ಬಾಲಿವುಡ್ ನ ಒನ್ ಆಫ್ ದ ಮೋಸ್ಟ್ ಆಲ್ ಟೈಮ್ ರೋಮ್ಯಾಂಟಿಕ್ ಆನ್ ಸ್ಕ್ರೀನ್ ಜೋಡಿ ಅಂದ್ರೆ ಶಾರುಕ್ ಖಾನ್ ಮತ್ತು ಕಾಜಲ್… ಕಭಿ ಖುಷಿ ಕಬಿ ಗಮ್ , ಕುಚ್ ಕುಚ್ ಹೋತಾಹೆ , ದಿಲ್ವಾಲೆ , ಬಾಜಿಗಾರ್ ಅಂತಹ ಸೂಪರ್ ಹಿಟ್ ಸಿನಿಮಾಗಳ ಮೂಲಕ ಜನರ ಫೇವರೇಟ್ ಆನ್ ಸ್ಕ್ರೀನ್ ಕಪಲ್ ಆಗಿದ್ದರು.
ಇದೀಗ ಮತ್ತೊಮ್ಮೆ ಈ ಜೋಡಿ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ತಿದ್ದು ಇವರಿಬ್ಬರನ್ನೂ ಮತ್ತೆ ಒಟ್ಟಿಗೆ ನೋಡಬೇಕೆಂಬ ಅಭಿಮಾನಿಗಳ ಆಸೆಯೂ ಈಡೇರುತ್ತಿದೆ.. ಬಾಲಿವುಡ್ ನ ಸ್ಟಾರ್ ನಿರ್ಮಾಕಪ ಕಮ್ ನಿರ್ದೇಶಕರಾದ ಕರಣ್ ಜೋಹರ್ ಆಕ್ಷನ್ ಕಟ್ ಹೇಳುತ್ತಿರುವ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ಈ ಜೋಡಿ ಕಾಣಿಸಿಕೊಳ್ತಿರುವುದು ವಿಶೇಷ..
ಅಂದ್ಹಾಗೆ ಈ ಸಿನಿಮಾದಲ್ಲಿ ಈ ಜೋಡಿ ಕೇವಲ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.. ಯಾಕಂದ್ರೆ ಈ ಸಿನಿಮಾ ನಾಯಕ ನಾಯಕಿ ಬಂದು ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್…
ಆಲಿಯಾ ಭಟ್ ರಣಬೀರ್ ಇತ್ತೀಚೆಗೆ ಹಸೆಮಣೆ ಏರಿದ್ದಾರೆ.. ರಿಯಲ್ ಲೈಫ್ ನಲ್ಲೂ ಒಂದಾಗಿರುವ ಈ ಜೋಡಿ ಈ ಸಿನಿಮಾದಲ್ಲೂ ನಾಯಕ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದು ಅಭಿಮಾನಿಗಳ ಕಾತರತೆ ಹೆಚ್ಚಾಗಿದೆ..