ಬಾಲಿವುಡ್ ಬಾಕ್ಸ್ ಆಫೀಸ್ ಶೇಕ್ ಮಾಡಿ ಅಲ್ಲಿನ ಸಿನಿಮಾಗಳಿಗೂ ಸೋಲಿನ ರುಚಿ ತೋರಿಸಿ ಈಗಲೂ ಅಬ್ಬರಿಸುತ್ತಿರುವ KGF 2 ಇನ್ನೇನು ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಅವರ ದಂಗಲ್ ಸಿನಿಮಾದ ರೆಕಾರ್ಡ್ ಮುರಿದು ಹಾಕಲಿದೆ..
ಹೌದು ಈಗಾಗಲೇ ಬಾಲಿವುಡ್ ನಲ್ಲಿ KGF 2 ಸಿನಿಮಾ 373 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕೆಲಕ್ಷನ್ ಮಾಡಿದೆ.. ಪ್ರಶಾಂತ್ ನೀಲ್ ನಿರ್ದೇಶನದ KGF 2 ವಿಶ್ವಾದ್ಯಂತ 1100 ಕೋಟಿ ಗಳಿಕೆಯತ್ತ ಸಾಗಿದೆ..
ಯಶ್ ನಟನೆಯ ಕೆಜಿಎಫ್ 2 ಇನ್ನೂ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಈದ್ ಹಬ್ಬದಂದು ಚಿತ್ರ ಕಲೆಕ್ಷನ್ ನಲ್ಲಿ ಏರಿಕೆ ಕಂಡಿದೆ. ಕೆಜಿಎಫ್ನ ಹಿಂದಿ ಆವೃತ್ತಿ 20 ನೇ ದಿನದಂದು ಭಾರತದಲ್ಲಿ ರೂ 9 ಕೋಟಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.
ಅಂದ್ಹಾಗೆ ಇಂದು ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್ ಗೋವಾ ಮುಖ್ಯಮಂತ್ರಿ ಡಾ ಪ್ರಮೋದ್ ಸಾವಂತ್ ಅವರನ್ನು ಪಣಜಿಯಲ್ಲಿ ಭೇಟಿಯಾಗಿದ್ದಾರೆ.
ಕೆಜಿಎಫ್ ಸೂಪರ್ಸ್ಟಾರ್ @TheNameIsYash ಅವರನ್ನು ಅವರ ಪತ್ನಿ ರಾಧಿಕಾ ಮತ್ತು ತಂಡದೊಂದಿಗೆ ಪಣಜಿಯಲ್ಲಿ ಭೇಟಿಯಾಗಿದ್ದು ಸಂತೋಷವಾಗಿದೆ” ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ. ಆದರೇ ಬೇಟಿಯ ಉದ್ದೇಶ ನು ಎಂಬುದು ಇನ್ನೂ ತಿಳಿದು ಬಂದಿಲ್ಲ.
ಅವರು ಟ್ವೀಟ್ ಮಾಡಿರುವ ಪೋಟೋಗಳಲ್ಲಿ ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯ ವೆಂಕಟ್ ಕೊಣಂಕಿ ಅವರು ಸಹ ಹಾಜರಾಗಿದ್ದರು, ಇದನ್ನ ಗಮನಿಸಿದ ಅಭಿಮಾನಿಗಳ ಮನದಲ್ಲಿ ಪ್ರಶ್ನೆಯೊಂದು ಕಾಡುತ್ತಿದೆ. ಯಶ್ ಮುಂದಿನ ಸಿನಿಮಾಗೂ ಕೆವಿಎನ್ ಪ್ರೊಡಕ್ಷನ್ ಗೂ ಏನಾದರೂ ಲಿಂಕ್ ಇದೆಯಾ ಎಂದು ಅಭಿಮಾನಿಗಳು ತಲೆಕೆಡಸಿಕೊಂಡಿದ್ದಾರೆ.