ಟೀಮ್ ಇಂಡಿಯಾದ ಆಟಗಾರ , ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೇಂಟ್ಸ್ ತಂಡವನ್ನ ಮುನ್ನೆಡುಸುತ್ತಿರುವ ಕನ್ನಡಿಗ KL RAHUL ಕ್ರಿಕೆಟ್ ಹೊರತಾಗಿ ಸುನಿಲ್ ಶೆಟ್ಟಿ ಮಗಳು ಆಥಿಯಾ ಶೆಟ್ಟಿ ಜೊತೆಗಿನ ಪ್ರೇಮ ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ..
ಕನ್ನಡಿಗ , ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಜೊತೆಗೆ ಕೆ ಎಲ್ ರಾಹುಲ್ ಡೇಟಿಂಗ್ ನಲ್ಲಿರುವ ವಿಚಾರ ಗೊತ್ತೇ ಇದೆ..
ಇದೀಗ ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ.. ಅಲ್ಲದೇ ಈ ಜೋಡಿಯ ಮದುವೆಗೆ ಈಗಾಗಲೇ ಸಿದ್ಧತೆ ಆರಂಭವಾಗಿದೆ ಎಂದು ಹೇಳಲಾಗ್ತಿದೆ..
ಅಂದ್ಹಾಗೆ ಈ ಜೋಡಿ ಹೊಸ ಮನೆಯನ್ನೂ ಖರೀದಿಸಿ ಅದರ ಇಂಟೀರಿಯರ್ ಕೆಲಸ ನೋಡಿಕೊಳ್ತಿದ್ದಾರೆ ಎನ್ನಲಾಗ್ತಿದೆ.. ಅಲ್ಲದೇ ಇತ್ತೀಚೆಗಷ್ಟೇ ವಿವಾಹವಾದ ಸ್ಟಾರ್ ಜೋಡಿ ರಣಬೀರ್ ಕಪೂರ್ ಆಲಿಯಾ ಭಟ್ ಅವರ ನೆರೆಮನೆಯವರಾಗಲಿದ್ದಾರೆಂಬ ಸುದ್ದಿ ಹರಿದಾಡ್ತಿದೆ..
ಪ್ರಸ್ತುತ ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೇಂಟ್ಸ್ ಮುನ್ನಡೆಸುತ್ತಿರುವ ಕನ್ನಡಿಗ ರಾಹುಲ್ ಹಾಗೂ ಆತಿಯಾ ಶೆಟ್ಟಿ ಈ IPL ಮುಗಿದ ತಕ್ಷಣವೇ ವಿವಾಹವಾಗಲಿದ್ದಾರೆ ಎನ್ನಲಾಗ್ತಿದೆ..
ಹೊಸ ಜೀವನ ಆರಂಭಕ್ಕೆ ಐಶಾರಾಮಿ ಮನೆಯನ್ನು ಖರೀದಿಸಿದ್ದಾರಂತೆ. ಬಾಂದ್ರಾದ ಕಾಟರ್ ರಸ್ತೆಯ ಬಳಿ 4 ಬಿಎಚ್ಕೆ ಮನೆಯೊಂದನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ರಣ್ಬೀರ್ ಹಾಗೂ ಆಲಿಯಾ ವಾಸವಿರುವ ‘ವಾಸ್ತು’ ಹೆಸರಿನ ಹೊಸ ಮನೆಗೆ ಪಕ್ಕದಲ್ಲೇ ಈ ಬಿಲ್ಡಿಂಗ್ ಇದ್ದು ಇನ್ನು ಮುಂದೆ ರಾಹುಲ್ ಹಾಗೂ ರಣ್ಬೀರ್ ನೆರೆ ಹೊರೆಯವರಾಗಲಿದ್ದಾರೆ ಎನ್ನಲಾಗ್ತಿದೆ..
Hansika : ಮಾಲ್ಡೀವ್ಸ್ ನಲ್ಲಿ ಬಿಕಿನಿಯಲ್ಲಿ ಹಾಟ್ ಫೋಟೋ ಶೂಟ್ ಮಾಡಿಸಿದ ಹನ್ಸಿಕಾ..!!