ಕಿಚ್ಚ ಸುದೀಪ್ ಅವರು ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂಬ ಹೇಳಿಕೆಗೆ ಬಾಲಿವುಡ್ ನ ಸ್ಟಾರ್ ಅಜಯ್ ದೇವಗನ್ , ಟ್ವೀಟ್ ಮಾಡಿ ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದೇ ಪ್ರತಿಕ್ರಿಯೆ ನೀಡಿದ ನಂತರ ಸಿಕ್ಕಾಪಟ್ಟೆ ಟ್ರೋಲ್ ಗೆ ಗುರಾಯಿಗಿದ್ರು.. ಇಡೀ ಸ್ಯಾಂಡಲ್ ವುಡ್ ಅಷ್ಟೇ ಅಲ್ದೇ ಪರಭಾಷಾ ತಾರೆಯರು ಕಿಚ್ಚನ ಬೆಂಬಲಕ್ಕೆ ನಿಂತಿದ್ದರು.. ಸೌತ್ ನೆಟ್ಟಿಗರಷ್ಟೇ ಅಲ್ದೇ ನಾರ್ತ್ ನವರೂ ಅಜಯ್ ದೇವಗನ್ ರನ್ನ ಟೀಕಿಸಿ ಹಿಂದಿ ರಾಷ್ಟ್ರೀಯ ಭಾಷೆಯಲ್ಲ ಎಂದು ಆಕ್ರೋಶ ಹೊರಹಾಕಿದ್ದರು..
ಕೇವಲ ನಟ ನಟಿಯರಷ್ಟೇ ಅಲ್ಲ ರಾಜಕಾರಣಿಗಳು ಕಿಚ್ಚ ಸುದೀಪ್ ಅವರಿಗೆ ಬೆಂಬಲಿಸಿ ಅವರ ಹೇಳಿಕೆ ಸರಿ ಎಂದು ಸಮರ್ಥಿಸಿಕೊಂಡಿದ್ದಾರೆ.. ಸಿದದ್ದರಾಮಯ್ಯ , ಕುಮಾರಸ್ವಾಮಿ ಅಜಯ್ ದೇವಗನ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ..
ಇದೀಗ ಉತ್ತರ ಪ್ರದೇಶದ ಸಚಿವನೊಬ್ಬ ಹಿಂದಿ ನಮ್ಮ ರಾಷ್ಟ್ರ ಭಾಷೆ ಹಿಂದಿ ಗೊತ್ತಿಲ್ಲದೇ ಇದ್ದವರು ದೇಶ ಬಿಟ್ಟು ತೊಲಗಿ ಎಂದು ಅತಿರೇಕದ ಹೇಳಿಕೆ ನೀಡಿರುವುದು ಇಡೀ ದೇಶದ ಮೂಲೆ ಮೂಲೆಯಲ್ಲಿರುವ ಹಿಂದಿ ಭಾಷೇತರ ಜನರು ಅದ್ರಲ್ಲೂ ಸೌತ್ ಇಂಡಿಯನ್ಸ್ ಕೆಂಗಣ್ಣಿಗೆ ಗುರಿಯಾಗಿದೆ..

ನೆಟ್ಟಿಗರಂತೂ ಸೋಷಿಯಲ್ ಮೀಡಿಯಾದಲ್ಲಿ ಹಿಗ್ಗಾಮುಗ್ಗ ಟ್ರೋಲ್ ಮಾಡುತ್ತಾ ,,, ದೇಶ ಬಿಟ್ಟು ಹೋಗು ಅನ್ನಲು ನೀನ್ಯಾರೂ ಎಂದೆಲ್ಲಾ ಕಮೆಂಟ್ ಗಳನ್ನ ಮಾಡ್ತಾಯಿದ್ಧಾರೆ.. ನಮ್ಮ ದೇಶದಲ್ಲಿ 22 ಅಧಿಕೃತ ಭಾಷೆಗಳಲ್ಲಿ ಅವುಗಳಲ್ಲಿ ಹಿಂದಿಯೂ ಒಂದಷ್ಟೇ.. ಹಿಂದಿಯೇ ರಾಷ್ಟ್ರೀಯ ಭಾಷೆಯಲ್ಲ.. ಮಾತನಾಡೋದು ಕೇವಲ 3 – 4 ರಾಜ್ಯಗಳಲ್ಲಿ ಮಾತ್ರವೇ.. ಭಾರತ ಯಾರಪ್ಪನ ಮನೆ ಸೊತ್ತಲ್ಲ.. ಎಲ್ಲರಿಗೂ ಸೇರಿದ್ದು ಕೇವಲ ಹಿಂದಿ ಭಾಷಿಕರಿಗಲ್ಲ ಎಂದು ಆಕ್ರೋಶ ಹೊರಹಾಕ್ತಿದ್ಧಾರೆ..
