KGF 2 : ಸದ್ಯದಲ್ಲೇ ದಂಗಲ್ ರೆಕಾರ್ಡ್ ಬ್ರೇಕ್ ..!! 20ನೇ ರಾಕಿ ಭಾಯ್ ಹವಾ ಕಡಿಮೆಯಾಗಿಲ್ಲ..!!
ಬಾಲಿವುಡ್ ಬಾಕ್ಸ್ ಆಫೀಸ್ ಶೇಕ್ ಮಾಡಿ ಅಲ್ಲಿನ ಸಿನಿಮಾಗಳಿಗೂ ಸೋಲಿನ ರುಚಿ ತೋರಿಸಿ ಈಗಲೂ ಅಬ್ಬರಿಸುತ್ತಿರುವ KGF 2 ಇನ್ನೇನು ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಅವರ ದಂಗಲ್ ಸಿನಿಮಾದ ರೆಕಾರ್ಡ್ ಮುರಿದು ಹಾಕಲಿದೆ..
ಹೌದು ಈಗಾಗಲೇ ಬಾಲಿವುಡ್ ನಲ್ಲಿ KGF 2 ಸಿನಿಮಾ 373 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕೆಲಕ್ಷನ್ ಮಾಡಿದೆ..
ಪ್ರಶಾಂತ್ ನೀಲ್ ನಿರ್ದೇಶನದ KGF 2 ವಿಶ್ವಾದ್ಯಂತ 1100 ಕೋಟಿ ಗಳಿಕೆಯತ್ತ ಸಾಗಿದೆ..
ಯಶ್ ನಟನೆಯ ಕೆಜಿಎಫ್ 2 ಇನ್ನೂ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಈದ್ ಹಬ್ಬದಂದು ಚಿತ್ರ ಕಲೆಕ್ಷನ್ ನಲ್ಲಿ ಏರಿಕೆ ಕಂಡಿದೆ. ಕೆಜಿಎಫ್ನ ಹಿಂದಿ ಆವೃತ್ತಿ 20 ನೇ ದಿನದಂದು ಭಾರತದಲ್ಲಿ ರೂ 9 ಕೋಟಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.
ಭಾರತದಲ್ಲಿ ಅಜಯ್ ದೇವಗನ್ ಅವರ ರನ್ವೇ 34 ಮತ್ತು ಟೈಗರ್ ಶ್ರಾಫ್ ಅವರ ಹೀರೋಪಂತಿ 2 ರ ಕಲೆಕ್ಷನ್ ಕ್ರಮವಾಗಿ 4 ಕೋಟಿ ಮತ್ತು 2.50 ಕೋಟಿ ರೂ. ಇದೆ.. ಅಂದ್ರೆ 3 ನೇ ದಿನದ ಇವೆರೆಡೂ ಸಿನಿಮಾಗಳ ಒಟ್ಟಾರೆ ಕಲೆಕ್ಷಷನ್ ಗಿಂತ ಅಧಿಕ KGF 2 ಏಕಾಂಗಿಯಾಗಿ ಅದು ಕೂಡ 20 ನೇ ದಿನದಲ್ಲಿ ಮಾಡಿರುವುದು ಬಾಲಿವುಡ್ ಗೆ ಭಯ ಹುಟ್ಟಿಸಿದೆ..