KGF 2 ಸಿನಿಮಾ ವೀಕ್ಷಿಸಿದ ಕಮಲ್ ಹಾಸನ್ , ಇಳಯರಾಜ..!!
ಬಾಕ್ಸ್ ಆಫೀಸ್ ನಲ್ಲಿ 16 ನೇ ದಿನವೂ KGF 2 ಅಬ್ಬರ ತಗ್ಗಿಲ್ಲ. ಮೂರನೇ ವಾರವೂ ತೂಫಾನಿ ಓಟ ಮುಂದುವರೆದಿದೆ…
ಪರ ಭಾಷಿಗರೂ ಸಹ ಸಿನಿಮಾವನ್ನ ಕೊಂಡಾಡುತ್ತಿದ್ದಾರೆ.. ಬಾಲಿವುಡ್ ನಟಿ ಕಂಗನಾ ರಣೌತ್ , ಟಾಲಿವುಡ್ ಸ್ಟಾರ್ ಗಳಾದ ರಾಮ್ ಚರಣ್ , ಅಲ್ಲು ಅರ್ಜುನ್ , ಪ್ರಭಾಸ್ ಅವರೂ ಸಹ ಸಿನಿಮಾವನ್ನ ಮೆಚ್ಚಿ ಯಶ್ , ಪ್ರಶಾಂತ್ ನೀಲ್ ಅವರನ್ನ ಕೊಂಡಾಡಿದ್ದಾರೆ..
ಇನ್ನೂ ಇತ್ತೀಚೆಗೆ ಸಿನಿಮಾವನ್ನ ಇಂಡಿಯನ್ ಸೂಪರ್ ಸ್ಟಾರ್ ಆದ ಕಮಲ್ ಹಾಸನ್ ಹಾಗೂ ಸಂಗೀತ ಲೋಕದ ದಿಗ್ಗಜರಾದ ಇಳಯರಾಜ ಅವರು KGF 2 ಸಿನಿಮಾ ವೀಕ್ಷಿಸಿದ್ಧಾರೆ..
ಕಮಲ್ ಹಾಸನ್ ಮತ್ತು ಇಳಯರಾಜ ಅವರು ಸಿನಿಮಾ ವೀಕ್ಷಿಸಿರುವ ಫೋಟೋಗಳು ವೈರಲ್ ಆಗಿವೆಯಾದ್ರೂ ಇನ್ನೂವರೆಗೂ ಇಬ್ಬರಲ್ಲಿ ಯಾರೂ ಸಹ ಸೋಷಿಯಲ್ ಮೀಡಿಯದಲ್ಲಿ ಆಗಲಿ , ಬಹಿರಂಗವಾಗಿ ಆಗಲಿ ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿಲ್ಲ..
Mollywood : ಮಂಜು ವಾರಿಯರ್ ‘Jack N’ Jill ’ ಟೀಸರ್ ರಿಲೀಸ್..!!
ಮೈಸೂರಿನಲ್ಲಿ ಶೂಟಿಂಗ್ ವೇಳೆ ಗಾಯಗೊಂಡ ತೆಲುಗು ನಟ ಗೋಪಿಚಂದ್
ಸ್ಯಾಂಡಲ್ ವುಡ್ ಗೆ ಮೋಹಕ ತಾರೆ ರಮ್ಯಾ ಕಮ್ ಬ್ಯಾಕ್ …!!!