ಇಂದು ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಪ್ ನಟಿಯರ ಲಿಸ್ಟ್ ನಲ್ಲಿ ರಶ್ಮಿಕಾ ಮಂದಣ್ಣ ಹೆಸರು ಗಳಿಸಿರುವುದಕ್ಕೆ ಕಾರಣ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ.. ಸಿನಿಮಾದಲ್ಲಿ ಅವರಿಗೆ ಅವಕಾಶ ಕೊಟ್ಟ ಮಾಜಿ ಪ್ರಿಯಕರ ನಟ ರಕ್ಷಿತ್ ಶೆಟ್ಟಿ ಅವರು..
ರಶ್ಮಿಕಾ ಸದ್ಯ ಟಾಲಿವುಡಡ್ , ಬಾಲಿವುಡ್ , ಕಾಲಿವುಡ್ ನಲ್ಲೂ ಮಿಂಚುತ್ತಿದ್ದಾರೆ.. ಅವರಿಗೆ ಎಷ್ಟೋ ಅಭಿಮಾನಿಗಳೂ ಇದ್ದಾರೆ.. ಆದ್ರೆ ಅಭಿಮಾನಿಗಳಷ್ಟೇ ಅವರನ್ನ ದ್ವೇಶಿಸುವವರ ಸಂಖ್ಯೆಯೂ ಇದೆ.. ಅದ್ರಲ್ಲೂ ಕನ್ನಡದವರಿಂತೂ ರಶ್ಮಿಕಾ ಕಂಡ್ರೆ ಅಷ್ಟಕಷ್ಟೇ.. ಕನ್ನಡ ಕಡೆಗಣನೆ , ರಕ್ಷಿತ್ ಶೆಟ್ಟಿ ಜೊತೆಗೆ ಎಂಜೇಜ್ ಮೆಂಟ್ ಮುರಿದುಕೊಂಡಿದ್ದು ಸೇರಿ ಇನ್ನೂ ಹಲವಾರು ವಿಚಾರಗಳಿಂದ ರಶ್ಮಿಕಾ ಮೇಲೆ ಅನೇಕರಿಗೆ ಕೋಪವಿದೆ..
ಆಗಾಗ ರಶ್ಮಿಕಾ ಟ್ರೋಲ್ ಆಗ್ತಲೇ ಇರುತ್ತಾರೆ… ಸದ್ಯ ಬಾಲಿವುಡ್ ನಲ್ಲಿ 3 ನೇ ಸಿನಿಮಾದಲ್ಲಿ ರಣ್ ವೀರ್ ಜೊತೆಗೆ ನಟಿಸುತ್ತಿರುವ ರಶ್ಮಿಕಾ ಇತ್ತೀಚೆಗೆ ರಣವೀರ್ ಜೊತೆಗೆ ಮನಾಲಿಯಲ್ಲಿ ಕಾಣಿಸಿಕೊಂಡಿದ್ದರು.
ಇದೀಗ ಜಾಗತಿಕ ಮಟ್ಟದಲ್ಲಿ ಇನ್ಸ್ಟಾಗ್ರಾಮ್ ಪ್ರಭಾವಿಗಳ ಸಮೀಕ್ಷೆಯಾಗಿದ್ದು, ಆ ಸಮೀಕ್ಷೆಯಲ್ಲಿ ರಶ್ಮಿಕಾ ಮಂದಣ್ಣ 19ನೇ ಸ್ಥಾನ ಪಡೆದಿದ್ದಾರೆ. ಇನ್ಸ್ಟಾಗ್ರಾಮ್ ಪೇಜ್ನಲ್ಲಿ 31 ಮಿಲಿಯನ್ಗೂ ಹೆಚ್ಚು ಹಿಂಬಾಲಕರನ್ನ ಹೊಂದಿದ್ದಾರೆ ಕಿರಿಕ್ ರಾಣಿ.. ಅಷ್ಟೇ ಅಲ್ಲ ಈವರೆಗೂ ಈ ಪಟ್ಟಿಯಲ್ಲಿ ಕಾಣಿಸಿಕೊಂಡ ಕನ್ನಡದ ಏಕೈಕ ಸ್ಟಾರ್ ಆಗಿದ್ದಾರೆ.
ಬಾಲಿವುಡ್ ನಟಿ ಆಲಿಯಾ ಭಟ್ ಈ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದರೆ, ಪ್ರಿಯಾಂಕಾ ಚೋಪ್ರಾಗೆ 13ನೇ ಸ್ಥಾನ, ಅಕ್ಷಯ್ ಕುಮಾರ್ ಅವರಿಗೆ 14ನೇ ಸ್ಥಾನ, ಶ್ರದ್ಧಾ ಕಪೂರ್ ಅವರಿಗೆ 18ನೇ ಸ್ಥಾನ ಸಿಕ್ಕಿದೆ.
