ಮೇಘನಾ ರಾಜ್ , ಚಿರಂಜೀವಿ ಸರ್ಜಾ 4 ನೇ ವಾರ್ಷಿಕೋತ್ಸವ
ಇಂದು ಸ್ಯಾಂಡಲ್ ವುಡ್ ನಟರಾದ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರ 4 ನೇ ವಿವಾಹ ವಾರ್ಷಿಕೋತ್ಸವ.. ಮೇಘನಾ ಮತ್ತು ಚಿರು 2018ರಲ್ಲಿ ವೈವಾಹಿಕ ಬಾಳಿಗೆ ಕಾಲಿಟ್ಟರು. ಆದ್ರೆ ಈ ವರ್ಷ ಸಂಭ್ರಮಾಚರಣೆಯಿದ್ದರೂ ಚಿರು ದೈಹಿಕವಾಗಿ ಕುಟುಂಬದವರು , ಅಭಿಮಾನಿಗಳ ಜೊತೆಗೆ ಇಲ್ಲ ಎನ್ನುವ ನೋವಿದೆ .
ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರು ಸುಮಾರು ಹತ್ತು ವರ್ಷಗಳ ಸ್ನೇಹ ಹಾಗೂ ಐದು ವರ್ಷಗಳ ಕಾಲ ಪ್ರೀತಿಸಿದ ನಂತರ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕ್ರಿಶ್ಚಿಯನ್ ಮತ್ತು ಹಿಂದೂ ಎರೆಡೂ ಸಂಪ್ರದಾಯದಲ್ಲೂ ಈ ಜೋಡಿ ಮದುವೆಯಾಗಿದ್ದರು. 2018 ಮೇ 2ರಂದು ಚಿರಂಜೀವಿ ಸರ್ಜಾ ಜೊತೆ ಮೇಘನಾ ಹಸೆಮಣೆ ಏರಿತ್ತು..
ಮೇಘನಾ ಮಗ ರಾಯನ್ ಗೆ ಜೊತೆಗೆ ಆಗಾಗ ಫೋಟೋಗಳನ್ನ ಹಂಚಿಕೊಳ್ತಾ ಇರುತ್ತಾರೆ..
2020ರಲ್ಲಿ ಹೃದಯಾಗಾತದಿಂದ ಚಿರು ವಿಧಿವಶರಾಗಿದ್ದರು. ಸದ್ಯ ಮೇಘನಾ ಮರಳಿ ಬಣ್ಣದ ಜಗತ್ತಿಗೆ ಕಮ್ ಬ್ಯಾಕ್ ಮಾಡ್ತಿದ್ದು , ಜಾಹಿರಾತು ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಳ್ತಿದ್ದಾರೆ..