Runway 34 : ರಿಲೀಸ್ ಆದ ಮೊದಲನೇ ದಿನವೇ ಸಿನಿಮಾ ಲೀಕ್ ಮಾಡಿದ ತಮಿಳು ರಾಕರ್ಸ್
ಅಜಯ್ ದೇವಗನ್ ನಟನೆಯ ರನ್ ವೇ 34 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನವೇ ಡಲ್ ಹೊಡೆದಿದೆ.. KGf 2 ಅಬ್ಬರದ ಮುಂದೆ ಮುಗ್ಗರಿಸಿದೆ…
ಬಾಕ್ಸ್ ಆಫೀಸ್ ನಲ್ಲಿ ಫಸ್ಟ್ ಡೇ 2 ಕೋಟಿ ರೂ ಅಷ್ಟೇ ಗಳಿಸಿದೆ.. ಅದೇ KGF 2 ಕಥೆ ಬೇರೆ.. 16 ನೇ ದಿನವೂ KGF 2 ಸಿನಿಮಾ 4 ರಿಂದ 5 ಕೋಟಿ ಕಲೆಕ್ಷನ್ ಮಾಡಿದ್ದು ಪಿದು ಬಾಲಿವುಡ್ ಗೆ ಅವಮಾನವೆಂದೇ ಹಲವರು ಮಾತನಾಡ್ತಿದ್ದಾರೆ..
ಆದ್ರೆ ಮೊದಲೇ ಹೊಡೆತ ಅನುಭವಿಸಿರುವ ಸಿನಿಮಾ ಪೈರೆಸಿ ಕಾಟವನ್ನೂ ಎದುರಿಸಿದೆ..
ಹೌದು..! ಸಿನಿಮಾವನ್ನ ರಿಲೀಸ್ ಆದ ಮೊದಲ ದಿನವೇ ತಮಿಳು ರಾಕರ್ಸ್ ಲೀಕ್ ಮಾಡಿದೆ..
ಅಜಯ್ ದೇವಗನ್ ಅವರ ಬಹು ನಿರೀಕ್ಷಿತ ಅವರದ್ದೇ ನಿರ್ದೇಶನದ ರನ್ವೇ 34 ಏಪ್ರಿಲ್ 29 ರಂದು ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡಿತು. ಅಜಯ್, ಅಮಿತಾಬ್ ಬಚ್ಚನ್ ಮತ್ತು ರಾಕುಲ್ ಪ್ರೀತ್ ಸಿಂಗ್ ನಟಿಸಿರುವ ರನ್ವೇ 34 ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಸಿನಿಮಾವೇ ಆದ್ರೂ ಕಮಾಲ್ ಮಾಡ್ತಿಲ್ಲ..