ದಕ್ಷಿಣದ ತಾರೆಯರು ಮೊದಲ ಇಪ್ಪತ್ತು ಸ್ಥಾನಗಳಲ್ಲಿ ಕಾಣಿಸಿಕೊಂಡಿಲ್ಲ.. 64.1 ಮಿಲಿಯನ್ ಹಿಂಬಾಲಕರನ್ನು ಹೊಂದುವ ಮೂಲಕ ಭಾರತೀಯ ಸೆಲೆಬ್ರಿಟಿಗಳಲ್ಲಿ ಆಲಿಯಾ ಭಟ್ ಮುಂದಿದ್ದಾರೆ.
ಮೊದಲನೇ ಸ್ಥಾನ ಅಮೆರಿಕಾದ ನಟ ಜೆಂಡಾಯ ಪಾಲಾಗಿದ್ದರೆ, ಎರಡನೇ ಸ್ಥಾನದಲ್ಲಿ ಸ್ಪೈಡರ್ ಮ್ಯಾನ್ ಖ್ಯಾತಿಯ ನಟ ಟಾಮ್ ಹಾಲಂಡ್ ಇದ್ದಾರೆ. ನಂತರ ಸ್ಥಾನಗಳು ಡಾನ್ ಜಾನ್ಸನ್, ಜೆ ಹೋಪ್, ವಿಲ್ ಸ್ಮಿತ್ ಪಾಲಾಗಿವೆ. ಜನ್ನಿಫರ್ ಲೊಜೆಪ್, ಕ್ರಿಸ್ ಹೆಮ್ಸ್ ವರ್ಥ್, ರಾಬರ್ಟ್ ಡೌನಿ ಜ್ಯೂನಿಯನ್ ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಪುಷ್ಪ ಸಸಿನಿಮಾದ ಸಕ್ಸಸ್ ನ ನಂತರ ಪುಷ್ಪ 2 ನಲ್ಲಿ ಮತ್ತೆ ಬಾಲಿವುಡ್ ನಲ್ಲೂ ಬ್ಯುಸಿಯಾಗಿರುವ ರಶ್ಮಿಕಾ ತಮಿಳಿನ ಸೂಪರ್ ಸ್ಟಾರ್ ದಳಪತಿ ವಿಜಯ್ 66ನೇ ಸಿನಿಮಾಗೂ ಆಯ್ಕೆಯಾಗಿದ್ದರು.. ಈ ಸಿನಿಮಾದ ಮುಹೂರ್ತ ಇತ್ತೀಚೆಗೆ ನೆರವೇರಿದೆ..
ಅಂದ್ಹಾಗೆ ರಶ್ಮಿಕಾಗೆ ಸೋಲು ಆಗೇ ಇಲ್ಲ ಅಂತೇನಿಲ್ಲ..
ರಶ್ಮಿಕಾಗೆ ಮೊದಲ ಸೋಲುಣಿಸಿದ್ದು ತೆಲುಗಿನ ಆಡವಾಳ್ಳು ಮೀಕು ಜೋಹಾರ್ಲು ಸಿನಿಮಾ.
ಆಡವಾಳ್ಳು ಮೀಕು ಜೋಹಾರ್ಲು ಸಿನಿಮಾ ರಶ್ಮಿಕಾಗೆ ಮೊದಲ ಸೋಲಿನ ರುಚಿ ತೋರಿಸಿದೆ.. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮ್ಯಾಜಿಕ್ ಮಾಡಿಲ್ಲ.
ಅದೃಷ್ಟದ ರಾಣಿ ರಶ್ಮಿಕಾಗೆ ಈಗ ಸೋಲು ಅಂದ್ರೇನು ಅನ್ನೋದು ಗೊತ್ತಾಗಿದೆ..
ರಶ್ಮಿಕಾ ಮಂದಣ್ಣ ಜೊತೆಗೆ ನಟ ಶರ್ವಾನಂದ್ ಅಭಿನಯದ ಆಡವಾಳ್ಳು ಮೀಕು ಜೋಹಾರ್ಲು ಸಿನಿಮಾಗೆ ಪ್ರೇಕ್ಷರಿಂದ ಅಷ್ಟಾಗಿ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ.. ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ ರಶ್ಮಿಕಾ ಈ ಸಿನಿಮಾ ಒಪ್ಪಿ ತಪ್ಪು ಮಾಡಿದ್ದಾರೆ ಎಂದೆಲ್ಲಾ ಹೇಳ್ತಿದ್ದಾರೆ ನೆಟ್ಟಿಗರು..