ಅಪ್ಪು ಭಾವಚಿತ್ರ ತೆರವು ವಿಚಾರ : ಶಿವಣ್ಣ ಪ್ರತಿಕ್ರಿಯೆ
ತಿರುಪತಿ ತಿರುಮಲದ ದೇವಸ್ಥಾನಕ್ಕೆ ಹೋಗಿದ್ದಾಗ ಕಾರಿನ ಮೇಲಿದ್ದ ಪುನೀತ್ ರಾಜ್ ಕುಮಾರ್ ಚಿತ್ರವನ್ನ ತೆಗಸಿದ್ದಕ್ಕೆ ಶಿವರಾಜ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಣ್ಣ ಪುನೀತ್ ಭಾವಚಿತ್ರ ತೆಗಸಿರುವ ವಿಚಾರ ನನಗೆ ಗೊತ್ತಿಲ್ಲ, ಆದರೆ ಯಾರದ್ದೇ ಆಗಲಿ ಈ ರೀತಿ ಮಾಡಬಾರದು. ನನ್ನ ತಮ್ಮ ಅಂಥ ಹೇಳುತ್ತಿಲ್ಲ ಏಕೆಂದರೆ ಅಭಿಮಾನಿಗಳು ಅಭಿಮಾನದಿಂದ ಪೋಟೋ ಹಾಕಿರುತ್ತಾರೆ ಅವರ ಭಾವನೆಗಳಿಗೆ ಧಕ್ಕೆ ತರಬಾರದು ಎಂದು ಶಿವರಾಜ್ ಕುಮಾರ್ ಹೇಳಿದರು.
ಬೆಂಗಳೂರಿನಿಂದ ಕುಟುಂಬ ಸಮೇತ ಆಗಮಿಸಿದ್ದ ಅಪ್ಪು ಅಭಿಮಾನಿ ತುಂಬ ನೋವಿನಿಂದ ಅಪ್ಪು ಭಾವಚಿತ್ರದ ಸ್ಟಿಕರ್ ತೆಗೆಯುತ್ತಿದ್ದ ದೃಶ್ಯವನ್ನು ಕರವೇ ಗಜಸೇವೆ ರಾಜ್ಯಾಧ್ಯಕ್ಷ ತಾಯ್ನಾಡು ರಾಘವೇಂದ್ರ ವೀಡಿಯೋ ರೆಕಾರ್ಡ್ ಮಾಡಿ ಇಲ್ಲಾಗುತ್ತಿರುವ ಘಟನೆಯನ್ನು ವಿವರಿಸಿದ್ದಾರೆ.