KGF 2 : ಇನ್ನೂ ನಿಂತಿಲ್ಲ ರಾಕಿ ಅಬ್ಬರ : ಮೊದಲ ದಿನವೇ ಟುಸ್ ಆದ ರನ್ ವೇ 34 , ಹೀರೋಪಂತಿ 2
ಬಾಕ್ಸ್ ಆಫೀಸ್ ನಲ್ಲಿ 16 ನೇ ದಿನವೂ KGF 2 ಅಬ್ಬರ ತಗ್ಗಿಲ್ಲ. ಮೂರನೇ ವಾರವೂ ತೂಫಾನಿ ಓಟ ಮುಂದುವರೆದಿದೆ… ಆದ್ರೆ ರಾಕಿ ಭಾಯ್ ಗೆ ಟಕ್ಕರ್ ಕೊಡಲು ಬಾಲಿವುಡ್ ಸ್ಟಾರ್ ಗಳಿಬ್ಬರ ಸಿನಿಮಾಗಳು ಒಂದೇ ದಿನ ( ಏಪ್ರಿಲ್ 29 ) ರಿಲೀಸ್ ಆಗಿದ್ದರೂ ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿಲ್ಲ.. ಗಲ್ಲಾ ಪಟ್ಟೆಗೆಯಲ್ಲಿ ಕಲೆಕ್ಷಷನ್ ನಲ್ಲಿ ಒಂದಕಿಗೆ ತೃಪ್ತಿ ಪಟ್ಟುಕೊಂಡಿದೆ.. ಹಾಗೆ ನೋಡಿದ್ರೆ KGF 2 16 ನೇ ದಿನದ ಕಲೆಕ್ಷನ್ ಕೂಡ ಮೀರಿಸೋಕಾಗಿಲ್ಲ…
ಟೈಗರ್ ಶ್ರಾಫ್ ಅವರ ಹೀರೋಪಂತಿ 2 ಮತ್ತು ಅಜಯ್ ದೇವಗನ್ ಅವರ ರನ್ ವೇ 34 ಮೊದಲ ದಿನದ ಕಲೆಕ್ಷನ್ ಕಳಪೆಯಾಗಿದ್ದು ,,, ಇದು ಬಾಲಿವುಡ್ ಮಂದಿಯ ಭಯ ಮತ್ತಷ್ಟು ಹೆಚ್ಚಿಸಿದೆ.. ಇವೆರೆಡೂ ಸಿನಿಮಾಗಳೂ ಹಿಟ್ ಆಗೇ ಆಗುತ್ತವೆ ಎಂದುಕೊಂಡಿದ್ದವರ ನಿರೀಕ್ಷೆ ಸುಳ್ಳಾಗಿದ್ದು , ಇವರಿಬ್ಬರ ಸ್ಟಾರ್ ಡಮ್ ಕೂಡ ವರ್ಕೌಟ್ ಆಗಿಲ್ಲದೇ ಇರುವುದು ಬಾಲಿವುಡ್ ಮುಳುಗುವ ಟೈಮ್ ಹತ್ತಿರವಿದೆ ಎಂಬುದನ್ನ ತೋರಿಸಿದೆ..
ಯಶ್ ಅಭಿನಯದ ಕೆಜಿಎಫ್ 2 ರ ಅಬ್ಬರದ ಯಶಸ್ಸಿನ ನಡುವೆ, ಟೈಗರ್ ಶ್ರಾಫ್ ಅವರ ಹೀರೋಪಂತಿ 2 ಮತ್ತು ಅಜಯ್ ದೇವಗನ್ ಒಳಗೊಂಡ ರನ್ವೇ 34 ಏಪ್ರಿಲ್ 29 (ಶುಕ್ರವಾರ) ರಂದು ಬಿಡುಗಡೆಯಾಗಿದೆ. ಎರಡೂ ಚಿತ್ರಗಳು ಪ್ರೇಕ್ಷಕರ ಮೇಲೆ ಪ್ರಭಾವ ಬೀರಲು ವಿಫಲವಾಗಿವೆ.
ಸಾಜಿದ್ ನಾಡಿಯಾಡ್ವಾಲಾ ಅವರ ಹೀರೋಪಂತಿ 2 ಟಿಕೆಟ್ ಕೌಂಟರ್ ನಲ್ಲಿ ಮ್ಯಾಜಿಕ್ ಆಗುವ ನಿರೀಕ್ಷೆ ಹುಸಿಯಾಗಿದೆ.. ಅಜಯ್ ದೇವಗನ್ ಅವರ ಬಹು ತಾರಾಗಣದ ಚಿತ್ರಕ್ಕೂ ಇದೇ ಪರಿಸ್ಥಿತಿ.. ಈದ್ ಅವಧಿಯಲ್ಲಿ ಬಂದಿರುವ ಚಿತ್ರಗಳ ಕಳಪೆ ಕಲೆಕ್ಷನ್ ಹೆಚ್ಚು ಚಿಂತಾಜನಕವಾಗಿದೆ. ಈದ್ ಹೊತ್ತಲ್ಲಿ ಸಿನಿಮಾಗಳಿಗೆ ದೊಡ್ಡ ಯಶದ್ದು ಸಿಗ್ತಿತ್ತು.. ಆದ್ರೆ ಹಿಂದಿ ಬೆಲ್ಟ್ ನಲ್ಲಿ ಜನರು ಇನ್ನೂ KGF 2 ಗುಂಗಿನಿಂದ ಹೊರಬಂದಿಲ್ಲ.. KGF 2 ಹವಾ ತಗ್ಗಿಲ್ಲ..
