ರಾಧಿಕಾ ಪಂಡಿತ್ ಕಮ್ ಬ್ಯಾಕ್ ಮಾಡುವಂತೆ ಅಭಿಮಾನಿಗಳ ಒತ್ತಾಯ
ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕ ಪಂಡಿತ್ ಅವರು ಸ್ಟಾರ್ ಗಳ ಜೊತೆಗೆ ಬಣ್ಣ ಹಚ್ಚಿ ಮಿಂಚಿದವರು.. ವಿವಾಹದ ನಂತರ ಮನೆ ಮಕ್ಕಳ ಜವಾಬ್ದಾರಿ ಹೊತ್ತು ಸಿನಿಮಾರಂಗದಿಂದ ಸಂಪೂರ್ಣವಾಗಿ ಅಂತರ ಕಾಯ್ದುಕೊಂಡಿರುವ ರಾಧಿಕಾ ಪಂಡಿತ್ ಈಗಲೂ ಸಹ ಮತ್ತೆ ಸಿನಿಮಾಗಳಲ್ಲಿ ನಟಿಸಬೇಕೆಂಬುದು ಅವರ ಅಭಿಮಾನಿಗಳ ಆಸೆ..
ಇತ್ತೀಚೆಗೆ ರಾಧಿಕಾ ಪಂಡಿತ್ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಹೊಸ ಫೋಟೋವೊಂದನ್ನು ಹಾಕಿ ನಾನೂ ನಾಚುತ್ತೇನೆ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ಸುಮಾರು 6 ವರ್ಷಗಳಿಂದ ರಾಧಿಕಾ ಬಣ್ಣ ಹಚ್ಚಿಲ್ಲ.. ಯಶ್ ಅವರ ಜೊತೆಗೆ ಜಾಹೀರಾತೊಂದರಲ್ಲಷ್ಟೇ ಕಾಣಿಸಿಕೊಂಡಿದ್ದರು.. ಅವರ ಅಭಿನಯದ ಕೊನೆಯ ಸಿನಿಮಾ ಆದಿ ಲಕ್ಷ್ಮಿ ಪುರಾಣ. ಆ ನಂತರ ಅವರು ತೆರೆಯ ಮೇಲೆ ಕಾಣಿಸಿಕೊಂಡಿಲ್ಲ.
ಆದ್ರೆ ಸೋಷಿಇಯಲ್ ಮೀಡಿಯಾದಲ್ಲಿ ಅಭಿಮಾನಿಗಳು ರಾಧಿಕಾ ಅವರು ಮತ್ತೆ ಸಿನಿಮಾರಂಗಕ್ಕೆ ಮರಳಬೇಕೆಂದು ಒತ್ತಾಯಿಸುತ್ತಲೇ ಇದ್ಧಾರೆ..