ಅಷ್ಟೇ ಅಲ್ಲ ಇವರ ಪ್ರಕಾರ ಹಿಂದಿ ಇಷ್ಟಪಡದವರು ವಿದೇಶಿಯರೆಂದು ನಾನು ಭಾವಿಸುತ್ತೇನೆ. ಹಿಂದಿ ಭಾಷೆ ಬಾರದವರು ದೇಶವನ್ನು ಬಿಟ್ಟು ಹೋಗಬಹುದು ಎಂದು ಹೇಳುವ ಮೂಲಕ ಉತ್ತರ ಪ್ರದೇಶದ ಮೀನುಗಾರಿಕೆ ಸಚಿವ ಸಂಜಯ್ ನಿಶಾದ್ ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ.
ಹಿಂದಿಯನ್ನು ಪ್ರೀತಿಸದಿದ್ದರೆ, ನೀವು ವಿದೇಶಿ ಅಥವಾ ವಿದೇಶಿ ಶಕ್ತಿಗಳೊಂದಿಗೆ ಸಂಬಂಧ ಹೊಂದಿದ್ದೀರಿ ಎಂದು ಭಾವಿಸಲಾಗುತ್ತದೆ ಎಂದು ಕಿಡಿಕಾರಿದರು.
ನಾವು ಪ್ರಾದೇಶಿಕ ಭಾಷೆಗಳನ್ನು ಗೌರವಿಸುತ್ತೇವೆ. ಆದರೆ ಈ ದೇಶ ಒಂದೇ ಮತ್ತು ಭಾರತದ ಸಂವಿಧಾನವು ಭಾರತವು ಹಿಂದೂಸ್ಥಾನ್ ಎಂದು ಹೇಳುತ್ತದೆ. ಅಂದರೆ ಹಿಂದಿ ಮಾತನಾಡುವವರಿಗೆ ಒಂದು ಸ್ಥಳ. ಹಿಂದೂಸ್ಥಾನವು ಹಿಂದಿ ಮಾತನಾಡದವರಿಗೆ ಇರುವ ಸ್ಥಳವಲ್ಲ. ಅವರು ಈ ದೇಶವನ್ನು ಬಿಟ್ಟು ಬೇರೆಡೆ ಹೋಗಬೇಕು ಎಂದು ಆಕ್ರೋಶ ಹೊರಹಾಕಿದರು.
ಕಾನೂನಿನ ಪ್ರಕಾರ ಹಿಂದಿ ರಾಷ್ಟ್ರೀಯ ಭಾಷೆಯಾಗಿದೆ. ಕಾನೂನನ್ನು ಉಲ್ಲಂಘಿಸುವ ಯಾರಾದರೂ ಅವರು ಎಷ್ಟೇ ದೊಡ್ಡ ರಾಜಕಾರಣಿ ಅಥವಾ ಶಕ್ತಿಶಾಲಿಯಾಗಿದ್ದರೂ ಅವರನ್ನು ಕಂಬಿ ಹಿಂದೆ ಹಾಕಬೇಕು. ಕೆಲವರು ಹಿಂದಿ ಮಾತನಾಡಲು ನಿರಾಕರಿಸುವ ಮೂಲಕ ದೇಶದ ವಾತಾವರಣವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಇಂತಹ ಅಂಶಗಳು ದೇಶದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸುತ್ತೆ. ಆದರೆ ಇದಕ್ಕೆ ತಕ್ಕ ಉತ್ತರವನ್ನು ನೀಡುತ್ತಾರೆ ಎಂದು ಹೇಳಿದರು.
ಸಂಜಯ್ ನಿಶಾದ್ ಅವರು ನಿರ್ಬಲ್ ಇಂಡಿಯನ್ ಶೋಷಿತ್ ಹಮಾರಾ ಆಮ್(NISHAD) ದಳದ ಮುಖ್ಯಸ್ಥರಾಗಿದ್ದಾರೆ. ಈ ಪಕ್ಷವು ಆಡಳಿತಾರೂಢ ಬಿಜೆಪಿಯೊಂದಿಗೆ ಮಿತ್ರ ಪಕ್ಷವಾಗಿ ಉತ್ತರಪ್ರದೇಶದಲ್ಲಿ ಕೆಲಸ ಮಾಡುತ್ತಿದೆ.