ಇತ್ತೀಚೆಗೆ ನಾನು ಸೌತ್ ಸಿನಿಮಾಗಳನ್ನ ನೋಡುವುದಿಲ್ಲ , ನೋಡೋದು ಇಲ್ಲ ಎಂದು ಪ್ರತಿಕ್ರಿಯೆ ನೀಡಿ ಟೀಕೆಗೆ ಗುರಿಯಾಗಿದ್ದ ನಟ ನವಾಜುದ್ದೀನ್ ಸಿದ್ಧಿಕಿಗೆ ಅವರ ಅಭಿನಯದ ಹೀರೋ ಪಂತಿ 2 ಸಿನಿಮಾ ರಿಲೀಸ್ ಆಗಿ ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದ್ರೂ ಇನ್ನೂ ಬುದ್ದಿಬಂದಂತೆ ಕಂಡಿಲ್ಲ..
ಪುಷ್ಪಾ, ಕೆಜಿಎಫ್ ಅಧ್ಯಾಯ 2 ರ ಯಶಸ್ಸಿಗೆ ನವಾಜುದ್ದೀನ್ ಸಿದ್ದಿಕಿ ಮತ್ತೆ ಪ್ರತಿಕ್ರಿಯಿಸಿದ್ದಾರೆ.. ಮತ್ತೊಮ್ಮೆ ತಾವು ದಕ್ಷಿಣ ಚಲನಚಿತ್ರಗಳನ್ನು ನೋಡುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ..
ಈ ಮೂಲಕ ಬಾಲಿವುಡ್ ಸಿನಿಮಾಗಳನ್ನ ಸೋಲಿಸಿ ಸೌತ್ ಸಿನಿಮಾಗಳು ಯಶಸ್ಸು ಕಾಣುತ್ತಿರುವುದು ಪರೋಕ್ಷವಾಗಿ ಅವರಿಂದ ಸಹಿಸಲಾಗುತ್ತಿಲ್ಲ ಎಂಬುದನ್ನ ತೋರಿಸಿದೆ.. ‘ದಕ್ಷಿಣ ಚಿತ್ರಗಳು ಮಾತ್ರವಲ್ಲ, ನಾನು ವಾಣಿಜ್ಯ ಚಲನಚಿತ್ರಗಳನ್ನು ನೋಡುವುದಿಲ್ಲ ಎಂದಿದ್ಧಾರೆ..
ಅಲ್ಲದೇ KGF 2 , RRR , ಪುಷ್ಪ ಸಿನಿಮಾಗಳಿಗೆ ಅರ್ಹತೆ ಮೀರಿ ಯಶಸ್ಸು ಸಿಗುತ್ತಿದೆ ಜನರ ಪ್ರೀತಿ ಸಿಗುತ್ತಿದೆ ಎಂದಿದ್ಧಾರೆ..