ಈಗಾಗಲೇ ನಟಿ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣ ಸಂಚಲನ ಸೃಷ್ಟಿಸಿದ್ದು , ಮಾಲಿವುಡ್ ನಟ ದಿಲೀಪ್ ಕುಮಾರ್ ಸಹ ಜಾಮೀನಿಗಾಗಿ ಓಡಾಡುತ್ತಿದ್ಧಾರೆ.. ಪ್ರಮುಖ ಆರೋಪಿಯಾಗಿರುವ ವಿಚಾರಣೆ ಪಪ್ರಸ್ತುತ ನ್ಯಾಯಾಲಯದಲ್ಲಿದೆ..
ಇತ್ತೀಚೆಗೆ ಮತ್ತೊಬ್ಬ ಮಾಲಿವುಡ್ ನಟ , ನಿರ್ಮಾಪಕನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ.. ಸಿನಿಮಾದಲ್ಲಿ ಅವಕಾಶ ಕೊಡಿಸೋ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ವಿಜಯ್ ಬಾಬು ಅವರ ಮೇಲಿದೆ..
ಏಪ್ರಿಲ್ 22 ರಂದು ಯುವತಿ ನೀಡಿರುವ ದೂರಿನ ಮೇರೆಗೆ ಎರ್ನಾಕುಲಂ ಸೌತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಭರವಸೆ ನೀಡಿ ಕೊಚ್ಚಿಯ ಎರ್ನಾಕುಲಂ ಫ್ಲ್ಯಾಟ್ನಲ್ಲಿ ವಿಜಯ್ ಬಾಬು ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.
ಯುವತಿ ಕೋಝಿಕೋಡ್ ನಿವಾಸಿಯಾಗಿದ್ದು, ವಿಜಯ್ ಬಾಬು ವಿರುದ್ಧ ಅತ್ಯಾಚಾರ ಹಾಗೂ ದೈಹಿಕ ಹಲ್ಲೆ ನಡೆಸಿರುವುದಾಗಿ ದೂರು ನೀಡಿದ್ದಾರೆ..
ಆದ್ರೀಗ ವಿಜಯ್ ಬಾಬು ವಿರುದ್ಧ ಮತ್ತೊಂದು ದೂರು ಕೇಳಿಬಂದಿದೆ.. ಕೆಲಸದ ವೇಳೆ ವಿಜಯ್ ನನಗೆ ಬಲವಂತವಾಗಿ ಕಿಸ್ ಮಾಡಲು ಮುಂದಾಗಿದ್ದಾಗಿ ಮಹಿಳೆಯೊಬ್ಬರು ಬಹಿರಂಗವಾಗಿ ಮಾತನಾಡಿದ್ದಾರೆ.
ವಿಜಯ್ ಬಾಬು ಯಾವಾಗಲೂ ವಿಪರೀತ ಕುಡಿಯುತ್ತಾರೆ. ಅಂದು ನನಗೂ ಅವರು ಕುಡಿಯುವಂತೆ ಆಫರ್ ಮಾಡಿದರು. ನಾನು ಒಪ್ಪಲಿಲ್ಲ. ಅವರು ಕಂಠಪೂರ ಕುಡಿದದಿದ್ದರು. ಏಕಾಏಕಿ ನನಗೆ ಮುತ್ತಿಡಲು ಬಂದರು. ನಾನು ಅವರನ್ನು ದೂರ ತಳ್ಳಿದೆ. ಕೇವಲ ಒಂದೇ ಒಂದು ಕಿಸ್ ಎಂದು ಬೇಡಿಕೆ ಇಟ್ಟರು. ನಾನು ನಿರಾಕರಿಸಿ ಅಲ್ಲಿಂದ ತಪ್ಪಿಸಿಕೊಂಡು ಬಂದೆ ಎಂದು ಹೇಳಿದ್ದಾರೆ..
ಈಗಾಗಲೇ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ವಿಜಯ್ ಬಾಬು, ಈವರೆಗೂ ಪೊಲೀಸರಿಗೆ ಸಿಕ್ಕಿಲ್ಲ. ವಿದೇಶದಲ್ಲಿ ಅದದ್ರಲ್ಲೂ ದುಬೈನಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈವರೆಗೂ ಅವರನ್ನು ಬಂಧಿಸದೇ ಇರುವುದಕ್ಕೆ ಎರ್ನಾಕುಲಂ ಪೊಲೀಸ್ ವಿರುದ್ಧ ಆಕ್ರೋಶ ವ್ಯಕ್ತವಾಗ್ತಿದೆ..
ಫ್ರೈಡೇ ಫಿಲ್ಮ್ ಹೌಸ್ ಸಿನಿಮಾ ನಿರ್ಮಾಣ ಸಂಸ್ಥೆ ಸ್ಥಾಪಕರಾಗಿರುವ ವಿಜಯ್ ಬಾಬು ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದಾರೆ. 1983ರಲ್ಲಿ ಬಾಲ ನಟನಾಗಿ ಮಲೆಯಾಳಂ ಸಿನಿಮಾಗೆ ಎಂಟ್ರಿಕೊಟ್ಟ ವಿಜಯ್ ಬಾಬು ಸದ್ಯ ನಟನೆಯಲ್ಲೂ ಜನಪ್ರಿಯತೆ ಪಡೆದಿದ್ದಾರೆ..