ಬಾಕ್ಸ್ ಆಫೀಸ್ ನಲ್ಲಿ 4ನೇ ವಾರವೂ ರಾಕಿ ಭಾಯ್ ದೇ ಹವಾ ಮುಂದುವರೆದಿದೆ.. KGF 2 ತೂಫಾನ್ ಮುಂದೆ ಟೈಗರ್ , ಅಜಯ್ ದೇವಗನ್ ಫ್ಲಾಪ್ ಆಗಿದ್ದಾರೆ.. ಹಿಂದಿ ಬೆಲ್ಟ್ ನಲ್ಲೇ KGF 2 ಬಿರುಗಾಳಿ ರಭಸಕ್ಕೆ ಹೀರೋಪಂತಿ 2 , ರನ್ ವೇ 34 ಟುಸ್ ಆಗಿದೆ..
KGF 2 ಹಿಂದಿ ಬಾಕ್ಸ್ ಆಫೀಸ್ ನಲ್ಲಿ ಶೀಘ್ರದಲ್ಲೇ 400 ಕೋಟಿ ದಾಟಲಿದೆ.. ಒಟ್ಟಾರೆಯಾಗಿ ಈವರೆಗಿನ ಕಲೆಕ್ಷನ್ ನಲ್ಲೂ 1000 ಕೋಟಿ ಗಡಿ ದಾಟಿದೆ.. ನಾಲ್ಕನೇ ವಾರ ಸಿನಿಮಾ 1100 ಕೋಟಿ ಗಡಿ ದಾಟಿ RRR ರೆಕಾರ್ಡ್ ಬೀಟ್ ಮಾಡುವ ಚಾನ್ಸ್ ಇದೆ.. ಈದ್ ನಲ್ಲಿ ರಾಕಿ ಸಿನಿಮಾದ ಅಬ್ಬರಕ್ಕೆ ಮತ್ತಷ್ಟು ವೇಗ ಸಿಗಲಿದೆ..
KGF 2 ಮುಂದೆ ಟಕ್ಕರ್ ಕೊಡೋಕೆ ಬಂದ ಒಟ್ಟು ಐದು ಸಿನಿಮಾಗಳಿಗೆ ರಾಕಿ ಭಾಯ್ ಒಬ್ಬರೇ ಸಿಂಗಲ್ ಆಗಿ ಟಕ್ಕರ್ ಕೊಡ್ತಿರೋದು ಕನ್ನಡ ಸಿನಿಮಾದ ಹೆಮ್ಮೆ..
ರಿಲೀಸ್ ಆದಾಗ ರಾಕಿ ಭಾಯ್ ಹವಾ ಮುಂದೆ ದಳಪತಿ ವಿಜಯ್ ನಟನೆಯ ಬೀಸ್ಟ್ ಡಲ್ ಆಯ್ತು.. ತಮಿಳುನಾಡಿನಲ್ಲೂ ಜನ ರಾಕಿಗೇ ಜೈಕಾರ ಹಾಕಿದ್ರು.. ಮಲಯಾಳಂನಲ್ಲಿ ಅದ್ಧೂರಿ ಓಪನ್ ಪಡೆದು ಅತಿ ಹೆಚ್ಚು ಕೆಲಕ್ಷನ್ ಮಾಡಿದ ಹಿಸ್ಟರಿ ಬರೆಯಿತು..
ಬಾಲಿವುಡ್ ನಲ್ಲಿ ಫಸ್ಟ್ ಡೇ ಕಲೆಕ್ಷನ್ ನಲ್ಲೂ ಸಿನಿಮಾ ಸರ್ವಕಾಲೀನ ದಾಖಲೆ ಬರೆಯಿತು.. ಭಜರಂಗಿ ಭಾಯ್ ಜಾನ್ ದಾಖಲೆ ಮುರಿಯಿತು.. ಸದ್ಯದಲ್ಲೇ ದಂಗಲ್ ರೆಕಾರ್ಡ್ ಬ್ರೇಕ್ ಆಗಲಿದೆ..
ಜೆರ್ಸಿ ಸಿನಿಮಾ ರಿಲೀಸ್ ಆಗಿ ಹೆಸರಿಲ್ಲದಂತೆ ಹೊರಟೋಯ್ತು.. ಈಗ ರನ್ ವೇ 34 , ಹೀರೋಪಂತಿನೂ ಫ್ಲಾಪ್ ಆಗಿದ್ದು , ಬಾಲಿವುಡ್ ಸಮುದ್ರಲ್ಲಿ ಮುಳುಗುತ್ತಿರುವ ಹಡಗಂತೆ ಕಾಣ್ತಿದೆ..
KGF 2 ಹಿಂದಿ ಬೆಲ್ಟ್ ನಲ್ಲಿ ಲೆಕ್ಷನ್
ದಿನ 1 : ರೂ 53.95 ಕೋಟಿ
ದಿನ 2 : ರೂ 46.79 ಕೋಟಿ
ದಿನ 3 : ರೂ 42.90 ಕೋಟಿ
ದಿನ 4 : ರೂ 50.35 ಕೋಟಿ
ದಿನ 5 : ರೂ 25.57 ಕೋಟಿ
ದಿನ 6 : ರೂ 19.14 ಕೋಟಿ
ದಿನ 7 : ರೂ 16.35 ಕೋಟಿ
ದಿನ 8 : ರೂ 13.58 ಕೋಟಿ
ದಿನ 9 : ರೂ 11.56 ಕೋಟಿ
ದಿನ 10 : ರೂ 18.25 ಕೋಟಿ
ದಿನ 11 : ರೂ 22.68 ಕೋಟಿ
ದಿನ 12 : ರೂ 8.28 ಕೋಟಿ
ದಿನ 13: ರೂ 7.48 ಕೋಟಿ
ದಿನ 14 : ರೂ 6.25 ಕೋಟಿ
ದಿನ 15 : ರೂ 5.68 ಕೋಟಿ
ದಿನ 16 : ರೂ 4.25 ಕೋಟಿ
ದಿನ 17 : ರೂ 7.25 ಕೋಟಿ
ದಿನ 18 : ರೂ 9.27 ಕೋಟಿ
ಒಟ್ಟು : ರೂ 369.58 ಕೋಟಿ