ಮತ್ತೊಂದು ಎಣ್ಣೆ ಸಾಂಗ್ ಬರೆದ ಯೋಗರಾಜ್ ಭಟ್..!!
ವಿಕಟಕವಿ ಅಂತಲೇ ಕರೆಸಿಕೊಳ್ಳುವ ವಿಭಿನ್ನ ಸಾಲುಗಳು ವಿನೂತನ ಹಾಡುಗಳ ಮೂಲಕವೇ ಗಮನ ಸೆಳೆಯುವ ಯೋಗರಾಜ್ ಭಟ್ಟರ ಎಣ್ಣೆ ಸಾಂಗ್ ಗಳೂ ಫೇಮಸ್..
ಇದೀಗ ಯೋಗರಾಜ್ ಭಟ್ ಅವರು ಮತ್ತೊಂದು ಎಣ್ಣೆ ಸಾಂಗ್ ಬರೆದಿದ್ಧಾರೆ.. ಈಗಾಗಲೇ ಅವರ ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು ಹಾಡು ಫುಲ್ ಫೇಮಸ್.. ಇದೀಗ ಗಿರ್ಕಿ ಚಿತ್ರಕ್ಕಾಗಿ ಗ್ಲಾಸು ಗ್ಲಾಸಿಗೆ ತಾಗೊ ಟೈಮಲಿ ದೇಶ ಚಿಂತನೆ ಮಾಡೋಣ ಎಂಬ ಹಾಡನ್ನು ಬರೆದಿದ್ದಾರೆ. ಈ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿಯಾಗಿರೋದು ವಿಶೇಷ..
ಬೆಂಗಳೂರಿನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಟ ಮಿಥುನ್ ಚಕ್ರವರ್ತಿ
ಇತ್ತೀಚೆಗೆ ಹಾಡನ್ನು ದುನಿಯಾ ವಿಜಯ್ ಅವರು ಬಿಡುಗಡೆ ಮಾಡಿದ್ದಾರೆ.. A2 music ಸಂಸ್ಥೆ ಈ ಹಾಡನ್ನು ಹೊರತಂದಿದೆ. ಬಿಡುಗಡೆಯಾದ ಸ್ವಲ್ಪ ಹೊತ್ತಿನಲ್ಲೇ ಈ ಹಾಡಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಎಣ್ಣೆ ಪ್ರಿಯರಿಗೆ ಮತ್ತೊಂದು ಒಳ್ಳೆಯ ಹಾಡು ಸಿಕ್ಕಿದೆ.
ಎದಿತ್ ಫಿಲಂ ಫ್ಯಾಕ್ಟರಿ ಮತ್ತು ವಾಸುಕಿ ಮೂವೀಸ್ ಸಹಯೋಗದೊಂದಿಗೆ ತರಂಗ ವಿಶ್ವ ನಿರ್ಮಿಸಿರುವ “ಗಿರ್ಕಿ” ಚಿತ್ರವನ್ನು ಯೋಗರಾಜ್ ಭಟ್ ಅವರ ಶಿಷ್ಯ ವೀರೇಶ್ ಪಿ.ಎಂ ನಿರ್ದೇಶಿಸಿದ್ದಾರೆ. ಲವ್, ಥ್ರಿಲ್ಲರ್ ಹಾಗೂ ಕಾಮಿಡಿ ಆಕ್ಷನ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ವಾಸುಕಿ ಭುವನ್ ಅವರ ಸಹ ನಿರ್ಮಾಣವಿರುವ ಈ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ. ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ವೀರೇಶ್.ಪಿ.ಎಂ ಹಾಡುಗಳನ್ನು ಬರೆದಿದ್ದಾರೆ. ನವೀನ್ ಕುಮಾರ್ ಛಲ್ಲ ಛಾಯಾಗ್ರಹಣ ಚಿತ್ರಕ್ಕಿದೆ..