ಮೊದಲ ದಿನ ಹೀರೋಪಂತಿ 2 ಸುಮಾರು 7 ಕೋಟಿ ರೂ ಗಳಿಸುವಲ್ಲಷ್ಟೇ ಸಕ್ಷಮವಾಗಿದೆ.. ರನ್ವೇ 34 ಸಿನಿಮಾ 3 ರಿಂದ 3.25 ಕೋಟಿ ಕಲೆಕ್ಷನ್ ಮಾಡಿದೆ. ಅದೇ KGF 2 16 ನೇ ದಿನವೂ ಬಾಕ್ಸ್ ಆಪೀಸ್ ನಲ್ಲಿ ಹಿಂದಿ ಬೆಲ್ಟ್ ನಲ್ಲಿ 4. 30 ರಿಂದ 5 ಕೋಟಿ ರೂ ಕಲೆಕ್ಷನ್ ಮಾಡಿದೆ. ಹೀರೋಪಂತಿ ಪ KGF 2 ನ 16 ನೇ ದಿನದ ಕಲೆಕ್ಷನ್ ಮೀರಿಸಿದ್ರೂ ಮೊದಲ ದಿನದ ಕಲೆಕ್ಷನ್ ಇಷ್ಟು ವೀಕ್ ಆಗಿರೋದು ನೋಡಿದ್ರೆ ಸಿನಿಮಾ ಹೆಚ್ಚು ದಿನ ಥಿಯೇಟರ್ ಗಳಲ್ಲಿ ಉಳಿಯೋದೇ ಡೌಟ್..
ಇನ್ನೂ ರನ್ ವೇ 34 ಸಿನಿಮಾವಂತೂ ನಿರೀಕ್ಷೆ ಮಟ್ಟ ತಲುಪುದಿರಲಿ ಕಳಪೆಯಲ್ಲೇ ಕಳಪೆ ಮಟ್ಟದಲ್ಲಿ ಕುಸಿದಿದ್ದು ಬಾಲಿವುಡ್ ಸ್ಟಾರ್ ಗಳ ಹವಾ ಇನ್ಮುಂದೆ ನಡೆಯಲ್ಲ.. ಇನ್ನೇನೀದ್ರೂ ಸೌತ್ ಮೇನಿಯಾವಷ್ಟೇ ಅನ್ನೋದು ಸಾಬೀತಾಗಿದೆ..
ಸದ್ಯ KGF 2 ಸಿನಿಮಾ ಸರ್ವಾಕಾಲೀನ ಅನೇಕ ರೆಕಾರ್ಡ್ ಗಳನ್ನ ಮುರಿದು ಭಾರತದ ಅತಿ ಹೆಚ್ಚು ಗಳಿಕೆ ಕಂಡ ಮೂರನೇ ಸಿನಿಮಾವಾಗಿ ಹೊರಹೊಮ್ಮಿದೆ.. ಮೊದಲನೇ ಸ್ಥಾನದಲ್ಲೂ ನಮ್ಮ ಸೌತ್ ಸಿನಿಮಾ ಬಾಹುಬಲಿ 2 ಇರುವುದು ಸೌತ್ ಸಿನಿಮಾ ಇಂಡಸ್ಟ್ರಿಯ ಹೆಮ್ಮೆ… ಇನ್ನೂ ದಂಗಲ್ ರೆಕಾರ್ಡ್ ಬ್ರೇಕ್ ಮಾಡುವ ಕಾಲ ತುಂಬಾ ದೂರವಿಲ್ಲ..
ಒಟ್ನಲ್ಲಿ ಸೌತ್ ಸಿನಿಮಾಗಳ ಮುಂದೆ ಬಾಲಿವುಡ್ ಸ್ಟಾರ್ ಗಳ ಸಿನಿಮಾ ಅದು 83 ಇರಬಹುದು , ಬಚ್ಚನ್ ಪಾಂಡೆ , ಜೆರ್ಸಿ , ರನ್ ವೇ 34 , ಹೀರೋಪಂತಿ ಟೋಟಲಿ ಫೇಲ್ ಆಗಿದ್ದು ಬಾಲಿವುಡ್ ಮಂದಿಗೆ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ..
ಕೇವಲ ಸೌತ್ ಸಿನಿಮಾಗಳ ರೀಮೇಕ್ ತೆಗೆಯೋದು ಬಿಟ್ಟು ಸ್ವಂತ ಕಂಟೆಂಟ್ ಉತ್ತಮ ಕಂಟೆಂಟ್ ಗಳನ್ನ ಕೊಟ್ಟಿದ್ರಾದ್ರೂ ಬಾಲಿವುಡ್ ಗೆ ಅಲ್ಪ ಸ್ವಲ್ಪ ಜೀವ ಇರುತ್ತಿತ್ತು ಅನ್ನೋದು ನೆಟ್ಟಿಗರ ಮಾತು..