ಮಮ್ಮುಟ್ಟಿ ಅಭಿನಯದ ರೋರ್ಶಾಚ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ನಟನ ಹೋಮ್ ಪ್ರೊಡಕ್ಷನ್ ಬ್ಯಾನರ್ ಮಮ್ಮುಟ್ಟಿ ಕಂಪನಿಯಿಂದ ನಿರ್ಮಿಸಲಾದ ಚಿತ್ರ ಇದಾಗಿದ್ದು , ಈ ಸಂಸ್ಥೆಯಿಂದ ಬಿಡುಗಡೆಯಾಗ್ತಿರುವ 2ನೇ ಸಿನಿಮಾವೂ ಆಗಿದೆ..
ಮೇ 2 ರಂದು ನಟ ಮಮ್ಮುಟ್ಟಿ ಅವರ ನಿರ್ಮಾಣದ ಎರಡನೇ ಸಿನಿಮಾ ರೋರ್ ಸ್ಚಾಚ್ನ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಂಡಿದೆ. ಇದನ್ನು ಮಮ್ಮುಟ್ಟಿ ಕಂಪಾನಿ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ನಿರ್ದೇಶಕ ನಿಸಾಮ್ ಬಶೀರ್ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿದ್ಧಾರೆ. ಈ ಚಿತ್ರದಲ್ಲಿ ನಟ ಮಮ್ಮುಟ್ಟಿ ನಾಯಕನಾಗಿ ನಟಿಸಲಿದ್ದಾರೆ.
ಹೊಸ ಪೋಸ್ಟರ್ ರಿಲೀಸ್ ಆಗಿದೆ.. ಮಮ್ಮುಟಿಯ ಮುಖವನ್ನು ಗೋಣಿಚೀಲದಲ್ಲಿ ಮುಚ್ಚಲಾಗಿದ್ದು, ಫಸ್ಟ್ ಲುಕ್ ಪೋಸ್ಟರ್ ಕುತೂಹಲಕಾರಿ ಆಕ್ಷನ್ ಅಥವಾ ಥ್ರಿಲ್ಲರ್ಗೆ ಎನಿಸುವುತ್ತಿದೆ..
ಏತನ್ಮಧ್ಯೆ, ನಟ ಮಮ್ಮುಟ್ಟಿ ಅವರ ಮುಂದಿನ, ಪುಝು ಚಿತ್ರದ ಟ್ರೈಲರ್ ಅನ್ನು ಮೇ 1 ರಂದು ಅನಾವರಣಗೊಳಿಸಲಾಯಿತು. ಮಮ್ಮುಟ್ಟಿ ಅವರು ಚಿಕ್ಕ ಹುಡುಗನಿಗೆ ಶಿಸ್ತಿನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪುಝು ಚಿತ್ರವನ್ನು ಚೊಚ್ಚಲ ಚಿತ್ರ ನಿರ್ಮಾಪಕಿ ರತೀನಾ ಪಿಟಿ ನಿರ್ದೇಶಿಸಿದ್ದಾರೆ. ಒಟಿಟಿ ಪ್ಲಾಟ್ಫಾರ್ಮ್ ಸೋನಿಲೈವ್ನಲ್ಲಿ ಆನ್ಲೈನ್ನಲ್ಲಿ ಬಿಡುಗಡೆಯಾಗುವ ಚಿತ್ರವು ಐದು ಭಾಷೆಗಳಲ್ಲಿ ಸ್ಟ್ರೀಮ್ ಆಗಲಿದೆ. ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ. ಈ ಸಿನಿಮಾಗೆ ಎಸ್ ಜಾರ್ಜ್ ಅವರು ಬಂಡವಾಳ ಹೂಡಿದ್ದಾರೆ ಮತ್ತು ಹರ್ಷದ್, ಶರ್ಫು ಮತ್ತು ಸುಹಾಸ್ ಚಿತ್ರಕಥೆ ಮಾಡಿದ್ದಾರೆ. ಕಥೆ ಹರ್ಷದ್ ಛಾಯಾಗ್ರಹಣವಿದೆ..