ್ಟೆಗೆಯಲ್ಲಿ ಕಲೆಕ್ಷಷನ್ ನಲ್ಲಿ ಒಂದಕಿಗೆ ತೃಪ್ತಿ ಪಟ್ಟುಕೊಂಡಿದೆ.. ಹಾಗೆ ನೋಡಿದ್ರೆ KGF 2 16 ನೇ ದಿನದ ಕಲೆಕ್ಷನ್ ಕೂಡ ಮೀರಿಸೋಕಾಗಿಲ್ಲ…
ತಾರಾಗಣ : ಟೈಗರ್ ಶ್ರಾಫ್, ತಾರಾ ಸುತಾರಿಯಾ, ನವಾಜುದ್ದೀನ್ ಸಿದ್ದಿಕಿ, ಅಮೃತಾ ಸಿಂಗ್ ಮತ್ತು ಜಾಕಿರ್ ಹುಸೇನ್
ನಿರ್ದೇಶಕ: ಅಹ್ಮದ್ ಖಾನ್
ನಿರ್ಮಾಪಕ: ಸಾಜಿದ್ ನಾಡಿಯಾಡ್ವಾಲಾ
Heropanti 2 ಬಾಕ್ಸ್ ಆಫೀಸ್ ವಿಮರ್ಶೆ
ಆರಂಭಿಕ ದಿನ ಹೀರೋಪಂತಿ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ 7 ಕೋಟಿ ರೂ ಅಷ್ಟೇ..
ಟೈಗರ್ ಶ್ರಾಫ್ ಮಾಸ್ ಆಕ್ಷನ್ ಹೀರೋ ಆಗಿ ಗುರುತಿಸಿಕೊಂಡಿದ್ದು ದೊಡ್ಡ ಸ್ಟಾರ್ ಡಮ್ ಹೊಂದಿದ್ದಾರೆ.. ಈ ಚಿತ್ರದ ಘೋಷಣೆಯಾದಾಗ ಅಭಿಮಾನಿಗಳು ಸಾಕಷ್ಟು ಉತ್ಸುಕರಾಗಿದ್ದರು..
ಆದರೆ ಸಾಂಕ್ರಾಮಿಕ ಸಮಯದಲ್ಲಿ ವಿಷಯಗಳು ತೀವ್ರವಾಗಿ ಬದಲಾಗಿವೆ. ಆದ್ರೆ ಸಿನಿಮಾ ಮೊದದಲ ದಿನವೇ ನೀರಸ ಪ್ರತಿಕ್ರಿಯೆ ಪಡೆದುಕೊಂಡಿದೆ.. ಸೂರ್ಯವಂಶಿಯನ್ನು ಹೊರತುಪಡಿಸಿ, ಬಾಲಿವುಡ್ ನ ಯಾವುದೇ ಕಮರ್ಷಿಯಲ್ ಸಿನಿಮಾಗಳು ಸಹ ಕೋವಿಡ್ ನಂತರನಿಂದ ೊಳ್ಳೆ ರೆಸ್ಪಾನ್ಸ್ ಪಡೆದಿಲ್ಲ. ಅದೇ ಸೌತ್ ನಲ್ಲಿ ಬ್ಯಾಕ್ ಟು ಬ್ಯಾಕ್ ಬ್ಲಾಕ್ಬಸ್ಟರ್ ಸಿನಿಮಾಗಳು ಹಿಂದಿ ಬೆಲ್ಟ್ ನಲ್ಲಿ ಬಾಕ್ಸ್ ಆಫೀಸ್ ಡಾಮಿನೇಟ್ ಮಾಡ್ತಿವೆ..
ಹೀರೋಪಂತಿ ಮೊದಲ ಭಾಗ ಸಾಕಷ್ಟು ಯಶಸ್ಸು ಗಳಿಸಿತ್ತು.. ಆದ್ರೆ ಹೀರೋಳಪಂತಿ 2 ಅಭಿಮಾನಿಗಳನ್ನ ರಂಜಿಸುವಲ್ಲಿ ಫೇಲ್ ಆಗಿದೆ.. KGF 2 ಅಬ್ಬರದ ಮುಂದೆ ಮುಗ್ಗರಿಸಿದೆ..