ತಮಿಳಿನ ಸ್ಟಾರ್ ನಟ ಧನುಷ್ ಅವರು ಆಗಾಗ ಪೋಷಕರ ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ.. ಧನುಷ್ ತಂದೆ ತಾಯಿ ಯಾರು ಎಂಬ ಚರ್ಚೆ ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತೆ.. ಇದೀಗ ಮತ್ತೊಮ್ಮೆ ಇದೇ ವಿಚಾರದಿಂದ ಸುದ್ದಿಯಲ್ಲಿದ್ಧಾರೆ..
ಅಂದ್ಹಾಗೆ ನಾವು ನಟ ಧನುಷ್ ತಂದೆ ತಾಯಿ ಎಂದು ಹೇಳಿಕೊಂಡಿರುವ ವೃದ್ಧ ದಂಪತಿ ಇದೀಗ ಕೋರ್ಟ್ ಮೊರೆ ಹೋಗಿದೆ.. ಈ ವಿಚಾರವಾಗಿ, ಮದ್ರಾಸ್ ಹೈಕೋರ್ಟ್ ಧನುಷ್ಗೆ ಸಮನ್ಸ್ ನೀಡಿದೆ.
ಧನುಷ್ ನಮ್ಮ ಮಗ ಎಂದು ಕತೀರೇಸನ್ ಮತ್ತು ಮೀನಾಕ್ಷಿ ಎಂಬ ದಂಪತಿ ಹೇಳಿದ್ದಾರೆ. ಕಳೆದ 6 ವರ್ಷಗಳ ಹಿಂದೆ ಮದುರೈ ಜಿಲ್ಲೆಯ ಮೆಲೂರ್ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಈ ಕುರಿತು ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಜೀವನ ನಿರ್ವಹಣೆಗೆ ಮಗ ಧನುಷ್ ಪ್ರತಿ ತಿಂಗಳು 65 ಸಾವಿರ ಕೊಡಬೇಕೆಂದು ಮನವಿ ಸಲ್ಲಿಸಿದ್ದಾರೆ. ಈ ಪ್ರಕರಣ ಕಳೆದ 6 ವರ್ಷಗಳಿಂದ ಸಾಗುತ್ತಿದೆ.
ಕತಿರೇಸನ್ ಮತ್ತು ಮೀನಾಕ್ಷಿ ದಂಪತಿಗೆ ಧನುಷ್ 3 ನೇ ಮಗನಾಗಿದ್ದು, ನಟನಾಗುವ ಇಚ್ಛೆಯಿಂದ ಮನೆಯಿಂದ ಪರಾರಿಯಾಗಿದ್ದಾನೆ. ನಾವೇ ಅವನ ನಿಜವಾದ ತಂದೆ ತಾಯಿ. ಇದಕ್ಕೆ ಜನನ ಪ್ರಮಾಣ ಪತ್ರ ಮತ್ತು ಎಸ್ಎಸ್ಎಲ್ಸಿ ಮೆಮೋಗಳಿವೆ ಎಂದು ಸಾಕ್ಷಿ ನೀಡಿದ್ದಾರೆ.
ಇನ್ನು ಈ ಬಗ್ಗೆ ಪಿತೃತ್ವ ಪರೀಕ್ಷೆ ಮಾಡಬೇಕು ಎಂದು ಡಿಮ್ಯಾಂಡ್ ಮಾಡಲಾಗಿತ್ತು. ಆದರೆ ಕೋರ್ಟ್ ಆದೇಶದ ಬಳಿಕ ಇದರಲ್ಲಿ ಸತ್ಯಾಂಶವಿಲ್ಲ ಎಂಬುದು ದೃಢಪಟ್ಟಿತ್ತು. 2020ರಲ್ಲಿ ಈ ಕೇಸ್ ಅನ್ನು ರದ್ದು ಮಾಡಲಾಗಿತ್ತು. ಇದೀಗ ಈ ಆದೇಶವನ್ನು ರದ್ದು ಮಾಡಬೇಕೆಂದು ವೃದ್ಧ ದಂಪತಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಸದ್ಯ ಕೋರ್ಟ್ ಧನುಷ್ಗೆ ಸಮನ್ಸ್ ನೀಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಪೊಲೀಸಲು ಧನುಷ್ ಸಲ್ಲಿಸಿರುವ ಸಾಕ್ಷ್ಯಗಳ ಸೂಕ್ತ ತನಿಖೆ ನಡೆಸಬೇಕೆಂದು ನ್ಯಾಯಾಲಯ ತಿಳಿಸಿದೆ.
KGF 2 : ಸದ್ಯದಲ್ಲೇ ದಂಗಲ್ ರೆಕಾರ್ಡ್ ಬ್ರೇಕ್ ..!! 20ನೇ ರಾಕಿ ಭಾಯ್ ಹವಾ ಕಡಿಮೆಯಾಗಿಲ್ಲ..!!