Yash : ಪಾನ್ ಮಸಾಲಾ ಜಾಹಿರಾತು ಮಾಡಲ್ಲ… ಕೋಟಿ ಕೋಟಿ ಆಫರ್ ತಿರಸ್ಕರಿಸಿದ ರಿಯಲ್ ಸ್ಟಾರ್ ಯಶ್..!!!
ಒಂದ್ಕಡೆ ಬಾಲಿವುಡ್ ನ ಸೂಪರ್ ಸ್ಟಾರ್ ಗಳು ಗುಟ್ಕಾ ಪಾನ್ ಮಸಾಲಾ ಜಾಹೀರಾತುಗಳನ್ನ ಒಪ್ಪಿ ದುಡ್ಡು ಮಾಡುತ್ತಾ ಗುಟ್ಕಾ ಗ್ಯಾಂಗ್ ಎಂದು ಟ್ರೋಲ್ ಆಗ್ತಾ ವರ್ಚಸ್ಸು ಕಳೆದುಕೊಂಡಿದ್ದಾರೆ.. ಈ ಮೂಲಕ ಯುವ ಪೀಳಿಗೆಯ ದಿಕ್ಕು ತಪ್ಪಿಸಿ ತಾವು ಕೇವಲ ರೀಲ್ ಹೀರೋಗಳು ಅನ್ನೋದನ್ನ ಸಾಬೀತುಪಡಿಸಿದ್ಧಾರೆ..
ಅದೇ ಮತ್ತೊಂದ್ಕಡೆ ಹಿಂದಿಯಲ್ಲಿ ಸ್ಟಾರ್ ಡಮ್ ಇಲ್ಲದೇ ರಿಲೀಸ್ ಆಗಿ ತೂಫಾನ್ ಎಬ್ಬಿಸಿ ದೊಡ್ಡ ಅಭಿಮಾನಿಗಳನ್ನ ಇಡೀ ದೇಶಾದ್ಯಂತ ಸಂಪಾದನೆ ಮಾಡಿರುವ ನಮ್ಮ ಹೆಮ್ಮೆಯ ಕನ್ನಡಿಗ ಯಶ್ ಅವರು ರಿಯಲ್ ನಲ್ಲೂ ಹೀರೋ ಅನ್ನೋದನ್ನ ಪ್ರೂವ್ ಮಾಡಿದ್ಧಾರೆ..
ಯಶ್ ಅವರು ತಮಗೆ ಸಿಕ್ಕಿದ್ದ ಕೋಟ್ಯಾಂತರ ರೂಪಾಯಿಯ ಪಾನ್ ಮಸಾಲಾ ಜಾಹೀರಾತಿನ ಆಫರ್ ಅನ್ನ ತಿರಸ್ಕರಿಸಿದ್ಧಾರೆ ವಿತ್ ಸ್ಟೈಲ್.. ಪಾನ್ ಮಸಾಲಾ ಜಾಹೀರಾತಿಗಾಗಿ ಅಕ್ಷಯ್ ಕುಮಾರ್ ಕ್ಷಮೆಯಾಚಿಸಿದ ಕೆಲವು ದಿನಗಳ ನಂತರ, ಕನ್ನಡದ ಸೂಪರ್ ಸ್ಟಾರ್ ಯಶ್ ಇದೇ ರೀತಿಯ ಜಾಹೀರಾತು ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.
ಪ್ರತಿಷ್ಠಿತ ಸಂಸ್ಥೆಯ ಪಾನ್ ಮಸಾಲ ಮತ್ತು ಎಲೈಚಿ ಬ್ರ್ಯಾಂಡ್ ನ ಬಿಗ್ ಆಫರ್ನ್ನ ಯಶ್ ತಿರಸ್ಕರಿಸಿದ್ದಾರೆ. ದೇಶದ ಪ್ರತಿಷ್ಠಿತ ಸಂಸ್ಥೆಯೊಂದು ಯಶ್ ಅವರನ್ನ ಪಾನ್ ಮಸಾಲ ಮತ್ತು ಎಲೈಚಿ ಬ್ರ್ಯಾಂಡ್ ನ ರಾಯಭಾರಿಯಾಗಿ ಪ್ರಮೋಟ್ ಮಾಡಲು ಅಪ್ರೋಚ್ ಮಾಡಲಾಗಿತ್ತು. ಆದರೆ ಈ ಜಾಹೀರಾತನ್ನ ಮಾಡುವುದರಿಂದ ಆರೋಗ್ಯದ ಹಿತದೃಷ್ಟಿ ಮತ್ತು ಸಮಾಜಕ್ಕೆ ಮಾರಕವಾಗುವಂತಹ ವಸ್ತುಗಳನ್ನ ಪ್ರಮೋಟ್ ಮಾಡಬಾರದು ಎಂದು ನಿರ್ಧರಿಸಿ ಕೋಟ್ಯಾಂತರ ಮೌಲ್ಯದ ಆಫರ್ ನ್ನೇ ಯಶ್ ಕೈ ಬಿಟ್ಟಿದ್ದಾರೆ. ೀ ಮೂಲಕ ಮತ್ತೆ ಅಭಿಮಾನಿಗಳ ಮನ ಗೆದ್ದಿದ್ದಾರೆ..
ಯಶ್ ಅಭಿಮಾನಿಗಳು ಯಶ್ ನಿರ್ಧಾರಕ್ಕೆ ಫುಲ್ ಖುಷ್ ಆಗಿದ್ದಾರೆ.. ಮತ್ತೊಂದೆಡೆ ಯಶ್ ಅವರ ಜೊತೆಗೆ ಅಜಯ್ ದೇವಗನ್ , ಶಾರೂಖ್ ಖಾನ್ , ಅಕ್ಷಯ್ ಕುಮಾರ್ ರನ್ನ ಕಂಪೇರ್ ಮಾಡುತ್ತಾ ಆ ಸ್ಟಾರ್ ಗಳನ್ನ ಗುಟ್ಕಾ ಗ್ಯಾಂಗ್ ಎಂದು ಟ್ರೋಲ್ ಮಾಡಲಾಗ್ತಿದೆ.. ಯಶ್ ಅವರನ್ನ ಹಾಡಿ ಹೊಗಳುತ್ತಾ ಮಾದರಿಯಾಗಿ ಸ್ವೀಕರಿಸಿ ಎಂದು ಪಾಠ ಮಾಡಲಾಗ್ತಿದೆ..