ಅಜಯ್ ದೇವಗನ್ ಅಭಿನಯದ ರನ್ವೇ 34 , ಟೈಗರ್ ಶ್ರಾಪ್ ಅಭಿನಯದ ಹೀರೋಪಂತಿ 2 ಬಾಕ್ಸ್ ನಲ್ಲಿ ಮೊದಲನೇ ವಾರಾಂತ್ಯದಲ್ಲಿ ಯಶ್ KGF 2 ಸಿನಿಮಾ ಮುಂದೆ ಡಲ್ ಆಗಿದೆ.. ಅಲ್ಲಲ್ಲಾ ಕಂಪ್ಲೀಟ್ ನಿಲ್ ಆಗಿದೆ ಅಂದ್ರೂ ತಪ್ಪಾಗಲ್ಲ..
ಅಜಯ್ ದೇವಗನ್ ರನ್ವೇ 34 ಮತ್ತು ಟೈಗರ್ ಶ್ರಾಫ್ ಅಭಿನಯದ ಹೀರೋಪಂತಿ 2 ಗಲ್ಲಾಪೆಟ್ಟಿಗೆಯಲ್ಲಿ ಉಳಿದುಕೊಳ್ಳಲು ಹೆಣಗಾಡುವ ಪರಿಸ್ಥಿತಿಯಿದೆ. ಎರಡೂ ಚಿತ್ರಗಳು ಏಪ್ರಿಲ್ 29 ರಂದು ಬಿಡುಗಡೆಯಾದಾಗಾ KGF 2 ಗೆ ಟಕ್ಕರ್ ಕೊಡಲಿವೆ ಎನ್ನಲಾಗಿತ್ತಾದ್ರೂ,,, ಈಗ KGf 2 ಗೆ ಇವೆರೆಡೂ ಸಿನಿಮಾಗಳಿಂದ ಒಂದಿಷ್ಟೂ ತೊಂದರೆಯಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ..
ಹೀರೋಪಂತಿ 2 ಮೊದಲ ದಿನ 6 ಕೋಟಿ ರೂ. ಎರಡು ದಿನದಲ್ಲಿ 4.75 ಕೋಟಿ ಮತ್ತು 3 ನೇ ದಿನದಂದು ಸುಮಾರು 4.25 ಕೋಟಿ ರೂ. ಬಾಚಿದೆ.. ಒಟ್ಟಾರೆಯಾಗಿದೆ 15.25 ಕೋಟಿಗೆ ತೃಪ್ತಿ ಪಟ್ಟಿದೆ..
ಅಜಯ್ ದೇವಗನ್ ಅವರ ರನ್ ವೇ 34 ಸಿನಿಮಾ ಮೊದಲ ದಿನ 2 ಕೋಟಿ ಸಂಗ್ರಹಿಸಿದ್ದು, ಎರಡನೇ ದಿನದಂದು 4 ಕೋಟಿ ರೂ ಕಲೆಕ್ಷನ್ ಮಾಡಿದೆ. ಒಟ್ಟು ಎರಡು ದಿನಗಳಲ್ಲಿ 7.5 ಕೋಟಿ ಕಲೆಕ್ಷನ್ ಮಾಡಿದೆ.. ಆದ್ರೆ ಇವೆರೆಡೂ ಸಿನಿಮಾಗಳ ಒಟ್ಟಾರೆ ಕಲೆಕ್ಷನ್ ಅನ್ನ 18ನೇ ದಿನ ಒಂದ್ರಲ್ಲೇ KGF 2 ಮಾಡಿದೆ..
ಕೆಜಿಎಫ್ 2 18ನೇ ದಿನವೂ ಮೋಡಿ ಮಾಡಿದೆ. ಏಪ್ರಿಲ್ 14 ರಿಂದ ಇಲ್ಲಿವರೆಗೂ ಮೂರು ವಾರಗಳ ಕಾಲ ‘ಕೆಜಿಎಫ್ 2’ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಲಿವುಡ್ ಮೂಲಗಳ ಪ್ರಕಾರ, ಇಲ್ಲಿವರೆಗೂ ಸುಮಾರು 1040 ಕೋಟಿ ಕಲೆಕ್ಷನ್ ಮಾಡಿದ ಎನ್ನಲಾಗುತ್ತಿದೆ. 18ನೇ ದಿನ ವರ್ಲ್ಡ್ ವೈಡ್ ಕಲೆಕ್ಷನ್ ಸುಮಾರು 32 ಕೋಟಿ ದಾಟಿದೆ ಎಂದು ಅಂದಾಜಿಸಲಾಗಿದೆ.
18 ನೇ ದಿನ KGF 2 ಹಹಿಂದಿ ಆವೃತ್ತಿಯಲ್ಲೇ 11.25 ಕೋಟಿ ಗಳಿಸಿದೆ.