Beast : ಶೀಘ್ರವೇ ಒಟಿಟಿ ಫ್ಲಾಟ್ ಫಾರ್ಮ್ ನಲ್ಲಿ
ಏಪ್ರಿಲ್ 13 ರಂದು ರಿಲೀಸ್ ಆದ ಬೀಸ್ಟ್ KGF 2 ಮುಂದೆ ಡಲ್ ಆಗಿದೆ.. ತಮಿಳುನಾಡಿನಲ್ಲೂ ಬೀಸ್ಟ್ ಮುಂದೆ KGF 2 ಅಬ್ಬರಿಸುತ್ತಿದೆ.. ಬೀಸ್ಟ್ ಸಿನಿಮಾಗೆ ಹೇಳಿಕೊಳ್ಳುವಂತಹ ಉತ್ತಮ ರೆಸ್ಪಾನ್ಸ್ ಸಿಗ್ತಿಲ್ಲ.. ವಿಜಯ್ ಅವರ ಅಪಿಯರೆನ್ಸ್ ಅವರ ನಟನೆಗೆ ಫುಲ್ ಮಾರ್ಕ್ಸ್ ಸಿಕ್ರೂ ,,, ಸಿನಿಮಾ ಬಗ್ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿಲ್ಲ..
ಈ ರೀತಿ ಬೆಟ್ಟದಷ್ಟು ನಿರೀಕ್ಷೆ ಹುಟ್ಟುಹಾಕಿ ಟುಸಸ್ ಆದ ಬೀಸ್ಟ್ ಸಿನಿಮಾ ದಳಪತಿ ಅಭಿಮಾನಿಗಳ ಡಿಸಪಾಯಿಂಟ್ ಮೆಂಟ್ ಗೆ ಕಾರಣವಾಗಿದೆ..
ದಳಪತಿ ವಿಜಯ್ ಬೀಸ್ಟ್ ಆರಂಭಿಕ ವಾರಾಂತ್ಯದಲ್ಲಿ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನವನ್ನು ಕಂಡಿತು. ಎರಡನೇ ವಾರದಲ್ಲಿ ಚಿತ್ರವು ವೇಗವನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿತ್ತು.
KGF 2 ಜೊತೆಗೆ ತೀವ್ರ ಸ್ಪರ್ಧೆ ಬೀಸ್ಟ್ ಗೆ ದೊಡ್ಡ ಹೊಡೆತ ನೀಡಿದೆ..
ಅಂದ್ಹಾಗೆ ವಿಜಯ್ ಮತ್ತು ಪೂಜಾ ಹೆಗ್ಡೆಯವರ Beast ಈಗ ಒಟಿಟಿಯಲ್ಲಿ ಮೊಡಿ ಮಾಡಲು ಬರುತ್ತಿದೆ. ದಳಪತಿ ವಿಜಯ್ ಅವರ ಇತ್ತೀಚಿನ ಚಿತ್ರ ಬೀಸ್ಟ್ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರವು ಮೇ 11 ರಿಂದ OTT ಪ್ಲಾಟ್ಫಾರ್ಮ್ನಲ್ಲಿ ಸ್ಟ್ರೀಮಿಂಗ್ ಪ್ರಾರಂಭವಾಗುತ್ತದೆ.
ಬಿಡುಗಡೆಯಾದ ಆರು ದಿನಗಳಲ್ಲಿ 200 ಕೋಟಿ ರೂ.ಗಳನ್ನು ಗಳಿಸುವಲ್ಲಿ ಯಶಸ್ವಿಯಾದ ಚಿತ್ರವು ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಯಿತು.
ವರದಿಗಳ ಪ್ರಕಾರ, ಬೀಸ್ಟ್ ವಿಶ್ವಾದ್ಯಂತ 240 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಈ ಚಿತ್ರವು ಮೆರ್ಸಲ್, ಸರ್ಕಾರ್ ಮತ್ತು ಬಿಗಿಲ್ ನಂತರ 250 ಕೋಟಿ ಕಲೆಕ್ಷನ್ ಮಾಡಿದ ವಿಜಯ್ ಅವರ ನಾಲ್ಕನೇ ಚಿತ್ರವಾಗಿದೆ.