“ಪುಟ್ಟಕ್ಕನ ಮಕ್ಕಳ”ಲ್ಲಿ ಒಬ್ಬರಾಗಲಿದ್ದಾರೆ ‘ಪಾರು’..!!!
ಪಾರು ಧಾರಾವಾಹಿ ಮೂಲಕ ಕಿರುತೆರೆ ಪ್ರಿಯರ ಅಚ್ಚುಮೆಚ್ಚಾಗಿರುವ ಪಾರು @ ಮೋಕ್ಷಿತಾ ಪೈ ಇದೀಗ ಕಿರುತೆರೆ ಟಾಪ್ ಧಾರವಾಹಿ ಆಗಿ ಕಡಿಮೆ ಸಮಯದಲ್ಲೇ ಜನರ ಪ್ರೀತಿ ಪಡೆದು ನಂಬರ್ 1 ಸ್ಥಾನದಲ್ಲಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಣ್ಣಹಚ್ಚಲಿದ್ದಾರೆ..
ಹಾಗಂತ ಕನ್ನಡದ ಆವೃತ್ತಿಯಲ್ಲಲ್ಲ , ಬದಲಾಗಿ ತಮಿಳಿನಲ್ಲಿ ಶುರುವಾಗಲಿರುವ ‘ಪಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಮೋಕ್ಷಿತಾ ಪುಟ್ಟಕ್ಕನ ಮಗಳ ಪಾತ್ರ ನಿಭಾಯಿಸಲಿದ್ಧಾರೆ ಎನ್ನಲಾಗಿದೆ..
ಈಗಾಗಲೇ ಮೋಕ್ಷಿತಾ ನಟಿಸಿದ ಚಿತ್ರವೊಂದು ರಿಲೀಸ್ ಗೆ ಸಜ್ಜಾಗಿದೆ. ವಿಜಯ್ ದುನಿಯಾ ನಿರ್ದೇಶನದ ಚಿತ್ರವೊಂದರಲ್ಲಿ ಮೋಕ್ಷಿತಾ ಪೈ ನಟಿಸಲಿದ್ದು, ಆ ಸಿನಿಮಾದ ಬಗ್ಗೆ ಇನ್ನುವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ..
ಮೋಕ್ಷಿತಾ ಪೈ ನಿರ್ಭಯಾ 2 ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಸದ್ಯಕ್ಕೆ ರಿಲೀಸ್ ಆಗಲು ರೆಡಿಯಾಗಿದ್ದು, ಯಾವಾಗ ಎಂದು ತಿಳಿದು ಬಂದಿಲ್ಲ.
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕನ್ನಡದ ಹೊರತಾಗಿ ತೆಲುಗು , ಮಲಯಾಳಮ್ ನಲ್ಲೂ ತೆರೆಕಾಣ್ತಿದೆ.. ಬೇರೆ ಬೇರೆ ಪಾತ್ರಧಾರಿಗಳಿದ್ದು ಆ ನೇಟಿವಿಟಿಗೆ ತಕ್ಕಂತೆ ಇದೆ.. ಇದೀಗ ತಮಿಳುನಲ್ಲೂ ಈ ಧಾರಾವಹಿ ಬರಲಿದ್ದು ಇಲ್ಲಿ ಮೋಕ್ಷಿತಾ ಕೂಡ ಬಣ್ಣ ಹಚ್ಚಲಿದ್ಧಾರೆ ಎನ್ನಲಾಗಿದೆ..
ಮತ್ತೊಂದು ಎಣ್ಣೆ ಸಾಂಗ್ ಬರೆದ ಯೋಗರಾಜ್ ಭಟ್..!!
Pooja Hegde : ಪೂಜಾ ಹೆಗ್ಡೆ ನಸೀಬ್ ಸರಿ ಇಲ್ವಾ…?? ಸಾಲು ಸಾಲು ಬರೀ ಸೋಲು..!!