ಕೆಲ ತಿಂಗಳುಗಳಿಂದ ಕಡಿಮೆಯಾಗಿದ್ದ ಕೊರೊನಾ ಅಲೆ ಇದೀಗ ಮತ್ತೆ ಏರಿಕೆಯಾಗ್ತಿದೆ… ದಿನೇ ದಿನೇ ಕೇಸ್ ಗಳ ಸಂಖ್ಯೆ ಹೆಚ್ಚಾಗ್ತಿರೋದು 4 ನೇ ಅಲೆಗೆ ಸೂಚನೆ ನೀಡಿದೆ… ಈಗಷ್ಟೇ ಚೇತರಿಸಿಕೊಂಡಿರುವ ಸಿನಿಮಾರಂಗಕ್ಕೆ ಇದೀಗ ಮತ್ತೊಮ್ಮೆ ಆತಂಕ ಶುರುವಾಗಿಬಿಟ್ಟಿದೆ..
ಇನ್ಮುಂದೆ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗಬೇಕಿವೆ.. ಆದ್ರೆ ಕೊರೊನಾದಿಂದಾಗಿ ಮತ್ತೆ ಥಿಯೇಟರ್ ಗಳಲ್ಲಿ 50 % ಸೀಟಿಂಗ್ ರೂಲ್ಸ್ ಜಾರಿ ಆಗುವ ಭೀತಿ ಶುರುವಾಗಿಬಿಟ್ಟಿದೆ.. ಕೊರೊನಾ 4ನೇ ಅಲೆ ಸದ್ದು ಮಾಡ್ತರೋ ಬೆನ್ನಲ್ಲೇ ಲಾಕ್ ಡೌನ್ ಸಿನಿಮಾ ಥಿಯೇಟರ್ ಗಳಲ್ಲಿ 50 % ಸೀಟಿಂಗ್ ಮಾತುಗಳು ಕೇಳಿ ಬರುತ್ತಿವೆ..
Bollywood : ಮತ್ತೆ ತೆರೆ ಹಂಚಿಕೊಳ್ತಿದ್ದಾರೆ ಶಾರುಕ್ – ಕಾಜಲ್
ಮೇ ತಿಂಗಳ ಅಂತ್ಯದಲ್ಲಿ ಕೊರೊನಾ ಅಬ್ಬರ ಮತ್ತೆ ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಇದ್ರಿಂದಾಗಿ ಚಿತ್ರರಂಗ , ಸಿನಿಮಾ ಮಂದಿರಗಳ ಮಾಲೀಕರಿಗೆ ಮತ್ತೆ ತಲೆ ನೋವು ಶುರುವಾಗಿದೆ..
ಕಳೆದ ಬಾರಿ 2021ರ ಡಿಸೆಂಬರ್ ಕೊನೆ ವಾರದಲ್ಲಿ ಒಮಿಕ್ರಾನ್ ಹಾವಳಿ ಹೆಚ್ಚಾದಾಗ ಜನವರಿ 15 ರಿಂದಲೇ ಚಿತ್ರಮಂದಿರಗಳಲ್ಲಿ 50% ರಷ್ಟು ಬಳಕೆಗೆ ಮಾತ್ರ ಅವಕಾಶ ನೀಡಲಾಗಿತ್ತು.
ಆಗ ಎಷ್ಟೋ ಸಿನಿಮಾಗಳು ರಿಲೀಸ್ ಡೇಟ್ ಗಳನ್ನ ಮುಂದೂಡಬೇಕಾಯ್ತು.. ಸಿನಿಮಾ ರಂಗಕ್ಕೆ ಸಾಕಷ್ಟು ನಷ್ಟವಾಗಿತ್ತು..
ಒಂದು ವೇಳೆ ಸಿನಿಮಾಮಂದಿರಗಳಲ್ಲಿ ಮೇ ಅಂತ್ಯ ಜೂನ್ ನಲ್ಲಿ 50 % ಸೀಟಿಂಗ್ ರೂಲ್ಸ್ ವಿಧಿಸಿದ್ದೇ ಆದಲ್ಲಿ ಇಂಡಿಯನ್ ಸಿನಿಮಾಗಳಾದ ವಿಕ್ರಾಂತ್ ರೋಣದಂತಹ ಸಿನಿಮಾಗಳ ಜೊತೆಗೆ , ದೊಡ್ಡ ದೊಡ್ಡ ಸಿನಿಮಾಗಳು , ಹೊಸಬರ ಸಿನಿಮಾಗಳು ಕೂಡ ರಿಲೀಸ್ ದಿನಾಂಕವನ್ನ ಮುಂದೂಡುವ ಸಾಧ್ಯತೆಯಿದೆ..