ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಪ್ರಸ್ತುತ ರಿಯಾಲಿಟಿ ಡ್ಯಾನ್ಸ್ ಶೋಗೂ ಜಡ್ಜ್ ಆಗಿದ್ಧಾರೆ..
ಇದೀಗ ವೆಬ್ ಸೀರೀಸ್ ಗೂ ಪ್ರವೇಶಿಸುತ್ತಿದ್ದಾರೆ ಶಿವಣ್ಣ.. ಪುತ್ರಿ ನಿವೇದಿತಾ ನಿರ್ಮಾಣದ ವೆಬ್ ಸೀರೀಸ್ ನಲ್ಲಿ ಕಾಣಿಸಿಕೊಳ್ತಿದ್ಧಾರೆ..
ಈ ಬಗ್ಗೆ ಶಿವಣ್ಣ ಮಾಧ್ಯಮದವರ ಜೊತೆಗೆ ಮಾತನಾಡಿದ್ದು , “ ನಾನು ವೆನ್ ಸೀರೀಸ್ ಮಾಡ್ತಾ ಇದ್ದೇನೆ. ನನ್ನ ಮಗಳೇ ಅದನ್ನ ನಿರ್ಮಾಣ ಮಾಡುತ್ತಿದ್ದಾಳೆ” ಎಂದು ತಿಳಿಸಸಿದ್ಧಾರೆ..
ಕನ್ನಡದ ಹೊಸ ಓಟಿಟಿ ಆ್ಯಪ್ ‘ಟಾಕೀಸ್’ ಅನ್ನು ಲಾಂಚ್ ಮಾಡಿದ ನಂತರ ಮಾತನಾಡಿದ ಶಿವಣ್ಣ ಕೋವಿಡ್ ಟೈಮ್ನಲ್ಲಿ ನಮಗೆ ವೆಬ್ ಸಿರೀಸ್ ಅಂದ್ರೆ ಏನು ಅನ್ನೋದು ಗೊತ್ತಾಯಿತು . ಬೇರೆ ಬೇರೆ ರೀತಿಯ ಸಾಕಷ್ಟು ವೆಬ್ ಸಿರೀಸ್ ಗಳನ್ನು ನೋಡಿ ನಾನು ಕೂಡ ಸಾಕಷ್ಟು ಕಲಿತಿದ್ದೇನೆ. ಕನ್ನಡದ ಕಂಟೆಂಟ್ ನ ತಗೋಳೋದಕ್ಕೆ ಭಯ ಪಡ್ತಾರೆ. ಹಿಂದಿ, ತಮಿಳು, ತೆಲುಗು ಎಲ್ಲ ಭಾಷೆಯ ಕಂಟೆಂಟ್ ಹೋಗ್ತಿದೆ. ಆದರೆ ಕನ್ನಡದ ಕಂಟೆಂಟ್ನ ತೆಗೆದುಕೊಳ್ಳುವುದಕ್ಕೆ ಧೈರ್ಯ ಮಾಡ್ತಾ ಇರಲಿಲ್ಲ. ಈ ಟಾಕೀಸ್ ಟೀಮ್ ನವರು ಆ ಧೈರ್ಯ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ಮಗಳು ವೆಬ್ ಸಿರೀಸ್ ನಿರ್ಮಾಣವನ್ನು ಶುರು ಮಾಡಿದ್ದಾಳೆ. ಶುರುವಾಗಿ ನಾಲ್ಕು ವರ್ಷ ಆಯ್ತು. ಈಗಾಗಲೇ ‘ಹೇಟ್ ಯೂ ರೊಮಿಯೋ’, ‘ಬೈ ಮಿಸ್ಟೇಕ್’, ‘ಹನಿಮೂನ್’ ಅಂತ ಮೂರು ವೆಬ್ ಸಿರೀಸ್ ಮಾಡಿದ್ದೇವೆ. ನಮ್ ಹತ್ರ ಇನ್ನೂ ಏಳು ಸ್ಟೋರಿ ಇದೆ. ಒಂದೇ ಸಲಕ್ಕೆ ಏಳು ವೆಬ್ ಸಿರೀಸ್ ಮಾಡಬೇಕು ಅಂತ ಪ್ಲ್ಯಾನ್ ಮಾಡಿದ್ದೀವಿ ಎಂದು ಹೇಳಿದರು.