‘KGF 2 ದಾಖಲೆಗೆ ನಾನೇ ಫೌಂಡೇಶನ್’ : ರವಿಚಂದ್ರನ್
ಬಾಕ್ಸ್ ಆಫೀಸ್ ನಲ್ಲಿ ನಾಲ್ಕನೇ ವಾರವೂ ತೂಫಾನ್ ಎಬ್ಬಿಸಿರುವ KGF 2 ಸಿನಿಮಾ ಇಡೀ ಕನ್ನಡ ಇಂಡಸ್ಟ್ರಿಯ ಹವಾ ಎಂತಹದ್ದು ಅಂತ ವಿಶ್ವಕ್ಕೆ ತೋರಿಸಿದೆ.. ಬಾಲಿವುಡ್ ಬಾಕ್ಸ್ ಆಫೀಸ್ ಡಾಮಿನೇಟ್ ಮಾಡ್ತಿದೆ.. ತನ್ನೆದುರು ರಿಲೀಸ್ ಆದ ಎಲ್ಲಾ ಹಿಂದಿ ಸಿನಿಮಾಗಳಿಗೆ ಸೋಲಿನ ರುಚಿ ತೋರಿಸಿದೆ..
1000 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ.. ಇದೀಗ ಈ ಸಿನಿಮಾದ ಸಕ್ಸಸ್ ಬಗ್ಗೆ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮಾತನಾಡಿದ್ದಾರೆ.
ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಈ ಸಿನಿಮಾದ ದಾಖಲೆಗೆ ಬುನಾದಿ ಹಾಕಿದ್ದು ನಾನೇ ಎಂದು ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ರವಿಚಂದ್ರನ್ ಹೇಳಿಕೊಂಡಿದ್ದಾರೆ. ಈ ಹಿಂದೆ ರವಿಚಂದ್ರನ್ ಹಾಕಿಕೊಟ್ಟ ಮಾರ್ಗದಲ್ಲಿಯೇ ಈಗ ಪ್ಯಾನ್ ಇಂಡಿಯಾ ಚಿತ್ರಗಳು ಬರುತ್ತಿದ್ದು, ಸಕ್ಸಸ್ ಕಾಣುತ್ತಿವೆ ಎಂಬುದು ಅವರ ಮಾತಿನ ತಾತ್ಪರ್ಯ.
“ಪುಟ್ಟಕ್ಕನ ಮಕ್ಕಳ”ಲ್ಲಿ ಒಬ್ಬರಾಗಲಿದ್ದಾರೆ ‘ಪಾರು’..!!!
ಎಲ್ಲಾ ಸೇರಿಕೊಂಡರೆ ಎನಾದರೂ ಮಾಡೋಕೆ ಸಾಧ್ಯ. ಕೆಜಿಎಫ್ ದಾಖಲೆ ಬಗ್ಗೆ ಮಾತಾಡುತ್ತೀವಿ. ಕೆಜಿಎಫ್ ದಾಖಲೆ ಆಗಿರಬಹುದು ಫೌಂಡೆಷನ್ ಯಾರು ಹಾಕಿದ್ದು , ನಾನೇ ಹಾಕಿದ್ದು. ಶಾಂತಿ ಕ್ರಾಂತಿ ಫೌಂಡೇಷನ್ ಆಯ್ತು. 40 ವರ್ಷ ಸಮಯ ಬೇಕಾಯ್ತು ಈ ರೆಕಾರ್ಡ್ ಆಗಲು ಎಂದಿದ್ದಾರೆ.
ಇನ್ನೂ ಎಲ್ಲರಿಗೂ KGF2 ದಾಖಲೆ ಮುರಿಯಬೇಕು ಎನ್ನುವುದೇ ಗುರಿಯಾಗಿರಬೇಕು. ಚಿತ್ರರಂಗದ ಎಲ್ಲರೂ ಕೂತು ಈ ಬಗ್ಗೆ ಚರ್ಚೆ ಮಾಡಬೇಕು. ನಮ್ಮ ಹಳ್ಳಿಯಲ್ಲಿ KGF ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತಾ ಇದೆ.
ಈ ಹಿಂದೆ 88ರಲ್ಲಿ ಫಿಲ್ಮ್ ಚೇಂಬರ್ ನಲ್ಲಿ ಒಂದು ಗಲಾಟೆ ನಡೆದಿತ್ತು. ಹೆಚ್ಚು ಖರ್ಚು ಮಾಡಿದ ಚಿತ್ರಕ್ಕೂ, ಬೇರೆ ಚಿತ್ರಕ್ಕೂ ಒಂದೇ ರೀತಿಯ ರೇಟ್ ಆಫ್ ಅಡ್ಮಿಷನ್ ಇದೆ. ನನ್ನ ಚಿತ್ರಕ್ಕೆ ಜಾಸ್ತಿ ಮಾಡಿ ಅಂತ ಕೇಳಿದಾಗ ಅದು ಸಾಧ್ಯ ಆಗಲಿಲ್ಲ. ಈಗ KGF ಅದನ್ನು ಸಾಧ್ಯ ಮಾಡಿದೆ ಎಂದಿದ್ದಾರೆ.
ರವಿಚಂದ್ರನ್ ಅವರು ನಿರ್ದೇಶನ ಮಾಡಿ ನಟಿಸಿದ್ದ ಶಾಂತಿ ಕ್ರಾಂತಿ ಚಿತ್ರ 1991ರಲ್ಲಿ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿಯೇ ರಿಲೀಸ್ ಆಗಿತ್ತು. ಈ ಚಿತ್ರವನ್ನು ಒಂದೆ ಬಾರಿಗೆ ಕನ್ನಡದ ಜೊತೆಗೆ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಶೂಟ್ ಮಾಡಿ ರಿಲೀಸ್ ಮಾಡಲಾಯಿತು.
ಅತ್ಯಂತ ದುಬಾರಿ ಮೊತ್ತದಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದರು ರವಿಚಂದ್ರನ್ ಅವರು. ಆದರೆ ಅಂದುಕೊಂಡ ಮಟ್ಟಿಗೆ ಸಿನಿಮಾ ಲಾಭ ಗಳಿಸುವಲ್ಲಿ ಎಡವಿತ್ತು. ಈ ಚಿತ್ರ ಭಾರತೀಯ ಸಿನಿಮಾರಂಗದಲ್ಲಿ ಒಂದು ಇತಿಹಾಸ ಸೃಷ್ಟಿಸಿತ್ತಾದ್ರೂ ಲಾಭದಲ್ಲಿ ನಿರಾಸೆ ಅನುಭವಿಸಿತ್ತು.