KGF 2 ಮುಂದೆ ಬಾಲಿವುಡ್ ಹೀರೋಪಂತಿ 2 , ರನ್ ವೇ 34 ಮಕಾಡೆ ಮಲಗಿವೆ..
ಹೀರೋಪಂತಿ 2 ಮತ್ತು ರನ್ವೇ 34 ರ ಮೊದಲ ವಾರಾಂತ್ಯದ ಬಾಕ್ಸ್ ಆಫೀಸ್ ಕಲೆಕ್ಷನ್ ಡಲ್ ಆಗಿದೆ.. ಎರೆಡೂ ಸಿನಿಮಾಗಳ ಎರೆಡು ದಿನಗಳ ಒಟ್ಟಾರೆ ಕಲೆಕ್ಷನ್ ಲೆಕ್ಕ ಹಾಕಿದ್ರೂ ಕೆಜಿಎಫ್ 2 19 ನೇ ದಿನದ ಕೆಲೆಕ್ಷನ್ ಗೆ ಸಮವಾಗಿಲ್ಲ.. ಇದರಿಂದ ಬಾಲಿವುಡ್ ಮಂದಿಗೆ ತಲೆ ಕೆಟ್ಟುಹೋಗಿದೆ..
ಕಳೆದ ಶುಕ್ರವಾರ ಬಿಡುಗಡೆಯಾದ ಎರಡೂ ಹಿಂದಿ ಚಿತ್ರಗಳು – ಅಜಯ್ ದೇವಗನ್ ಅಭಿನಯದ ರನ್ವೇ 34 ಮತ್ತು ಟೈಗರ್ ಶ್ರಾಫ್ ಅವರ ಹೀರೋಪಂತಿ 2 – ತಮ್ಮ ಆರಂಭಿಕ ವಾರಾಂತ್ಯದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಮ್ಯಾಜಿಕ್ ಮಾಡಿಲ್ಲ..
ಭಾನುವಾರದ ವೇಳೆಗೆ, ಅಜಯ್ ನಿರ್ದೇಶನದ ರನ್ವೇ 34 ಬಾಕ್ಸ್ ಆಫೀಸ್ನಲ್ಲಿ ಕೇವಲ 13 ಕೋಟಿ ಸಂಗ್ರಹಿಸಿದೆ. ವಾರಾಂತ್ಯದಲ್ಲಿ 15 ಕೋಟಿ ನಿವ್ವಳ ಸಂಗ್ರಹದೊಂದಿಗೆ ಹೀರೋಪಂತಿ 2ಕೂಡ ಟುಸ್ ಆಗಿದೆ.
ಆದಾಗ್ಯೂ, ಎರಡೂ ಚಿತ್ರಗಳಿಗೂ ಸೋಲಿನ ರುಚಿ ತೋರಿಸಿದ್ದು ಕನ್ನಡದ ಬ್ಲಾಕ್ ಬಸ್ಟರ್ ಕೆಜಿಎಫ್ 2 ನ ಹಿಂದಿ ಆವೃತ್ತಿ.